ಸೋಮವಾರ, ಜೂನ್ 21, 2021
29 °C

ಬ್ರಿಟನ್ ಮಾಧ್ಯಮದ ವರದಿ:ಕಾಲ್ ಸೆಂಟರ್‌ಗಳಿಂದ ಮಾಹಿತಿ ಸೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ):  ಭಾರತದ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಭ್ರಷ್ಟ ಕೆಲಸಗಾರರು ಬ್ರಿಟನ್ ಗ್ರಾಹಕರ ಗೋಪ್ಯ ವೈಯಕ್ತಿಕ ಮಾಹಿತಿಗಳನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ಕ್ರೆಡಿಟ್ ಕಾರ್ಡ್ ವಿವರ, ವೈದ್ಯಕೀಯ ವಿವರ ಹಾಗೂ ಸಾಲದ ಅಂಕಿಅಂಶ ಸೇರಿದಂತೆ  ಬ್ರಿಟನ್ ಗ್ರಾಹಕರ ವೈಯಕ್ತಿಕ ವಿವರಗಳನ್ನು ಈ ಕೆಲಸಗಾರರು ಮಾರಾಟ ಮಾಡುತ್ತಿದ್ದಾರೆ ಎಂದು `ಸಂಡೇ ಟೈಮ್ಸ~ ವರದಿ ಮಾಡಿದೆ.ತಾನು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, 5 ಲಕ್ಷಕ್ಕೂ ಹೆಚ್ಚು ಬ್ರಿಟನ್ ನಾಗರಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಪತ್ರಿಕೆ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.