ಮಂಗಳವಾರ, ಮೇ 24, 2022
27 °C

ಬ್ರಿಟಿಷ್ ಶಾಲೆಯಲ್ಲಿ ಸ್ಕರ್ಟ್ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ):  ಇನ್ನು ಮುಂದೆ ಬ್ರಿಟನ್‌ನಲ್ಲಿ ಬಾಲಕಿಯರು ಶಾಲೆಗೆ ಸ್ಕರ್ಟ್‌ಗಳನ್ನು ತೊಟ್ಟು ಬರುವಂತಿಲ್ಲ...? ಆಶ್ಚರ್ಯವೇ, ಹೌದು..! ಬ್ರಿಟಿಷ್ ಶಾಲೆಯೊಂದು ಬಾಲಕಿಯರು ಧರಿಸುವ ಸ್ಕರ್ಟ್ (ಲಂಗ)ಗಳ ಮೇಲೆ ನಿಷೇಧ ಹೇರಿದೆ.ಬ್ರಿಟನ್‌ನೆಲ್ಲಡೆ ಅಲ್ಲ, ಇಲ್ಲಿನ ಬ್ರಿಟಿಷ್ ಶಾಲೆಯಲ್ಲಿ ಮಾತ್ರ ಸ್ಕರ್ಟ್‌ಗಳನ್ನು ನಿಷೇಧಿಸಲಾಗಿದೆ. ಇದರಿಂದ ಪರ ಮತ್ತು ವಿರೋಧದ ಹೇಳಿಕೆಗಳು ವ್ಯಕ್ತವಾಗಿವೆ. `ಬಾರ್ ಮತ್ತು ರಾತ್ರಿ ಕ್ಲಬ್‌ಗಳಿಗೆ ತೆರಳುವವರುಸ್ಕರ್ಟ್‌ಗಳನ್ನು ತೊಡುವಂತೆ ಶಾಲೆಗೂ ಸ್ಕರ್ಟ್ ತೊಟ್ಟುಬರುವುದು ಅಸಹನೀಯ~ ಎಂದು ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ. ತೊಡೆಗಳವರೆಗಿನ ಉಡುಪು ಧರಿಸುವುದು ಮಕ್ಕಳಲ್ಲಿ ಲೈಂಗಿಕ ಆಸಕ್ತಿಯನ್ನು ಕೆರಳಿಸುತ್ತದೆ ಇದರಿಂದ ವಿದ್ಯಾಭಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಬ್ರಿಟಿಷ್ ಶಾಲೆ ಹೇಳಿದೆ.

 

ಈ ನಿಷೇಧವನ್ನು ಕೆಲವರು ವಿರೋಧಿಸಿದ್ದು, ಮೊಣಕಾಲಿನವರೆಗೂ ಉದ್ದನೆಯ ಸ್ಕರ್ಟ್ ಧರಿಸಲು ಅವಕಾಶ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.