ಗುರುವಾರ , ಫೆಬ್ರವರಿ 25, 2021
24 °C

ಬ್ರೈನೋಬ್ರೇನ್ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರೈನೋಬ್ರೇನ್ ಉತ್ಸವ

ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಬ್ರೈನೋಬ್ರೇನ್ ಉತ್ಸವ, ಅದ್ಭುತ ಗಣಿತ ಸಾಮರ್ಥ್ಯಕ್ಕೆ ವೇದಿಕೆ ಒದಗಿಸಿತು.ಈ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ  ಸುಮಾರು ಒಂದು ಸಾವಿರ ಮಕ್ಕಳು ಪಾಲ್ಗೊಂಡಿದ್ದರು.ವಿವಿಧ ಸ್ಪರ್ಧೆಗಳಲ್ಲಿ ಗಳಿಸಿದ ಬಹುಮಾನಗಳ ಆಧಾರದ ಮೇಲೆ ಉತ್ತಮ ಕೇಂದ್ರದ ಆಯ್ಕೆ ನಡೆಯಿತು. ಗುಬ್ಬಿ ಕೇಂದ್ರ 26 ಚಾಂಪಿಯನ್ ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿತು. ಸುಬ್ರಮಣ್ಯನಗರ ಕೇಂದ್ರ (23) ಎರಡನೇ ಸ್ಥಾನ ಪಡೆದರೆ, ರಾಜಾಜಿನಗರ (16) ಮೂರನೇ ಸ್ಥಾನ ಪಡೆಯಿತು.ವಿಜಯಿ ಮಕ್ಕಳಿಗೆ ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ಅವರು ಬಹುಮಾನಗಳನ್ನು ವಿತರಿಸಿದರು. ಡಾ.ಬಿ.ಎಂ. ಹೆಗ್ಡೆ, ಅರುಳ್ ಸುಬ್ರಮಣ್ಯ, ರಾಮಕೃಷ್ಣ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.