ಶನಿವಾರ, ಫೆಬ್ರವರಿ 27, 2021
31 °C
ಎಸ್.ಎಸ್‌. ಮಂಜುನಾಥ್ ಸ್ಮರಣಾರ್ಥ ಪ್ರೊ ಕಬಡ್ಡಿ ಲೀಗ್

ಭಗತ್ ಸಿಂಗ್ ವಾರಿಯರ್ಸ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಗತ್ ಸಿಂಗ್ ವಾರಿಯರ್ಸ್‌ಗೆ ಜಯ

ದಾವಣಗೆರೆ: ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಗೆ ಪ್ರೊಕಬಡ್ಡಿ ಲೀಗ್ ಎರಡನೇ ದಿನವಾದ ಶುಕ್ರವಾರವೂ ಮನರಂಜನೆ ಸಿಕ್ಕಿತು. ಕೆ.ಟಿ.ಜಿ ಭಗತ್ ಸಿಂಗ್ ವಾರಿಯರ್ಸ್ ತಂಡ 31 –25 ಅಂಕಗಳಿಂದ ಭರತ್ ಗ್ರೂಪ್ ತಂಡವನ್ನು ಸೋಲಿಸಿ, ದಿನದ ಎರಡನೇ ಗೆಲುವು ಸಾಧಿಸಿತು.ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕಬಡ್ಡಿ ಆಟಗಾರ ಎಸ್.ಎಸ್.ಮಂಜುನಾಥ್ ಸ್ಮರಣಾರ್ಥ ನಡೆಯುತ್ತಿರುವ ಕಬಡ್ಡಿ ಲೀಗ್ ಪಂದ್ಯದಲ್ಲಿ ಭಗತ್ ಸಿಂಗ್ ವಾರಿಯರ್ಸ್ ತಂಡದ ಅಂಜುನಾಯ್ಕ ಉತ್ತಮ ರೈಡಿಂಗ್ ಗಾಗಿ ಮತ್ತು ಇದೇ ತಂಡದ ಸುನೀಲ್ ಉತ್ತಮ ರಕ್ಷಣೆ ಆಟಕ್ಕಾಗಿ ವೈಯಕ್ತಿಕ ಬಹುಮಾನ ಗಳಿಸಿದರು. ಇದಕ್ಕೆ ಮೊದಲು, ಭಗತ್ ಸಿಂಗ್ ವಾರಿಯರ್ಸ್ ತಂಡ 19–13 ಅಂಕಗಳಿಂದ ಎನ್ ಸಿ ಟೈಗರ್ ತಂಡವನ್ನು ಸೋಲಿಸಿತು.ರೋಚಕ ಹಣಾಹಣಿ ಕಂಡ ಇನ್ನೊಂದು ಲೀಗ್ ಪಂದ್ಯದಲ್ಲಿ ಎಬಿಎಂ ಬುಲ್ಸ್ ತಂಡ 27 –23 ಅಂಕಗಳಿಂದ ಎನ್ ಸಿ ಟೈಗರ್ ತಂಡವನ್ನು ಮಣಿಸಿತು. ಎನ್‌ಸಿ ಟೈಗರ್ ತಂಡದ ಕಿರಣ್ ಉತ್ತಮ ದಾಳಿಗಾರ ಮತ್ತು ಬುಲ್ಸ್ ತಂಡದ ಬಾಬು ಉತ್ತಮ ರಕ್ಷಣೆ ಆಟಗಾರ ಗೌರವಕ್ಕೆ ಪಾತ್ರರಾದರು. ಪವನ್ ಶಾಮನೂರು ತಂಡ ರೋಚಕ ಅಂತ್ಯ ಕಂಡು ಎರಡು ಪಂದ್ಯಗಳಲ್ಲಿ 1 ಪಾಯಿಂಟ್ ಅಂತರದಿಂದ ಜಯಗಳಿಸಿತು.ದಿನದ ಮೊದಲ ಪಂದ್ಯದಲ್ಲಿ ಶಾಮನೂರು ತಂಡ 27–26ರಲ್ಲಿ ಭಗತ್ ಸಿಂಗ್ ವಾರಿಯರ್ಸ್ ತಂಡವನ್ನು ಸೋಲಿಸಿತು. ವಿರಾಮದ ವೇಳೆ ಶಾಮನೂರು ತಂಡ 6 ಪಾಯಿಂಟ್ ಗಳ ಹಿನ್ನಡೆಯಲ್ಲಿತ್ತು. ನಂತರ ಇನ್ನೊಂದು ಪಂದ್ಯದಲ್ಲಿ ಶಾಮನೂರು ತಂಡ 25 –24ರಲ್ಲಿ ಕೆಟಿಆರ್ ಗ್ರೂಪ್ ತಂಡವನ್ನು ಸೋಲಿಸಿತು. ವಿರಾಮದ ವೇಳೆ ಶಾಮನೂರು ತಂಡ 2 ಪಾಯಿಂಟ್ ಗಳಲ್ಲಿ (8–10) ಹಿನ್ನಡೆಯಲ್ಲಿತ್ತು.ಇತರ ಪಂದ್ಯಗಳಲ್ಲಿ ಕಟ್ಟೆ ಬಾಯ್ಸ್ ತಂಡ 22– 15ರಲ್ಲಿ ಕೆಟಿಆರ್ ಗ್ರೂಪ್ ತಂಡವನ್ನು; ಭರತ್ ಗ್ರೂಪ್ 33– 27ರಲ್ಲಿ, ಎಬಿಎಂ ಬುಲ್ಸ್ ತಂಡವನ್ನು; ಕಟ್ಟೆ ಬಾಯ್ಸ್ 39–22ರಲ್ಲಿ ಭಗತ್ ಸಿಂಗ್ ವಾರಿಯರ್ಸ್ ತಂಡವನ್ನು ಸೋಲಿಸಿತು.ಪರದಾಟ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರಜೆಯಿದ್ದ ಕಾರಣ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪೊಲೀಸರು ಮತ್ತು ವ್ಯವಸ್ಥಾಪಕರು ಪ್ರೇಕ್ಷಕರನ್ನು ನಿಯಂತ್ರಿಸಲು ಪರದಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.