ಮಂಗಳವಾರ, ಮೇ 18, 2021
30 °C

ಭದ್ರತಾ ಪಡೆ ಜತೆ ಉಗ್ರರ ಕಾಳಗ: 15 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಭದ್ರತಾ ಪಡೆ ಹಾಗೂ ಉಗ್ರರ ಮಧ್ಯೆ ನಡೆದ ಭಾರಿ ಕಾಳಗದಲ್ಲಿ ತಾಲಿಬಾನ್ ನಿಗ್ರಹ ಪಡೆಯ ಸದಸ್ಯರು ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದ ಹಿಂಸಾಪೀಡಿತ ಖೈಬರ್ ಬುಡಕಟ್ಟು ಪ್ರದೇಶದಲ್ಲಿ ಭಾನುವಾರ ನಡೆದಿದೆ. ಭದ್ರತಾ ಪಡೆ ಹಾಗೂ ತಾಲಿಬಾನ್ ನಿಗ್ರಹ ಪಡೆಯ ಸ್ವಯಂಸೇವಕರ ಕಾವಲಿನಲ್ಲಿದ್ದ ತಪಾಸಣಾ ಕೇಂದ್ರದ ಮೇಲೆ  ಉಗ್ರರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಆಕ್ರಮಣಕ್ಕೆ ಮುಂದಾದರು. ಪರಸ್ಪರ ಕಾಳಗದಲ್ಲಿ ತಾಲಿಬಾನ್ ನಿಗ್ರಹ ಪಡೆಯ ಐವರು ಸದಸ್ಯರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.ಘಟನಾ ಸ್ಥಳಕ್ಕೆ ಧಾವಿಸಿದ ನೂರಾರು ಬುಡಕಟ್ಟು ವಾಸಿಗಳು ಪ್ರತಿದಾಳಿ ನಡೆಸಿದಾಗ 10 ಉಗ್ರರು ಮೃತಪಟ್ಟರು. ಅನೇಕ ತಾಸುಗಳ ಕಾಲ ನಡೆದ ದಾಳಿಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರೂ ಸತ್ತಿರುವುದಾಗಿ ವರದಿಗಳು ಹೇಳಿವೆ. ಉಗ್ರರ ಪತ್ತೆಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಖೈಬರ್ ಪ್ರಾಂತ್ಯದಲ್ಲಿ ನಿಷೇಧಿತ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಹಾಗೂ ಲಷ್ಕರ್-ಎ-ಇಸ್ಲಾಂ ಸಂಘಟನೆಗಳು ಸಕ್ರಿಯವಾಗಿದ್ದು, ಭದ್ರತಾಪಡೆ ಹಾಗೂ ಸರ್ಕಾರದ ಪರ ಬುಡಕಟ್ಟುವಾಸಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.