ಗುರುವಾರ , ಏಪ್ರಿಲ್ 15, 2021
28 °C

ಭದ್ರಾವತಿ- ಶೃಂಗೇರಿ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಭದ್ರಾವತಿಯಿಂದ ಎನ್.ಆರ್.ಪುರದ ಮೂಲಕ ಶೃಂಗೇರಿಗೆ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಸಂಸದ ಕೆ.ಜಯಪ್ರಕಾಶ್‌ಹೆಗ್ಡೆ ತಿಳಿಸಿದರು.ಇಲ್ಲಿನ ಕೃಷಿಭವನದಲ್ಲಿ ಮಂಗಳವಾರ ಪ್ರತಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.  ರೈಲ್ವೆ ಸಲಹಾ ಸಮಿತಿಯಲ್ಲಿ ಸದಸ್ಯರಾರಿಗುವುದರಿಂದ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.ಪಶ್ಚಿಮಘಟ್ಟವನ್ನು ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಯುನೆಸ್ಕೊ ಪಶ್ಚಿಮಘಟ್ಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವವಿಟ್ಟಿದೆ ಅದನ್ನು ಸೇರಿಸಿಲ್ಲ. ಯಾವುದೇ ಯೋಜನೆಗಳು ಚರ್ಚೆಗಳ ಮೂಲಕ ಅನುಷ್ಠಾನ ವಾಗಬೇಕು. ಈ ಬಗ್ಗೆ ಸರಿಯಾದ ಮಾಹಿತಿ ತಿಳಿದು ಬಿಜೆಪಿ ಸರ್ಕಾರ ಮಾತನಾಡಲಿ ಎಂದರು.ಭದ್ರಾ ಮತ್ತು ಕುದುರೆಮುಖ ಅಭಯಾ ರಣ್ಯವನ್ನುಹುಲಿ ಯೋಜನೆಗೆ ಸೇರಿಸಿ ರಾಜ್ಯ ಸರ್ಕಾರ  ಫೆಬ್ರುವರಿ 2011ರಲ್ಲಿ ರಾಜ್ಯಪತ್ರ ಹೋರಡಿಸಿದೆ. ಇದನ್ನು ಕೈ ಬಿಡುವ ಬಗ್ಗೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಅದರೆ ಇದನ್ನು ಕೈಬಿಟ್ಟಿರುವ ಬಗ್ಗೆ ಡಿನೋಟಿಫಿಕೇಶನ್ ಮಾಡಿ ರಾಜ್ಯ ಪತ್ರ ಹೊರಡಿಸಿಲ್ಲ. ಈ ಬಗ್ಗೆ ಶಾಸಕರು ತಿಳಿದು ಹೇಳಿಕೆ ನೀಡುವುದು ಒಳ್ಳೆಯದು ಜನರಲ್ಲಿ ಗೊಂದಲ ಮೂಡಿಸುವುದು ಬೇಡ ಎಂದು ಸಲಹೆ ನೀಡಿದರು.     

  

ವಿಧಾನಪರಿಷತ್ ಸದಸ್ಯೆ ಮೋಟಮ್ಮ, ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಬಿ.ಸಿ.ಗೀತಾ, ಟಿ.ವಿ. ರಾಜು, ವಸಂತ ಕುಮಾರ್, ಸೈಯದ್ ಖಲೀಲ್ ಸಾಹೇಬ್, ಅಬೂಬಕರ್ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.