ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ನಾಲ್ಕು ವಲಯಗಳಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ಇಲಾಖೆ ನಿಷ್ಕ್ರೀಯವಾಗಿದೆ. ಹಲವು ದಿನಗಳಿಂದ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅನೇಕ ಅರಣ್ಯೇತರ ಚಟುವಟಿಕೆಗಳು ನಡೆಯುತ್ತಿದ್ದರೂ ಕೂಡಾ ಇಲಾಖೆ ಅಧಿಕಾರಿಗಳು ಗಮನಹರಿಸದಿರುವುದು ಅನುಮಾನಕ್ಕೆ ಎಡೆಮಾಡಿದೆ.

ದಿನೇ ದಿನೇ ಸಂರಕ್ಷಣೆಯಿಂದ ದೂರವಾಗುತ್ತಿರುವ ಅಭಯಾರಣ್ಯವನ್ನು ರಕ್ಷಿಸಲು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಅರಣ್ಯ ಸಚಿವರು ಮುಂದಾಗಬೇಕು ಎಂದು ಸ್ಥಳೀಯ ಪರಿಸರಾಸಕ್ತರು ಆಗ್ರಹಿಸಿದ್ದಾರೆ.

ಅಭಯಾರಣ್ಯದ ನಾಲ್ಕು ವಲಯಗಳಲ್ಲಿ ರಸ್ತೆ ನಿರ್ಮಾಣ. ಕಲ್ವರ್ಟ್ಗಳ ನಿರ್ಮಾಣ. ಕಟ್ಟಡಗಳ ನಿರ್ಮಾಣ. ಚೆಕ್ಡ್ಯಾಂಗಳ ನಿರ್ಮಾಣ, ಕೆರೆ ನಿರ್ಮಾಣ ಇನ್ನಿತರೆ ಚಟುವಟಿಕೆ ಕೈಗೊಳ್ಳುವ ಮೂಲಕ ಅಭಯಾರಣ್ಯದ ಪ್ರಶಾಂತತೆಗೆ ಧಕ್ಕೆ ಉಂಟುಮಾಡಿದ್ದು, ವನ್ಯಜೀವಿಗಳ ನೆಮ್ಮದಿಗೆ ಭಂಗವಾಗಿದೆ. ಇಟಾಚಿ, ಜೆಸಿಬಿ ಮುಂತಾದ ಯಂತ್ರಗಳನ್ನು ಬಳಸಿ ಅಭಯಾರಣ್ಯದ ಕೋರ್ಜೋನ್ಗಳಲ್ಲಿ ಹಗಲು-ರಾತ್ರಿ ಕೆಲಸ ಮಾಡಲಾಗುತ್ತಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಸ್ಪಷ್ಟ ಉಲ್ಲಂಘನೆ. ಯಂತ್ರಗಳನ್ನು ಅಭಯಾರಣ್ಯದಲ್ಲಿ ಬಳಸುವುದು ನಿಷಿದ್ಧವಾದರೂ ಅಧಿಕಾರಿಗಳೇ ಇದನ್ನು ಬಳಸಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯ ಪರಿಸರಾಸಕ್ತರು ದೂರಿದ್ದಾರೆ.

ಮುತ್ತೋಡಿ ವಲಯದಲ್ಲಿ 10 ಕಿ.ಮೀ.ಗೂ ಅಧಿಕ ರಸ್ತೆ ಕಾಮಗಾರಿ, ಕಲ್ವರ್ಟ್ ನಿರ್ಮಾಣ, ಕಟ್ಟಡಗಳ ನಿರ್ಮಾಣ ನಡೆಯುತ್ತಿದೆ. ಹೆಬ್ಬೆ ವಲಯದಲ್ಲಿ 15 ಕಿ.ಮೀ.ಗೂ ಅಧಿಕ ಉದ್ದದ ರಸ್ತೆ ನಿರ್ಮಿಸಲಾಗುತ್ತಿದ್ದು, ಕಲ್ವರ್ಟ್ ಹಾಗೂ ಒಳಚರಂಡಿ ಮತ್ತು ಅಲ್ಲಲ್ಲಿ ಚೆಕ್ಡ್ಯಾಂ ಹಾಗೂ ಕೆರೆ ನಿರ್ಮಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ಲಕ್ಕವಳ್ಳ ವಲಯದ ಮುಖ್ಯ ದ್ವಾರದಿಂದ 10 ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಅಲ್ಲಲ್ಲಿ ಚರಂಡಿಗಳ ನಿರ್ಮಾಣ, ಸಣ್ಣ ಸೇತುವೆಗಳ ನಿರ್ಮಾಣ ಭರದಿಂದ ಸಾಗುತ್ತಿದೆ ಎಂದು ದೂರಿದ್ದಾರೆ.

ತಣಿಗೆಬೈಲು ವಲಯದಲ್ಲಿ 8 ಕಿ.ಮೀ.ಕ್ಕೂ ಅಧಿಕ ರಸ್ತೆ, ಸಣ್ಣ ಸಣ್ಣ ಕಲ್ವರ್ಟ್, ಕಟ್ಟಡಗಳ ನಿರ್ಮಾಣ ನಿರಾತಂಕವಾಗಿ ಸಾಗುತ್ತಿದೆ. ಈ ಎಲ್ಲ ಕಾಮಗಾರಿಗಳನ್ನು ಯಂತ್ರ, ಟ್ರ್ಯಾಕ್ಟರ್, -ಲಾರಿ ಇತ್ಯಾದಿ ವಾಹನಗಳಿಂದ ನಡೆಸಲಾಗುತ್ತಿದೆ. ಈ ಕಾಮಗಾರಿಗಳನ್ನು ಕೈಗೊಳ್ಳಲು ಅಭಯಾರಣ್ಯವನ್ನು ಪ್ರವಾಸಿಗರ ವೀಕ್ಷಣೆಗೆ ಮುಚ್ಚಲಾಗಿದೆ. ಹಣಕಾಸು ವರ್ಷದ ಕೊನೆ ತಿಂಗಳು ಆಗಿರುವುದರಿಂದ ತರಾತುರಿಯಲ್ಲಿ ಕಾಮಗಾರಿಗಳನ್ನು ಮಾಡಿ ಮುಗಿಸುವ ಕಾರ್ಯದಲ್ಲಿ ವನ್ಯಜೀವಿ ವಿಭಾಗ ತಲ್ಲೀನವಾಗಿದೆ ಎಂದು ಆರೋಪಿಸಿದ್ದಾರೆ.

ಬೇಸಿಗೆಯಾದರೂ ಕೂಡಾ ಬೆಂಕಿ ನಿಯಂತ್ರಣದ ಮುನ್ನೆಚ್ಚರಿಕೆ ಮತ್ತು ಅರಣ್ಯ ಸಂರಕ್ಷಣೆ ಬಗ್ಗೆ ಗಮನ ವಹಿಸದೇ ಅಧಿಕಾರಿಗಳು ಕಾಮಗಾರಿಯಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಭದ್ರಾ ಅಭಯಾರಣ್ಯದಲ್ಲಿ ಬೆಂಕಿ ಬೀಳದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್ ಬೆಂಕಿ ನಂದಿಸಲು 260 ವಾಚರ್ಗಳನ್ನು ನೇಮಕ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಅಭಯಾರಣ್ಯದ ನಾಲ್ಕು ವಲಯಗಳನ್ನು ಸುತ್ತಿದರೆ 30 ಬೆಂಕಿ ಅರಣ್ಯ ವಾಚರ್ ನೇಮಕ ಮಾಡಿಕೊಂಡಿಲ್ಲವೆನ್ನುವುದು ಸಾಬೀತಾಗುತ್ತದೆ ಎಂದಿದ್ದಾರೆ.

ಕಾಗದ ಪತ್ರಗಳಲ್ಲಿ ಮಾತ್ರ ನೇಮಕಾತಿ ತೋರಿಸಿ ವಾಚರ್ಗಳಿಗೆ ತಗುವ ವೆಚ್ಚವನ್ನು ನಕಲಿ ಬಿಲ್ ಸೃಷ್ಟಿಸಿ ಇಲಾಖೆ ಅಧಿಕಾರಿಗಳೇ ನುಂಗುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಅಥವಾ ಉನ್ನತ ಮಟ್ಟದ ತನಿಖೆ ನಡೆದರೆ ಸತ್ಯಾಸತ್ಯತೆ ಬಯಲಿಗೆ ಬರುತ್ತದೆ.

ಅಭಯಾರಣ್ಯದಲ್ಲಿ ಎಲ್ಲಿಯೂ ಕೂಡಾ ವಾಚ್ ಟವರ್ಗಳ ನಿರ್ಮಾಣ ಮಾಡಿಲ್ಲ. ವಾಚ್ ಟವರ್ಗಳ ನಿರ್ಮಾಣ ಮಾಡಿದ್ದೆ ಆದಲ್ಲಿ ಆ ಜಾಗಗಳ ಜಿಪಿಎಸ್ ಮಾಹಿತಿ ನೀಡಬೇಕು. ಗಸ್ತು ತಿರುಗಲು ವಾಹನಗಳನ್ನು ಬಾಡಿಗೆ ಆಧಾರದಲ್ಲಿ ತೆಗೆದುಕೊಂಡಿದ್ದೇವೆ ಎಂದು ದಾಖಲೆಯಲ್ಲಿ ಮಾತ್ರ ತೋರಿಸುತ್ತಾರೆ. ಆದರೆ, ಈ ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡಿಲ್ಲ. ನೈಜವಾಗಿ ಅರಣ್ಯದಲ್ಲಿ ಯಾವುದೇ ರೀತಿ ಸಂರಕ್ಷಣಾ ಕಾರ್ಯ ನಡೆಯುತ್ತಿಲ್ಲ. ಇಲಾಖಾ ಮಟ್ಟದ ಉನ್ನತ ಅಧಿಕಾರಿಗಳು ಅಭಯಾರಣ್ಯಕ್ಕೆ ಬಂದು ಪರಿಶೀಲಿಸಿದರೆ ವಾಸ್ತವ ಚಿತ್ರಣ ತಿಳಿಯುತ್ತದೆ ಎಂದಿದ್ದಾರೆ.

ದಿನಗೂಲಿ ನೌಕರರಿಗೆ ಬ್ಯಾಂಕ್ಗಳ ಮೂಲಕ ಹಣ ಪಾವತಿಸಬೇಕೆಂದು ಪ್ರಧಾನ ಅರಣ್ಯ ಅಧಿಕಾರಿಗಳು ಕಳೆದ 2 ವರ್ಷದ ಹಿಂದೆ ಆದೇಶಿಸಿದ್ದರು. ಆದರೆ ಅದು ಪಾಲನೆಯಾಗುತ್ತಿಲ್ಲ. ವಲಯಾರಣ್ಯಾಧಿಕಾರಿಗಳೇ ದಿನಗೂಲಿ ನೌಕರರ ಸಂಬಳವನ್ನು ನಕಲಿ ದಾಖಲೆ ಸೃಷ್ಟಿಸಿ ಹಣ ಡ್ರಾ ಮಾಡಿಕೊಂಡು, ದಿನಗೂಲಿ ನೌಕರರಿಗೆ ಸರಿಯಾದ ವೇತನ ನೀಡದೆ ವಂಚಿಸುತ್ತಿದ್ದಾರೆ. ನಕಲಿ ಹೆಸರುಗಳನ್ನು ಸೃಷ್ಟಿಸಿ ಬೇಟೆ ನಿಗ್ರಹ ಶಿಬಿರದ ವಾಚರ್ಗಳೆಂದು ಹೇಳಿ ವೋಚರ್ಗಳಲ್ಲಿ ನಕಲಿ ಸಹಿ ಮಾಡಿ ಹಣ ನುಂಗುತ್ತಿದ್ದಾರೆ. ಈ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದಿದ್ದಾರೆ.

ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಈ ಬಾರಿ ₨6 ಕೋಟಿಗೂ ಅಧಿಕ ಹಣ ಭದ್ರಾ ಅಭಯಾರಣ್ಯಕ್ಕೆ ಬಂದಿದೆ. ಇಲಾಖೆ ಅಧಿಕಾರಿಗಳು ಹಣ ದುರುಪಯೋಗಪಡಿಸಿ, ಹುಲಿಸಂರಕ್ಷಣಾ ಪ್ರಾಧಿಕಾರಕ್ಕೆ ವಂಚಿಸುತ್ತಿದ್ದಾರೆ. ಅಭಯಾರಣ್ಯದ ಬೇಟೆ ನಿಗ್ರಹ ಶಿಬಿರಗಳಲ್ಲಿ ಒಬ್ಬರು ಇಬ್ಬರು ಕೆಳಹಂತದ ಸಿಬ್ಬಂದಿ ಬಿಟ್ಟರೇ ಯಾರೊಬ್ಬರು ಇಲ್ಲ.

ಅರಣ್ಯೇತರ ಚಟುವಟಿಕೆಗಳನ್ನು ಅಧಿಕಾರಿಗಳೇ ಕೈಗೊಳ್ಳುತ್ತಿದ್ದರೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹುಲಿಸಂರಕ್ಷಣಾ ಪ್ರಾಧಿಕಾರದವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಅರಣ್ಯ ಸಚಿವರು ಮತ್ತು ಇಲಾಖೆ ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯೇತರ ಚಟುವಟಿಕೆ ನಿರ್ಬಂಧಿಸಿ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.