ಭರತನಾಟ್ಯ ರಂಗಪ್ರವೇಶ

7

ಭರತನಾಟ್ಯ ರಂಗಪ್ರವೇಶ

Published:
Updated:
ಭರತನಾಟ್ಯ ರಂಗಪ್ರವೇಶ

ರಾಜರಾಜೇಶ್ವರಿ ಕಲಾನಿಕೇತನ: ಶನಿವಾರ ಗುರು ವೀಣಾ ಮೂರ್ತಿ ವಿಜಯ್ ಅವರ ಶಿಷ್ಯೆ ಶ್ವೇತಾ ಕಾಶೆಟ್ಟಿ ಭರತನಾಟ್ಯ ರಂಗಪ್ರವೇಶ.ಆರನೇ ವರ್ಷದಲ್ಲೇ ಗುರು ವೀಣಾಮೂರ್ತಿ ವಿಜಯ್ ಅವರ ಬಳಿ ಭರತನಾಟ್ಯ ಅಭ್ಯಾಸ ಆರಂಭಿಸಿದ ಶ್ವೇತಾ ಕಳೆದ 11 ವರ್ಷಗಳಿಂದ ಕಲಿಕೆ ಮುಂದುವರಿಸಿದ್ದಾರೆ.ಭರತನಾಟ್ಯದಲ್ಲಿ ಜ್ಯೂನಿಯರ್ ಗ್ರೇಡ್ ಉತ್ತೀರ್ಣರಾಗಿದ್ದು, ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ರಾಜರಾಜೇಶ್ವರಿ ಕಲಾನಿಕೇತನದ ನೃತ್ಯ ತಂಡದ ಸದಸ್ಯೆಯಾಗಿಯೂ ಹಲವು ರೂಪಕಗಳಲ್ಲಿ ಭಾಗವಹಿಸಿದ್ದಾರೆ.ಪ್ರಸ್ತುತ `ಪಿಇಎಸ್‌ಐಟಿ~ಯಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಶ್ವೇತಾ, ಬರಹಗಾರ್ತಿಯೂ ಹೌದು. ಅವರ ಈ ಸಾಧನೆಗೆಲ್ಲ ತಂದೆ ಕುಮಾರ್ ಮತ್ತು ತಾಯಿ ಅನಿತಾ ಅವರ ಬೆಂಬಲವಿದೆ. ಸ್ಥಳ: ಜೆಎಸ್‌ಎಸ್ ಸಭಾಂಗಣ, 1ನೇ ಮುಖ್ಯರಸ್ತೆ, ಜಯನಗರ 8ನೇ ಬ್ಲಾಕ್. ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry