ಭವಿಷ್ಯನಿಧಿ ಬಡ್ಡಿದರ ನಿರ್ಧಾರ ನೆನೆಗುದಿ

ಶನಿವಾರ, ಜೂಲೈ 20, 2019
28 °C

ಭವಿಷ್ಯನಿಧಿ ಬಡ್ಡಿದರ ನಿರ್ಧಾರ ನೆನೆಗುದಿ

Published:
Updated:

ನವದೆಹಲಿ(ಪಿಟಿಐ): ನೌಕರರ ಭವಿಷ್ಯನಿಧಿಗೆ ಪ್ರಸಕ್ತ ಹಣಕಾಸು ವರ್ಷ ನೀಡಬೇಕಾದ ಬಡ್ಡಿಯ ದರ ಈವರೆಗೂ ನಿಗದಿಯಾಗಿಯೇ ಇಲ್ಲ! ಅದಾಗಲೇ ಒಂದು ತ್ರೈಮಾಸಿಕ ಅವಧಿಯೇ ಕಳೆದು ಹೋಗಿದ್ದರೂ ಬಡ್ಡಿದರ ಸ್ಪಷ್ಟವಾಗದ ಬಗ್ಗೆ ನೌಕರ ಸಮೂಹ ಕಳವಳಕ್ಕೊಳಗಾಗಿದೆ.

ಕೇಂದ್ರ ಕಾರ್ಮಿಕ ಖಾತೆ ಸಚಿವರ ಅಧ್ಯಕ್ಷತೆಯ ಈ ಭವಿಷ್ಯನಿಧಿ ಸಂಘಟನೆಯ ಕೇಂದ್ರ ಮಂಡಳಿ ಟ್ರಸ್ಟ್(ಇಪಿಎಫ್‌ಒ-ಸಿಬಿಟಿ) 2012-13ನೇ ಸಾಲಿನ ಬಡ್ಡಿ ದರವನ್ನು ಯಾವಾಗ ನಿಗದಿ ಮಾಡುತ್ತದೆ ಎಂಬುದೇ ಈಗಿನ ಪ್ರಶ್ನೆಯಾಗಿದೆ.

`ಮುಂದಿನ ಸಿಬಿಟಿ ಸಭೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲದೆ ಈ ಹಿಂದೆ ನಡೆದ ಸಭೆಯಲ್ಲಿಯೂ ಬಡ್ಡಿ ದರ ವಿಚಾರ ಚರ್ಚೆಗೆ ಬಂದಿಲ್ಲ~ ಎಂದು `ಇಪಿಎಫ್‌ಒ~ ಟ್ರಸ್ಟಿ ಹಾಗೂ ಹಿಂದ್ ಮಜ್ದೂರ್ ಸಭಾ ಕಾರ್ಯದರ್ಶಿಯೂ ಆಗಿರುವ ಎ.ಡಿ.ನಾಗ್ಪಾಲ್ ಭಾನುವಾರ ಸುದ್ದಿಸಂಸ್ಥೆಗೆ   ಪ್ರತಿಕ್ರಿಯಿಸಿದ್ದಾರೆ.ಭವಿಷ್ಯನಿಧಿಯಲ್ಲಿ ದೇಶದಾದ್ಯಂತ  ಐದು ಕೋಟಿ ಸದಸ್ಯರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry