ಮಂಗಳವಾರ, ಜನವರಿ 21, 2020
29 °C

ಭವಿಷ್ಯ ನಿಧಿ ಪಿಂಚಣಿದಾರರ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಮಿಕ ಭವಿಷ್ಯ ನಿಧಿ ಯೋಜನೆಯ ಅಡಿಯಲ್ಲಿ ನಿವೃತ್ತ ಕಾರ್ಮಿಕರಿಗೆ ಸಿಗುತ್ತಿರುವ ಮಾಸಿಕ ಪಿಂಚಣಿ ಅವರ ಔಷಧೋಪಚಾರಕ್ಕೂ ಸಾಲದು. 1971ರ ಕುಟುಂಬ ಪಿಂಚಣಿ ಯೋಜನೆಗೆ ಒಳಪಟ್ಟ ಕಾರ್ಮಿಕರಿಗೆ ತಿಂಗಳಿಗೆ  ಕನಿಷ್ಠ 93 ರೂಗಳಿಂದ ಹಿಡಿದು ಗರಿಷ್ಠ 1680ರೂ ನಿವೃತ್ತಿ ವೇತನ ಸಿಗುತ್ತಿದೆ. ಈ ಹಣದಲ್ಲಿ ಕಾರ್ಮಿಕರ ಕುಟುಂಬಗಳು ಜೀವನ ನಿರ್ವಹಿಸಲು ಸಾಧ್ಯವೇ?ಬೆಲೆ ಏರಿಕೆ, ಹಣದುಬ್ಬರದಿಂದ ಇಡೀ ದೇಶವೇ ತತ್ತರಿಸಿದೆ. ನಿವೃತ್ತ ಕಾರ್ಮಿಕರ ಕುಟುಂಬಗಳು ಅರೆಹೊಟ್ಟೆಯಲ್ಲಿ ಬದುಕುತ್ತಿವೆ. ವ್ಯಕ್ತಿಗತ ದೇಣಿಗೆ ಸಲ್ಲಿಸದ ಸರ್ಕಾರಿ ನೌಕರರಿಗೆ ಕನಿಷ್ಟ 2250 ರೂಗಳಿಂದ 25 ಸಾವಿರ ರೂವರೆಗೆ ಪಿಂಚಣಿ ಸಿಗುತ್ತಿದೆ. ಅವರಿಗೆ ಹೋಲಿಸಿದರೆ ಕಾರ್ಮಿಕರ ಪಿಂಚಣಿಗೆ ಬೆಲೆ ಇಲ್ಲ.  ನಾವೇನು ಪಾಪ ಮಾಡಿದ್ದೇವೆ ಎಂಬ ಭಾವನೆ ಬರುತ್ತದೆ.ಸರ್ಕಾರದ ಭವಿಷ್ಯ ನಿಧಿಯಲ್ಲಿ ಸಾವಿರಾರು ಕೋಟಿ ರೂ ಹಣವಿದೆ. ಈ ಹಣದ ಬಡ್ಡಿಯಿಂದ ನಿವೃತ್ತ ಕಾರ್ಮಿಕರಿಗೆ ಗೌರವಯುತ ಪಿಂಚಣಿ ಕೊಡುವ ಸಾಧ್ಯತೆಗಳ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಪರಿಶೀಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಪ್ರತಿಕ್ರಿಯಿಸಿ (+)