ಬುಧವಾರ, ಮೇ 19, 2021
24 °C

ಭಾಗವತ್ ಭೇಟಿ ಮಾಡದ ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗವತ್ ಭೇಟಿ ಮಾಡದ ಅಡ್ವಾಣಿ

ನವದೆಹಲಿ (ಐಎಎನ್‌ಎಸ್): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ಮಧ್ಯ ಬುಧವಾರ ನಡೆಯಬೇಕಾಗಿದ್ದ ಸಭೆಯು ಅಡ್ವಾಣಿ ಅವರ ಅನಾರೋಗ್ಯದ ನಿಮಿತ್ತ ರದ್ದುಗೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಗೋವಾ ಕಾರ್ಯಕಾರಣಿ ನಂತರ ಪಕ್ಷದ ಎಲ್ಲ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದ ಅಡ್ವಾಣಿ ಅವರು ನಂತರದಲ್ಲಿ ಭಾಗವತ್ ಅವರ ಸಲಹೆಯಂತೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಬುಧವಾರ ಉಭಯ ಮುಖಂಡರು ಭೇಟಿಯಾಗಲು ತೀರ್ಮಾನಿಸಿದ್ದರು. ಆದರೆ ಅಡ್ವಾಣಿ ಅವರ ಅನಾರೋಗ್ಯದ ಕಾರಣ ಅವರು ಭಾಗವತ್ ಭೇಟಿಗೆ ಬರಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ.ಭಾಗವತ್ ಇದಕ್ಕೂ ಮೊದಲು ಬಿಜೆಪಿಯ ಮಾಜಿ ಅಧ್ಯಕ್ಷ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.