ಭಾನುವಾರ, 28-7-1963

7

ಭಾನುವಾರ, 28-7-1963

Published:
Updated:
ಭಾನುವಾರ, 28-7-1963

ಉತ್ತರದ ಗಡಿಯಲ್ಲಿ ಹೆಚ್ಚು ಚೀಣೀ ಸೇನೆ ಸಂಗ್ರಹ: ನೆಹರೂ ಎಚ್ಚರಿಕೆ

ಹೈದರಾಬಾದ್, ಜುಲೈ 27 - `ಭಾರತದ ಉತ್ತರದ ಗಡಿ ಯುದ್ದಕ್ಕೂ ಕಳೆದ ಎರಡು, ಮೂರು ದಿನಗಳಿಂದ ಚೀಣೀಯರು ಹೆಚ್ಚು ಸೇನೆ ಸಂಗ್ರಹಿಸುತ್ತಿದ್ದಾರೆಂದು ವರದಿಗಳು ಬಂದಿವೆ' ಎಂದು ನೆಹರೂ ಇಂದು ಇಲ್ಲಿ ತಿಳಿಸಿದರು.`ಉತ್ತರದ ಸರಹದ್ದಿನಲ್ಲಿ ನಡೆಯುತ್ತಿರುವ ಚೀಣೀ ಸೇನಾ ಸಂಗ್ರಹ ಭಾರತಕ್ಕೆ ವಿಪತ್ಕಾರಿ, ನಾವು ಸಿದ್ಧರಾಗಿರಬೇಕು' ಎಂದೂ ನೆಹರೂ ಸ್ಪಷ್ಟಪಡಿಸಿದರು.ಆಂಧ್ರದ ವಿಧಾನ ಸಭೆ, ವಿಧಾನ ಪರಿಷತ್ತಿನ ಅಧ್ಯಕ್ಷರು ತಮ್ಮ ಗೌರವಾರ್ಥ ನೀಡಿದ ಸತ್ಕಾರ ಕೂಟದಲ್ಲಿ ಮಾತನಾಡುತ್ತ ನೆಹರೂ, `ಭಾರತದ ಸೇನಾ ಮಹಾದಂಡ ನಾಯಕ ಜ. ಚೌಧರಿ ಅವರು ನಾಳೆ ದೆಹಲಿಗೆ ಆಗಮಿಸುವರು' ಎಂದರು.

ಕೇಂದ್ರದಲ್ಲಿ ಸಕ್ಕರೆಯ ವಿಶೇಷ ದಾಸ್ತಾನು?

ಮುಂಬೈ, ಜುಲೈ 27 - ಅಕ್ಕಿ - ಗೋಧಿ ಬಗ್ಗೆ ಅನುಸರಿಸುತ್ತಿರುವಂತೆಯೇ ಸಕ್ಕರೆ ಬಗೆಗೂ ವಿಶೇಷ ದಾಸ್ತಾನು ನೀತಿಯನ್ನು ಸರ್ಕಾರ ಅನುಸರಿಸಬಹುದೆಂದು ನಿನ್ನೆ ಇಲ್ಲಿ ಭಾರತೀಯ ವರ್ತಕ ಮಂಡಲಿಯಲ್ಲಿ ಭಾಷಣ ಮಾಡಿದ ಕೇಂದ್ರ ಆಹಾರ ಮಂತ್ರಿ ಶ್ರೀ ಎಸ್. ಕೆ. ಪಾಟೀಲ್ ಸೂಚನೆ ಇತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry