ಶನಿವಾರ, ಮಾರ್ಚ್ 6, 2021
30 °C

ಭಾರತಕ್ಕೆ ಸೋಲು, ಆಸ್ಟ್ರೇಲಿಯಾಗೆ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಸೋಲು, ಆಸ್ಟ್ರೇಲಿಯಾಗೆ ಸರಣಿ

ಮೆಲ್ಬರ್ನ್‌ (ಪಿಟಿಐ): ಭಾರತದ ಸೋಲಿನ ಪಯಣ ಮುಂದುವರೆದಿದ್ದು, ಪರ್ತ್‌, ಬ್ರಿಸ್ಬೇನ್‌ ಬಳಿಕ  ಮೆಲ್ಬರ್ನ್‌  ಕ್ರೀಡಾಂಗಣದಲ್ಲಿಯೂ ನಿರಾಸೆ ಕಾಡಿತು. ಮೂರನೇ ಏಕದಿನ ಪಂದ್ಯದಲ್ಲೂ ಭಾರತ ಪರಾಭವಗೊಂಡಿತು.295 ರನ್‌ಗಳ  ಸವಾಲಿನ ಗುರಿಯನ್ನು ಸುಲಭವಾಗಿ ಮುಟ್ಟಿದ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಸರಣಿಯಲ್ಲಿ 3–0ರಲ್ಲಿ ಮುನ್ನಡೆ ಪಡೆಯುವ ಮೂಲಕ ಸರಣಿ ಗೆದ್ದುಕೊಂಡಿತು.

ಬೌಲಿಂಗ್ ದೌರ್ಬಲ್ಯ ಈ ಪಂದ್ಯದ ಸೋಲಿಗೂ ಕಾರಣವಾಯಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 295 ರನ್‌ ಗಳಿಸಿತು. ವಿರಾಟ್‌ ಕೊಹ್ಲಿ 117, ಶಿಖರ್‌ ಧವನ್‌ 68, ರಹಾನೆ 50 ರನ್‌ಗಳಿಸಿದರು. ಆಸ್ಟ್ರೇಲಿಯಾದ ಪರ ಮ್ಯಾಕ್ಸ್‌ವೆಲ್‌ 96 ಮತ್ತು ಮಾರ್ಷ್‌ 62 ಗಳಿಸುವ ಮೂಲಕ ಗೆಲುವಿಗೆ ಕಾರಣರಾದರು.ಸಂಕ್ಷಿಪ್ತ  ಸ್ಕೋರ್‌: ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 295 ರನ್‌, ಆಸ್ಟ್ರೇಲಿಯಾ 48.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 296 ರನ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.