ಗುರುವಾರ , ಏಪ್ರಿಲ್ 22, 2021
27 °C

ಭಾರತದಲ್ಲಿ ಮಕ್ಕಳ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಕಳೆದ ಒಂದು ದಶಕದಲ್ಲಿ ವಿಶ್ವದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ವಿಚಾರದಲ್ಲಿ ಸಾಕಷ್ಟು ಸುಧಾರಣೆಗಳು ಆಗಿದ್ದರೂ ಮಧ್ಯಮ ಆದಾಯವಿರುವ ರಾಷ್ಟ್ರಗಳ ಪೈಕಿ ಭಾರತದಲ್ಲಿ ಮಕ್ಕಳ ಪೋಷಣೆ ಅಷ್ಟೊಂದು ತೃಪ್ತಿಕರವಾಗಿಲ್ಲ.ಮಕ್ಕಳ ಪೋಷಣೆ ವಿಚಾರದಲ್ಲಿ 1995ರ ವರೆಗೆ ಭಾರತ ವಿಶ್ವದಲ್ಲಿ 12ನೇ ಸ್ಥಾನದಲ್ಲಿ ಇತ್ತು. ನಂತರದ ವರ್ಷಗಳಲ್ಲಿ  112ನೇ ಸ್ಥಾನಕ್ಕೆ ಇಳಿದಿದೆ ಎಂದು ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ `ಮಕ್ಕಳನ್ನು ರಕ್ಷಿಸಿ~ ಸ್ವಯಂ ಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಭಾರತದಲ್ಲಿ ಮತ್ತು ಇತರ ರಾಷ್ಟ್ರಗಳಲ್ಲಿ ಮಕ್ಕಳ ಪೋಷಣೆಯ ಗುಣಮಟ್ಟವನ್ನು ಸಮೀಕ್ಷೆ ಮಾಡಲಾಗಿದೆ.ಭಾರತದಲ್ಲಿ ಅರ್ಥಿಕಾಭಿವೃದ್ಧಿಯ ಸಾಧನೆಯಾದರೂ ಈ ಪ್ರಗತಿ ಬಡವರು ಮತ್ತು ಕಡು ಬಡವರಿಗೆ ತಲುಪದೆ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಾಮಸ್ ಚಾಂಡಿ ತಿಳಿಸಿದ್ದಾರೆ.ಮಕ್ಕಳನ್ನು ಉತ್ತಮವಾಗಿ  ಪೋಷಣೆ ಮಾಡುವ  ವಿಚಾರದಲ್ಲಿ ಜಪಾನ್ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಸ್ವಿಟ್ಜರ್‌ಲೆಂಡ್, ಬ್ರಿಟನ್ ಮತ್ತು ನಾರ್ವೆ ದೇಶಗಳು ಇವೆ.ಅಮೆರಿಕ 24ನೇ ಸ್ಥಾನದಲ್ಲಿ, ಆಸ್ಟ್ರೇಲಿಯಾ 16 ಮತ್ತು ಚೀನಾ 29ನೇ ಸ್ಥಾನದಲ್ಲಿ ಇವೆ. ಕೊನೆಯ ಸ್ಥಾನದಲ್ಲಿ ಸೋಮಾಲಿಯಾ ಇದೆ.90ರ ದಶಕದ ಉತ್ತರಾರ್ಧದಲ್ಲಿ ಶೇಕಡಾ 90ರಷ್ಟು ರಾಷ್ಟ್ರಗಳಲ್ಲಿ ಮಕ್ಕಳ ಪಾಲನೆ ಪೋಷಣೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.