ಅಯ್ಯೋ ಪಾಪ! ಭಾರತ ಕ್ರಿಕೆಟ್ ತಂಡಕ್ಕೆ `ಅದೃಷ್ಟ~ ಕೈಕೊಟ್ಟಿತು. ಇಲ್ಲವಾದರೆ, ಈ ವರ್ಷವೂ ಏಷ್ಯಾಕಪ್ನಲ್ಲಿ `ಮಹಿ~ ಪಡೆ ಚಾಂಪಿಯನ್ ಆಗುತ್ತಿತ್ತು ಎಂದವರು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು. ಈ ಮಾತನ್ನು ನಾವು ಒಪ್ಪುವುದಿಲ್ಲ. ಬೌಲಿಂಗ್ ದೌರ್ಬಲ್ಯ ಭಾರತದ ವೈಫಲ್ಯಕ್ಕೆ ಕಾರಣ ಎಂದವರು ಇನ್ನೂ ಕೆಲವರು.

ಈ ರೀತಿಯ ವಿಭಿನ್ನ ಅಭಿಪ್ರಾಯಗಳು ಕ್ರಿಕೆಟ್ ಜಗತ್ತಿನಲ್ಲಿ ಹರಿದಾಡುತ್ತಿವೆ. ಆಸ್ಟ್ರೇಲಿಯಾ ಪ್ರವಾಸ, ತ್ರಿಕೋನ ಏಕದಿನ ಸರಣಿ ಹಾಗೂ ಏಷ್ಯಾ ಕಪ್ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ನೋಡಿದರೆ, ಎರಡನೇ ಅಭಿಪ್ರಾಯವೇ ಹೆಚ್ಚು ಸೂಕ್ತ ಎನಿಸುತ್ತದೆ. ಅಂಕಿ ಅಂಶಗಳು ಸಹ ಇದಕ್ಕೆ ಪೂರಕ ದಾಖಲೆಗಳನ್ನು ಒದಗಿಸುತ್ತವೆ.

ಹೌದು; ಭಾರತದ ಬೌಲಿಂಗ್ ದೌರ್ಬಲ್ಯ ಆಸೀಸ್ ನಾಡಿನಲ್ಲಿ, ಮೀರ್ಪುರದ ಅಂಗಳದಲ್ಲಿ ಬೆತ್ತಲಾಗಿದೆ. ಅದಕ್ಕಾಗಿಏಷ್ಯಾಕಪ್ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಅವಕಾಶವನ್ನು ಸಹ ಭಾರತ ಕಳೆದುಕೊಂಡಿತು.

ವಿರಾಟ್ ಕೊಹ್ಲಿ ಎಂಬ ಪ್ರತಿಭೆ ಏಷ್ಯಾಕಪ್ನಲ್ಲಿ ಬೌಲರ್ಗಳ ಮಾರಣ ಹೋಮ ನಡೆಸಿದರು. ಎದುರಿನ ಬೌಲರ್ ಯಾರು ಎನ್ನುವುದನ್ನು ಲೆಕ್ಕಿಸದೇ ಎಲ್ಲರನ್ನೂ ಚಚ್ಚಿದರು. ಇದಕ್ಕೆ ಪ್ರತಿಯಾಗಿ ಭಾರತದ ಬೌಲರ್ಗಳು ಸಹ ಸರಿಯಾಗಿಯೇ ಚಚ್ಚಿಸಿಕೊಂಡರು.

ತ್ರಿಕೋನ ಸರಣಿಯಲ್ಲಿ ಭಾರತ ಗುರಿ ಬೆನ್ನಟ್ಟಿ ಪಂದ್ಯಗಳನ್ನು ಗೆದ್ದಿದ್ದೆ ಹೆಚ್ಚು ಸಲ. ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗುರಿ ಬೆನ್ನಟ್ಟಿಯೇ ಭಾರತ ಪಂದ್ಯ ಗೆದ್ದಿದ್ದು. ಆಸೀಸ್ ನೀಡಿದ್ದ 270 ರನ್ಗಳ ದೊಡ್ಡ ಮೊತ್ತವನ್ನು ಸಹ ಗುರಿ ಬೆನ್ನಟ್ಟಿಯೇ ದೋನಿ ಪಡೆ ಗೆಲುವು ಸಾಧಿಸಿತು. ಈ ಗೆಲುವಿಗೆ ಬ್ಯಾಟ್ಸ್ಮನ್ಗಳು ಕಾರಣರಾದರು.

ಲಂಕಾ ಎದುರಿನ ಪಂದ್ಯದಲ್ಲಿ 320 ರನ್ಗಳ ದೊಡ್ಡ ಸವಾಲನ್ನು ಕೇವಲ 37 ಓವರ್ಗಳ ಒಳಗೆ ಚಚ್ಚಿ ಹಾಕಿದ್ದು ಬ್ಯಾಟ್ಸ್ಮನ್ಗಳು ಎನ್ನುವುದು ಗಮನಾರ್ಹ.ಭಾರತದ ಬ್ಯಾಟ್ಸ್ಮನ್ಗಳು ಕ್ರೀಸ್ಗೆ ಕಚ್ಚಿ ನಿಂತರೆ ರನ್ ಹೊಳೆಯನ್ನೇ ಹರಿಸುತ್ತಾರೆ. ಎದುರಾಳಿ ಬೌಲರ್ಗಳ ಬೆವರು ಇಳಿಸುತ್ತಾರೆ. ಪ್ರೇಕ್ಷಕರನ್ನು ರಂಜಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ಬೌಲಿಂಗ್?

ಭಾರತದ ಬೌಲಿಂಗ್ ದೌರ್ಬಲ್ಯ ವಿದೇಶಿ ನೆಲದಲ್ಲಿ, ಅದೂ ಏಷ್ಯಾ ಖಂಡದ ಪಿಚ್ನಲ್ಲಿ ಅನಾವರಣಗೊಂಡಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯ ಇದಕ್ಕೊಂದು ಸ್ಪಷ್ಟ ಉದಾಹರಣೆ.
ದುರ್ಬಲ (?) ಬಾಂಗ್ಲಾ ತಂಡಕ್ಕೆ 290 ರನ್ಗಳ ಗುರಿಯನ್ನು ಭಾರತ ನೀಡಿತ್ತು. ಈ ಗುರಿಯನ್ನು ಬಾಂಗ್ಲಾ ಮುಟ್ಟುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಭಾರತದ ಬೌಲರ್ಗಳು ಇದನ್ನು ಸಾಬೀತು ಮಾಡಿ ಬಿಟ್ಟರು.

ಯುವ ವೇಗಿ ಇರ್ಫಾನ್ ಪಠಾನ್, ಪ್ರವೀಣ್ ಕುಮಾರ್ ಹಾಗೂ ರವಿಚಂದ್ರನ್ ಅಶ್ವಿನ್ ಬಾಂಗ್ಲಾ ಬ್ಯಾಟ್ಸ್ಮನ್ಗಳಿಂದ ಚೆನ್ನಾಗಿಯೇ ಚಚ್ಚಿಸಿಕೊಂಡರು. ಇದರಿಂದ ಭಾರತಕ್ಕೆ ಸೋಲಿನ ಆಘಾತವಾಯಿತು. ಇದರಿಂದ ಸಚಿನ್ ಗಳಿಸಿದ್ದ `ಶತಕಗಳ ಶತಕ~ ಮಹಾ ಸಾಧನೆಯ ಹೊಳಪಿಗೆ ಕೊಂಚ ಕತ್ತಲೆ ಮೂಡಿದಂತಾಯಿತು.

`ಸಚಿನ್ ಶತಕ ಗಳಿಸಿದರೆ, ಭಾರತ ಪಂದ್ಯ ಗೆಲ್ಲುವುದಿಲ್ಲ~ ಎನ್ನುವ ಕ್ರಿಕೆಟ್ ಜಗತ್ತಿನ ಒಂದು ಗುಂಪಿನವರ ಮಾತಿಗೆ ಮತ್ತೆ ಪುಷ್ಟಿ ದೊರೆತಂತಾಯಿತು.ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಇದೇ ಕಥೆ. ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಹರಿದು ಬಂದಿದ್ದು ಒಟ್ಟು 659 ರನ್ಗಳು. ಭಾರತ ಈ ಪಂದ್ಯದಲ್ಲಿ ಗೆಲುವು ಪಡೆಯಿತೇನೋ ನಿಜ. ಆದರೆ ಇಲ್ಲಿಯೂ ಬಯಲಾಗಿದ್ದು ಬೌಲಿಂಗ್ ದೌರ್ಬಲ್ಯ.

ಪಾಕ್ ಬ್ಯಾಟ್ಸ್ಮನ್ಗಳ ಅಬ್ಬರವನ್ನು ತಗ್ಗಿಸಲು ನಾಯಕ ಮಹೇಂದ್ರ ಸಿಂಗ್ ದೋನಿ ತತ್ತರಿಸಿ ಹೋದರು. ಅದಕ್ಕಾಗಿ ಒಂಬತ್ತು ಜನ ಬೌಲರ್ಗಳನ್ನು ಕಣಕ್ಕಿಳಿಸಿದ್ದು ಇದಕ್ಕೆ ಸಾಕ್ಷಿ. ಪಂದ್ಯದ ನಂತರ ಅದನ್ನು ಅವರು ಒಪ್ಪಿಕೊಂಡರು.

`ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾವು ಗೆಲುವು ಸಾಧಿಸಿದೆವು ನಿಜ. ಆದರೆ, ನಮ್ಮ ತಂಡದ ಒಂಬತ್ತು ಜನ ಬೌಲಿಂಗ್ ಮಾಡುವಂತೆ ಪಾಕಿಸ್ತಾನದ ಬ್ಯಾಟ್ಸ್ಮನ್ಗಳು ದಂಡಿಸಿದರು~ ಎಂದು ಆವತ್ತಿನ ಪಂದ್ಯದ ಬಳಿಕ ದೋನಿ ಅವಲತ್ತುಗೊಂಡಿದ್ದರು. ಇದು ಭಾರತ ಹೊಂದಿರುವ ಬೌಲಿಂಗ್ ದೌರ್ಬಲ್ಯಕ್ಕೆ ಕನ್ನಡಿಯೂ ಹೌದು.

ಕೇವಲ ಬ್ಯಾಟಿಂಗ್ ಬಲದಿಂದ ಮಾತ್ರ ಪಂದ್ಯವನ್ನು ಗೆದ್ದುಕೊಳ್ಳಬಹುದು ಎನ್ನುವ ಭ್ರಮೆಯಲ್ಲಿದೆಭಾರತ. ಆದರೆ, ಬ್ಯಾಟ್ಸ್ಮನ್ಗಳು ಹೊಡೆದಷ್ಟು ರನ್ಗಳನ್ನು ಬೌಲರ್ಗಳು ಸರಾಗವಾಗಿ ಬಿಟ್ಟುಕೊಟ್ಟರೆ ಏನಾದೀತು ಪಂದ್ಯದ ಫಲಿತಾಂಶ? ಈ ನಿಟ್ಟಿನಲ್ಲಿ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಗಮನ ಹರಿಸಬೇಕಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ವೈಫಲ್ಯಕ್ಕೆ ಕಾರಣವೇನು? ಬೌಲಿಂಗ್ ದೌರ್ಬಲ್ಯವೋ? ಅಥವಾ ಕೈಕೊಟ್ಟ `ಅದೃಷ್ಟ~ವೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.