ಮಂಗಳವಾರ, ಮೇ 24, 2022
23 °C

ಭಾರತೀಯರಿಗೆ ಮ್ಯಾನ್ಮಾರ್ ಪ್ರವೇಶ ಇನ್ನು ಬಹಳ ಸುಲಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಜ್ವಾಲ್ (ಐಎಎನ್‌ಎಸ್): ಭಾರತದ ನಾಲ್ಕು ಈಶಾನ್ಯ ರಾಜ್ಯಗಳ ಜನರು ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆಯೇ ಮ್ಯಾನ್ಮಾರ್‌ನ 16 ಕಿ.ಮೀ ಗಡಿಯೊಳಗೆ ಪ್ರವೇಶಿಸಲು ಆ ದೇಶದ ಸರ್ಕಾರ ಅನುಮತಿ ನೀಡಿದೆ ಎಂದು ಮಿಜೋರಾಂ ಸರ್ಕಾರದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.ಮ್ಯಾನ್ಮಾರ್‌ನ ಶಿನ್ ರಾಜ್ಯದ ಫಾಲಂನಲ್ಲಿ ಕಳೆದ ವಾರ ನಡೆದ ಎರಡು ದೇಶಗಳ ಉಪ ಆಯುಕ್ತರ ಮಟ್ಟದ ಮಾತುಕತೆ ಸಂದರ್ಭದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಗಡಿಯಲ್ಲಿ ನೆಲೆಸಿರುವ ಜನರು ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆಯೇ ಗಡಿ ಪ್ರವೇಶಿಸಬಹುದು. ಎರಡು ರಾಷ್ಟ್ರಗಳ ಬಾಂಧವ್ಯ ವೃದ್ಧಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಮಿಜೋರಾಂ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.ಇಂತಹುದೇ ನಿರ್ಧಾರವನ್ನು ಕಳೆದ ವರ್ಷ ಭಾರತ ಘೋಷಿಸಿತ್ತು. ಆ ಮೂಲಕ ಮ್ಯಾನ್ಮಾರ್ ದೇಶದ ಪ್ರಜೆಗಳು ಈಶಾನ್ಯ ರಾಜ್ಯಗಳಾದ ಮಿಜೋರಾಂ, ಮಣಿಪುರ, ನಾಗಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ 16 ಕಿ.ಮೀ ವರೆಗೆ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆಯೇ ಬರಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.