ಸೋಮವಾರ, ಏಪ್ರಿಲ್ 12, 2021
26 °C

ಭಾರತೀಯರ ರಕ್ಷಣೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಪಿಟಿಐ/ಐಎಎನ್‌ಎಸ್): ಅಣು ವಿಕಿರಣ ಪ್ರಸರಣಗೊಂಡ ಪ್ರದೇಶದಲ್ಲಿ ಭಾರತದ ಕುಟುಂಬವೊಂದರ ಸದಸ್ಯರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಪಾನ್‌ನಲ್ಲಿನ ಭಾರತದ ರಾಯಭಾರಿ ಅಲೋಕ್ ಪ್ರಸಾದ್ ಅವರು ತಿಳಿಸಿದರು.ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ದೇಶಕ್ಕೆ ಮರಳಿ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿರುವುದರಿಂದ ಹೆಚ್ಚು ಪ್ರಯಾಣಿಕರ ಸಾಮರ್ಥ್ಯದ ವಿಮಾನಗಳನ್ನು ಕಳುಹಿಸುವಂತೆ ಏರ್ ಇಂಡಿಯಾ ಸಂಸ್ಥೆಗೆ ಕೋರಲಾಗಿದೆ ಎಂದು ಅವರು ಸಿಎನ್‌ಎನ್-ಐಬಿಎನ್‌ಗೆ ತಿಳಿಸಿದ್ದಾರೆ.ಈ ತಿಂಗಳ 16ರಿಂದ 19ರವರೆಗೆ ಏರ್ ಇಂಡಿಯಾ ಸಂಸ್ಥೆಯು ದೆಹಲಿ ಮತ್ತು ಟೋಕಿಯೊ ಮಧ್ಯೆ ಜಂಬೋ ವಿಮಾನ ಸಂಚಾರ ವ್ಯವಸ್ಥೆಯನ್ನು ಮಾಡಿದೆ. ಇದುವರೆಗೆ 900 ಮಂದಿ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.