ಭಾರತೀಯ ಪತ್ರಿಕಾ ಮಂಡಳಿಗೆ ನ್ಯಾ.ಮಾರ್ಕಂಡೇಯ ಕಟ್ಜು ನೇಮಕ

7

ಭಾರತೀಯ ಪತ್ರಿಕಾ ಮಂಡಳಿಗೆ ನ್ಯಾ.ಮಾರ್ಕಂಡೇಯ ಕಟ್ಜು ನೇಮಕ

Published:
Updated:

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರನ್ನು ಭಾರತೀಯ ಪತ್ರಿಕಾ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.ಕೇಂದ್ರ ಸರ್ಕಾರವು ಬುಧವಾರ ಈ ಕುರಿತ ಪ್ರಕಟಣೆ ಹೊರಡಿಸಿದೆ. 65 ವರ್ಷದ ಕಟ್ಜು ಅವರು ಸೆ.19ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ನ್ಯಾಯಮೂರ್ತಿ ಜಿ.ಎನ್.ರೇ ಅವರಿಂದ ತೆರವಾಗಿರುವ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕಟ್ಜು ತುಂಬಿದ್ದಾರೆ.ಕಟ್ಜು ಅವರು ತಮ್ಮ ಸೇವಾವಧಿಯಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಹಾಗೂ ಪದನಿಮಿತ್ತ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

2004ರ ನವೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರಿ ಸ್ವೀಕರಿಸಿದ್ದ ಅವರು 2005ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ತದನಂತರ 2006ರ ಏಪ್ರಿಲ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry