ಭಾನುವಾರ, ಫೆಬ್ರವರಿ 28, 2021
29 °C
ವಿದೇಶಿ ಸಂಕ್ಷಿಪ್ತ ಸುದ್ದಿಗಳು

ಭಾರತ– ಅಮೆರಿಕ ಸಂಬಂಧ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ– ಅಮೆರಿಕ ಸಂಬಂಧ ವೃದ್ಧಿ

ವಾಷಿಂಗ್ಟನ್‌ (ಐಎಎನ್‌ಎಸ್‌): ಭಾರತ ಮತ್ತು ಅಮೆರಿಕ ಒಟ್ಟಿಗೆ ಸಾಧಿಸುವುದು ಬಹಳಷ್ಟಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಹೇಳಿದರು.

ಅಮೆರಿಕದಲ್ಲಿನ ಭಾರತದ ನೂತನ ರಾಯಭಾರಿ ಸುಬ್ರಮಣಿಯಂ ಜೈಶಂಕರ್‌ ಅವರನ್ನು ಶ್ವೇತಭವನದಲ್ಲಿ ಸ್ವಾಗತಿಸಿ ಮಾತನಾಡಿದ ಒಬಾಮ ಅವರು,  ಹೊಸ ಜವಾಬ್ದಾರಿಯಲ್ಲಿ ಯಶಸ್ಸು ಸಾಧಿಸುವಂತೆ ಹಾರೈಸಿದರು. ಒಬಾಮ ಅವರಿಗೆ ಗುರುತು ಪತ್ರ ನೀಡಿ ಮಾತನಾಡಿದ ಸುಬ್ರಮಣಿಯನ್‌ ಅವರು, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮತ್ತು ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಶುಭಾಶಯಗಳನ್ನು ತಿಳಿಸಿದರು.

ಸ್ವತಂತ್ರ ರಾಜ್ಯಕ್ಕೆ ಗೊತ್ತುವಳಿ

ಕೀವ್‌(ಎಪಿ):
ಉಕ್ರೇನ್‌ ತ್ಯಜಿಸಿ ರಷ್ಯಾ ಸೇರುವ ಬಗ್ಗೆ ನಡೆಯುವ ಜನಮತಗಣನೆಯಲ್ಲಿ ಜನರು ಒಪ್ಪಿಗೆ ಸೂಚಿಸಿ­ದರೆ  ಕಪ್ಪು ಸಮುದ್ರದ ಜಲಸಂಧಿಯು ಸ್ವತಂತ್ರ ರಾಜ್ಯವಾಗಬಹುದು ಎಂದು ಕ್ರಿಮೆನಿಯಾ ಸಂಸತ್ತು ಅಭಿಪ್ರಾಯಪಟ್ಟಿದೆ.ಸ್ವಾಯತ್ತ ಕ್ರಿಮಿಯಾ ಗಣರಾಜ್ಯ ರಚನೆಗೆ ಸಂಬಂಧಿ­­­­ಸಿದ ಗೊತ್ತುವಳಿಯನ್ನು ಕ್ರಿಮಿಯಾ ಪ್ರಾದೇಶಿಕ ಜನಪ್ರತಿನಿ ಅಂಗೀಕರಿಸಿದ್ದಾರೆ.ಕ್ರಿಮಿಯಾ ನಿವಾಸಿಗಳು ಒಪ್ಪಿದರೆ ಪ್ರತ್ಯೇಕ ರಾಜ್ಯ­ವಾಗಿ ರಷ್ಯಾವನ್ನು ಸೇರಿಕೊಳ್ಳಬಹುದಾಗಿದೆ. ಸ್ವಘೋಷಿತ ರಾಜ್ಯವಾಗಿರುವ ಕ್ರಿಮಿಯಾವನ್ನು ರಷ್ಯಾ ತನ್ನ ಗಡಿಯೊಳಗೆ ಸೇರಿಸಿಕೊಳ್ಳದೆ ಇರುವುದರಿಂದ ಅಲ್ಲಿ ಬಿಕ್ಕಟ್ಟು ಏರ್ಪಟ್ಟಿದೆ. ಸ್ವಾಯತ್ತ ಗಣರಾಜ್ಯವು ಈ ಬಿಕ್ಕಟ್ಟನ್ನು ಶಮನಗೊಳಿಸಬಹುದು ಎಂಬ ಆಶಾ­ಭಾವನೆ ಮೂಡಿಸಿದೆ.ಗಲಭೆ ಪ್ರಕರಣ ದಾಖಲು

ಸಿಂಗಪುರ (ಪಿಟಿಐ):
ದೇಶದ ಈಶಾನ್ಯ ಭಾಗದಲ್ಲಿ ಹೊಡೆದಾಟವಾಡಿದ ಇಬ್ಬರು ಭಾರತೀಯರು ಮತ್ತು ಬಾಂಗ್ಲಾದೇಶದ ಇಬ್ಬರು ಪ್ರಜೆಗಳ ವಿರುದ್ಧ ಗಲಭೆ ನಡೆಸಿದ ಆಪಾದನೆ ಹೊರಿಸಿ ಪ್ರಕರಣ ದಾಖಲು ಮಾಡಲಾಗಿದೆ.ದೇಶದ 40 ವರ್ಷಗಳ ಇತಿಹಾಸದಲ್ಲಿ ನಡೆದ ಅತಿ ಘೋರ ಗಲಭೆ ನಡೆದು ಮೂರು ತಿಂಗಳ ನಂತರ ಈ ರೀತಿ ಪ್ರಕರಣ ದಾಖಲಾಗಿದೆ.ಭಾನುವಾರ ರಾತ್ರಿ ಸಿಕಂದರ್‌ ಸಿಂಗ್ (27) ಮತ್ತು ರಾಮ್‌ದೀಪ್ ಸಿಂಗ್‌ (28) ಬಾಂಗ್ಲಾದೇಶದ ಅಪರಿಚಿತ ವ್ಯಕ್ತಿಯನ್ನು ಗಾಯಗೊಳಿಸಿದ್ದಾರೆ. ಬಾಂಗ್ಲಾ­ದೇಶದ ಪ್ರಜೆಗಳಾದ ಕಮರುಲ್‌ ಹಸನ್‌ ಹಾಜಿ ಅಬ್ದುಲ್‌ ಬಸಾರ್‌ ಮತ್ತು ಮೊಹಮದ್ ರೊನಿ ಸಿಕದ್ದರ್‌ ಸಹ ಹೊಡೆದಾಟದಲ್ಲಿ ಭಾಗಿಯಾಗಿ­ದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಚಿಕ್ಕದಾದ ಎಲ್‌ಇಡಿ ಕಣ

ವಾಷಿಂಗ್ಟನ್‌ (ಪಿಟಿಐ):
ಮಾನವನ ಕೂದಲಿಗಿಂತ ಹತ್ತು ಸಾವಿರ ಪಟ್ಟು ಚಿಕ್ಕದಾದ ಎಲ್‌ಇಡಿ (ಲೈಟ್‌ ಎಮಿಟಿಂಗ್‌ ಡಯೋಡ್‌) ಕಣಗಳನ್ನು ಆವಿಷ್ಕರಿಸಿ­ರುವ ವಿಜ್ಞಾನಿಗಳು, ಇದನ್ನು ಎಲೆಕ್ಟ್ರಾನಿಕ್ಸ್‌ ಉಪಕರ­ಣ­ಗಳಲ್ಲಿ ಪ್ರಖರ ಬೆಳಕನ್ನು ಹೊರಸೂಸುವ ಶಕ್ತಿ­ಯನ್ನಾಗಿ ಬಳಸಬಹುದು ಎಂದಿದ್ದಾರೆ.ಬಹುತೇಕ ಗ್ರಾಹಕರು ಮೂರು ಆಯಾಮಗಳ ಎಲ್‌ಇಡಿ ಇರುವಂತಹ ಎಲೆಕ್ಟ್ರಾನಿಕ್ಸ್‌ ಉಪಕರಣ­ಗಳನ್ನು ಬಳಸುತ್ತಾರೆ. ಆದರೆ, ಈ ಉಪಕರಣಗಳು ಈಗ ಆವಿಷ್ಕಾರ ಮಾಡಿರುವ ಎಲ್‌ಇಡಿಗಳಿಗಿಂತ ಗಾತ್ರ­­ದಲ್ಲಿ 10ರಿಂದ 20 ಪಟ್ಟು ದೊಡ್ಡದಾಗಿವೆ ಎಂದು ಈ ಸೂಕ್ಷ್ಮಾತಿ ಸೂಕ್ಷ್ಮ ಎಲ್‌ಇಡಿಗಳನ್ನು ಅಭಿವೃದ್ಧಿ ಪಡಿಸಿರುವ ವಾಷಿಂಗ್ಟನ್‌ ವಿಶ್ವವಿದ್ಯಾಲ­ಯದ ಭೌತವಿಜ್ಞಾನಿಗಳು ಹೇಳಿದ್ದಾರೆ.ಹೆಸರು ಬದಲಿಸಿಕೊಂಡ ಭೂಪ!

ಮೆಲ್ಬರ್ನ್‌ (ಪಿಟಿಐ):
ಇಸ್ಪೀಟು ಆಟ­ದಲ್ಲಿ ಕುಡಿತದ ಬೆಟ್ಟಿಂಗ್‌ ಸೋತ 22 ವರ್ಷದ ನ್ಯೂಜಿ­ಲೆಂಡ್‌ ಯುವಕನೊಬ್ಬ ತನ್ನ ಹೆಸರನ್ನೇ ಬದಲಿಸಿಕೊಂಡು, 99 ಅಕ್ಷರಮಾಲೆ­ಯ ಉಚ್ಚಾರದ ಹೆಸರನ್ನು ನೋಂದಾಯಿಸಿಕೊಂಡಿದ್ದಾನೆ.ಫ್ರಾಸ್ಟ್‌ನೋವಾ ಹೆಸರಿನೊಂದಿಗೆ ಇತರ ಅಕ್ಷರ ಮಾಲೆ ಸೇರಿಸಿಕೊಂಡಿರುವ ಈತ, ತನ್ನ ಪಾಸ್‌­ಪೋರ್ಟ್‌, ಚಾಲನಾ ಪರ­ವಾ­­ನಗಿ ಮತ್ತಿತರ ಗುರುತಿನ ಕಾರ್ಡ್‌­ಗಳನ್ನು ನವೀಕರಿಸಲು ಹೆಣಗಾಡು­ತ್ತಿ­ದ್ದಾನೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.