ಶುಕ್ರವಾರ, ಜೂನ್ 18, 2021
28 °C

ಭಾರತ ತಂಡದಲ್ಲಿ ವೇದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧ ಮಾರ್ಚ್ 18ರಿಂದ 23ರವರೆಗೆ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಕರ್ನಾಟಕದ ವೇದಾ ಕೃಷ್ಣಮೂರ್ತಿ ಸ್ಥಾನ ಪಡೆದಿದ್ದಾರೆ.

ಸರಣಿಯ ಎಲ್ಲ ಐದು ಪಂದ್ಯಗಳು ವಿಶಾಖಪಟ್ಟಣದ ವೈಎಸ್‌ಆರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೊದಲ ಎರಡು ಪಂದ್ಯಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದರೆ, ಕೊನೆಯ ಎರಡು ಪಂದ್ಯಗಳು ಸಂಜೆ 6.30 ರಿಂದ ನಡೆಯಲಿವೆ.

ತಂಡ ಇಂತಿದೆ: ಅಂಜುಮ್ ಚೋಪ್ರಾ (ನಾಯಕಿ), ಮಿಥಾಲಿ ರಾಜ್ ಅಮಿತಾ ಶರ್ಮ, ಜೂಲನ್ ಗೋಸ್ವಾಮಿ, ಸುಲಕ್ಷಣಾ ನಾಯಕ್, ರೀಮಾ ಮಲ್ಹೋತ್ರಾ, ಪೂನಮ್ ರಾವುತ್, ಅರ್ಚನಾ ದಾಸ್, ಎಕ್ತಾ ಬಿಸ್ತ್, ಹರ್ಮನ್‌ಪ್ರೀತ್ ಕೌರ್, ಗೋಹರ್ ಸುಲ್ತಾನಾ, ಮಮತಾ ಕನೋಜಿಯಾ, ವೇದಾ ಕೃಷ್ಣಮೂರ್ತಿ, ಎಸ್. ಶುಭಲಕ್ಷ್ಮಿ ಹಾಗೂ ಸುನಿತಾ ಆನಂದ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.