ಗುರುವಾರ , ಮೇ 13, 2021
24 °C

ಭಾರಿ ಗುಂಡಿನ ಚಕಮಕಿ:ಆರು ನಕ್ಸಲರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲತೆಹಾರ್, ಜಾರ್ಖಂಡ್ (ಪಿಟಿಐ): ಲತೆಹಾರ್ ಜಿಲ್ಲೆಯ ಕರ್ಮದಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ಮಧ್ಯೆ ಗುರುವಾರ ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಆರು ಮಂದಿ ನಕ್ಸಲರು ಸತ್ತಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.ಬೆಳಿಗ್ಗೆ ಸುಮಾರು 11.30ಕ್ಕೆ ಆರಂಭವಾದ ಗುಂಡಿನ ಚಕಮಕಿಯಲ್ಲಿ ಕೋಬ್ರಾ ಮತ್ತು ಜಾಗ್ವಾರ್ ಪಡೆಯ ಇಬ್ಬರು ಯೋಧರಿಗೆ ತೀವ್ರ ಗಾಯಗಳಾಗಿವೆ ಎಂದು ಲತೆಹಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಾಂತಿ ಕುಮಾರ್ ತಿಳಿಸಿದ್ದಾರೆ.ದೊಡ್ಡ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿರುವುದು ನಿಜ. ಆರು  ಮಂದಿ ನಕ್ಸಲರು ಸತ್ತಿದ್ದಾರೆ ಎಂಬ ಪ್ರಾಥಮಿಕ ವರದಿ ಇದೆ. ಆದರೆ ಮೃತದೇಹಗಳು ದೊರಕುವವರೆಗೂ ಖಚಿತವಾಗಿ ಏನನ್ನೂ ಹೇಳಲಾಗದು ಎಂದು ಐಜಿಪಿ (ಕಾರ್ಯಾಚರಣೆ) ಆರ್. ಕೆ. ಮಲಿಕ್ ತಿಳಿಸಿದ್ದಾರೆ.ನಕ್ಸಲರ ವಿರುದ್ಧ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳು ದಟ್ಟಾರಣ್ಯವನ್ನು ಪ್ರವೇಶಿಸಿದ್ದು, ನಕ್ಸಲರು ಮುಖಾಮುಖಿಯಾಗಿರುವುದರಿಂದ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.