ಮುಧೋಳ: ತಾಲ್ಲೂಕಿನಲ್ಲಿ 24 ಗಂಟೆ ಗಳ ಅವಧಿಯಲ್ಲಿ ಸುರಿದ ಭಾರಿ ಮಳೆ ಗಾಳಿ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ.

ಬುದ್ನಿ ಪಿ.ಎಂ. ಕುಳಲಿ, ಸೋರಗಾವಿ, ಮುಗಳಖೋಡ, ಮುಧೋಳ, ಮಂಟೂರ, ಲೋಕಾಪುರ ಭಾಗದ ಚಿತ್ರಬಾನಕೋಟಿ, ಚಿಕ್ಕೂರ, ಜುನ್ನೂರ , ಚಿಕ್ಕೂರ, ಸೇರಿದಂತೆ ಹಲವಾರು ಗ್ರಾಮಗಳ ತೋಟಗಾರಿಕೆ ಬೆಳೆಗಳು ನೆಲಕ್ಕಚ್ಚಿವೆ. ಕೈ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಕಂಗಾ ಲಾಗಿದ್ದಾರೆ. ಆದ್ದರಿಂದ ರೈತರು ಸರ್ಕಾರದ ನೆರವಿಗೆ ಅಂಗಲಾಚುವ ಪರಿಸ್ಥಿತಿ ಉಂಟಾಗಿದೆ.

ಬುದ್ನಿ. ಪಿ.ಎಂ ಗ್ರಾಮದ ಪ್ರಗತಿಪರ ಕೃಷಿಕ ರಮೇಶ ಕೊಡಬಾಗಿ, ಚನ್ನವ್ವ ಕಣಬೂರ, ಬಸಪ್ಪ ಕಣಬೂರ, ಸಂಗಪ್ಪ ಕಣಬೂರ, ವೆಂಕಪ್ಪ ಕಣಬೂರ, ವೆಂಕಪ್ಪ ದೊಡಮನಿ, ಬಾಲಪ್ಪ ಬಂಗಿ ಅವರ ತೋಟಗಳು ಸೇರಿ ಒಟ್ಟು 15 ಎಕರೆ ಬಾಳೆ ಸಂಪೂರ್ಣವಾಗಿ ನೆಲ ಕ್ಕಚ್ಚಿದ್ದು ಕೋಟ್ಯಂತರ ರೂ ನಷ್ಟವಾಗಿದೆ.

ಸಾಲ ಮಾಡಿ ಬೀಜ ಗೊಬ್ಬರ ತಂದು ಹಾಕಿದ್ದರ ಪರಿಣಾಮ, ಈಗ ಬೇಸಿಗೆಯ ಕಾಲದಲ್ಲಿ ಮಳೆಯಾಗಿ ರೈತರಿಗೆ ತುಂಬಲಾರದ ನಷ್ಟವನ್ನು ತಂದೊಡ್ಡಿದೆ. ಇನ್ನು ಹಿಂಗಾರು ಜೋಳದ ಬೆಳೆಯು ಸಂಪೂರ್ಣವಾಗಿ ಹಾಳಾಗಿವೆ. ಹಾರಿ ಹೋದ ಪತ್ರಾಸುಗಳು: ಮುಗಳಖೋಡ ಗ್ರಾಮ ಸೇರಿದಂತೆ ಅತ್ಯಂತ ವೇಗವಾಗಿ ಬೀಸಿದ ಗಾಳಿಯಿಂದಾಗಿ ರೈತರು ಹೊಲದಲ್ಲಿ ಹಾಕಿದ ಪತ್ರಾಸಗಳು ಹಾರಿ ಹೋಗಿವೆ.

ಸೆಡ್ನಲ್ಲಿ ಹಾಕಿದ್ದ ಕಾಳುಗಳು ಸಂಪೂರ್ಣವಾಗಿ ನಾಶವಾಗಿದೆ. ಒಳಗಿರುವ ಕುರಿ ಮರಿಗಳು ಆಡುಗಳಿಗೆ ಗಾಯಗಳಾಗಿವೆ. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಬಿದ್ದಿವೆ. ಆದರೆ ಯಾವುದೆ ಜೀವ ಹಾನಿ ಉಂಟಾಗಿಲ್ಲ. ಪತ್ರಾಸಗಳು ಯಾವ ದಿಕ್ಕಿಗೆ ಹಾರಿ ಹೋಗಿವೆಯೋ ಗೊತ್ತಿಲ್ಲ. ವಿದ್ಯುತ್ ಕಂಬಗಳು ಬಿದ್ದಿವೆ. ಕೆಲವು ಕಡೆ ಶಾಲೆಯ ಮೇಲಿನ ನೀರಿನ ಟ್ಯಾಂಕ್ಗಳು ಬಿದ್ದು ಹಾನಿ ಸಂಭವಿಸಿವೆ.

ತಾಲ್ಲೂಕು ಆಡಳಿತವು ಮಳೆ ಯಿಂದಾಗಿ ಹಾನಿಗೊಳಗಾದ ಪ್ರದೇಶದ ಸಮೀಕ್ಷೆ ನಡೆಸಿ ಶೀಘ್ರ ಜಿಲ್ಲಾಧಿಕಾರಿ ಗಳಿವೆ ವರದಿ ಸಲ್ಲಿಸಬೇಕು ಎಂದು ಶಾಸಕ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.