ಸೋಮವಾರ, ಮೇ 23, 2022
26 °C

ಭಾರ್ತಿ ಆಕ್ಸಾ:ತುರ್ತು ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನ್ ಸ್ಥಗಿತ, ಬ್ರೇಕ್ ವೈಫಲ್ಯ, ಅಪಘಾತ ಮತ್ತಿತರ ಆಕಸ್ಮಿಕ ಸಂದರ್ಭಗಳಲ್ಲಿ ಕಾರು ಮಾಲೀಕರಿಗೆ ಹಲವು ಬಗೆಗಳಲ್ಲಿ ತುರ್ತಾಗಿ ನೆರವು ಒದಗಿಸಲು ಸಾಮಾನ್ಯ  ವಿಮಾ ಸಂಸ್ಥೆ ಭಾರ್ತಿ ಆಕ್ಸಾ ಜನರಲ್ ಇನ್ಶುರೆನ್ಸ್ ಹೊಸ ಯೋಜನೆ ಪ್ರಕಟಿಸಿದೆ.ಆಕ್ಸಾ ಸಮೂಹದ ಅಂಗಸಂಸ್ಥೆ ಆಕ್ಸಾ ಅಸಿಸ್ಟೆನ್ಸ್ ಜತೆಗಿನ ಪಾಲುದಾರಿಕೆಯಲ್ಲಿ ಕರ್ನಾಟಕವೂ ಸೇರಿದಂತೆ 22 ರಾಜ್ಯಗಳಲ್ಲಿ  ಈ ಸೇವೆ ಜಾರಿಗೆ ಬರಲಿದೆ. ವರ್ಷಕ್ಕೆ   ್ಙ 365 ಪಾವತಿಸಿ ಕಾರು ಮಾಲೀಕರು ಈ ಸೌಲಭ್ಯ ಪಡೆದುಕೊಳ್ಳಬಹುದು. ಬ್ರೇಕ್ ವೈಫಲ್ಯ ಸಂದರ್ಭದಲ್ಲಿನ ಚಿಕ್ಕ ಪುಟ್ಟ ದುರಸ್ತಿ, ವಾಹನ ಚಲಿಸದೇ ಸ್ಥಗಿತಗೊಂಡಾಗ ಸಮೀಪದ ಗ್ಯಾರೇಜ್‌ನಿಂದ ನೆರವಿನ ಹಸ್ತ, ಕೀ ಕಳೆದುಹೋದ ಸಂದರ್ಭದಲ್ಲಿ ನೆರವು, ಇಂಧನ ಮುಗಿದ ಹೋದಾಗ ತುರ್ತಾಗಿ ಇಂಧನ ಪೂರೈಕೆ, ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು 30 ನಿಮಿಷಗಳಲ್ಲಿ ಒದಗಿಸಲಾಗುವುದು ಎಂದು ಭಾರ್ತಿ ಆಕ್ಸಾ ಜನರಲ್ ಇನ್ಶುರೆನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅಮರ್ ನಾಥ್ ಅನಂತ ನಾರಾಯಣನ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸೌಲಭ್ಯ ಆಯ್ಕೆ ಮಾಡಿಕೊಂಡ ಕಾರು ಮಾಲೀಕರು1800 -1020-100 ಸಂಖ್ಯೆಗೆ ಕರೆ ಮಾಡಿ ಈ ಸೇವೆ ಪಡೆದುಕೊಳ್ಳಬಹುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.