ಅಮೆರಿಕದ ಫೀನಿಕ್ಸ್ನ `ಆರತಿ ಸ್ಕೂಲ್ ಆಫ್ ಡಾನ್ಸ್~ನ ವಿದ್ಯಾರ್ಥಿನಿ ಭಾವನಾ ಏಳು ವರ್ಷದವರೆಗೆ ಭರತನಾಟ್ಯ ಮತ್ತು ಪಾಶ್ಚಿಮಾತ್ಯ ನೃತ್ಯ ಎರಡನ್ನೂ ಅಭ್ಯಾಸ ಮಾಡುತ್ತಿದ್ದಳು. ನಂತರ ತನ್ನ ಅಜ್ಜಿಯ ಸಲಹೆಯಂತೆ ಭರತನಾಟ್ಯದಲ್ಲಿ ಪರಿಣತಿ ಸಾಧಿಸಲು ಕಠಿಣ ಅಭ್ಯಾಸ ಕೈಗೊಂಡಳು.

ಭರತನಾಟ್ಯದ ಹೊರತಾಗಿ ಬಾಸ್ಕೆಟ್ಬಾಲ್ ಆಡುವುದು ಭಾವನಾಳಿಗೆ ಪ್ರೀತಿ. 18 ವರ್ಷದ ಭಾವನಾ ಪೆನ್ಸಿಲ್ವೆನಿಯಾ ವಿವಿಯಲ್ಲಿ ಬಯೊ ಎಂಜಿನಿಯರಿಂಗ್ ಓದುವ ಕನಸು ಕಾಣುತ್ತಿದ್ದಾಳೆ. ಈಗಾಗಲೇ ಅಮೆರಿಕದ ಹಲವೆಡೆ ಕಾರ್ಯಕ್ರಮ ನೀಡಿರುವ ಆಕೆಯ ಕನಸಿಗೆ ತಾಯಿ ಅನುರಾಧಾ ಮತ್ತು ತಂದೆ ವಿದ್ಯಾಶಂಕರ್ ನೀರೆರೆಯುತ್ತಿದ್ದಾರೆ.

ಭಾವನಾಳ ಗುರು, `ಆರತಿ ಸ್ಕೂಲ್ ಆಫ್ ಡಾನ್ಸ್~ನ ಸಂಸ್ಥಾಪಕಿ ಆಶಾ ಗೋಪಾಲ್ ಫೀನಿಕ್ಸ್, ಟಕ್ಸನ್ ಮತ್ತು ಲಾಸ್ ವೆಗಾಸ್ನಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಗುರು ಮುತ್ತಯ್ಯ ಪಿಳ್ಳೈ, ಕಿಟ್ಟಪ್ಪ ಪಿಳ್ಳೈ ಮತ್ತು ಪ್ರೊ. ಯು.ಎಸ್. ಕೃಷ್ಣರಾವ್ ಅವರ ಶಿಷ್ಯೆಯಾಗಿರುವ ಆಶಾ, ಅಮೆರಿಕದಲ್ಲಿ ಭರತನಾಟ್ಯದ ಕಂಪು ಹರಡುತ್ತಿದ್ದಾರೆ.
ಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ.ರಸ್ತೆ ಸಂಜೆ 5.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.