ಮಂಗಳವಾರ, ಜೂನ್ 15, 2021
22 °C

ಭೂಕಂದಾಯ ಕಾಯ್ದೆಗೆ ತಿದ್ದುಪಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ವಿತರಿಸುವ `ಅಕ್ರಮ-ಸಕ್ರಮ~ ಕಾರ್ಯಕ್ರಮವನ್ನು ಮತ್ತೊಮ್ಮೆ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.ರಾಜ್ಯದಲ್ಲಿ ಅನೇಕ ಜನರು ಸರ್ಕಾರಿ ಜಮೀನುಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಬಡವರು, ಹಿಂದುಳಿದ ವರ್ಗದವರಿದ್ದು ಅರ್ಹರಿಗೆ ಮನೆಗಳ ಮೇಲಿನ ಹಕ್ಕುಗಳನ್ನು ನೀಡುವ ಹಿತದೃಷ್ಟಿಯಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 94-ಸಿ ಅಡಿಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಸಲುವಾಗಿ ತಿದ್ದುಪಡಿ ತರಲು ಸರ್ಕಾರವು ಉದ್ದೇಶಿಸಿದೆ.ಈ ತಿದ್ದುಪಡಿಯನ್ನು ತರುವಾಗ ಕೆಲವೊಂದು ಷರತ್ತುಗಳನ್ನು ವಿಧಿಸಿ ಈಗಾಗಲೇ ಮನೆ ಅಥವಾ ನಿವೇಶನಗಳನ್ನು ಹೊಂದಿರುವವರಿಗೆ ಹೊಸದಾಗಿ ಜಮೀನು ಮಂಜೂರು ಮಾಡದೇ ಅವಶ್ಯಕತೆಗೆ ಅನುಸಾರವಾಗಿ ಅರ್ಹರಿಗೆ ಮಾತ್ರ ಅವರ ವಾಸದ ಮನೆಯಡಿ ಸ್ಥಳವನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗುವುದು.* 4 ನಗರಗಳಲ್ಲಿ ನಗರ ಸ್ವತ್ತು ಮಾಲೀಕತ್ವದ ದಾಖಲೆಗಳ ಕ್ರಾಂತಿಕಾರಿ ಅನುಷ್ಠಾನ ಪ್ರಕ್ರಿಯೆ 9 ತಿಂಗಳಲ್ಲಿ ಪೂರ್ಣ.* 2012-13ನೇ ಸಾಲಿನಲ್ಲಿ ಬೆಂಗಳೂರು ನಗರದ 50 ವಾರ್ಡುಗಳಲ್ಲಿ ಮೊದಲ ಹಂತದಲ್ಲಿ ಅನುಷ್ಠಾನ.* ಯಾವುದೇ ಭಾಗದಲ್ಲಿ ಭೂಮಿಯನ್ನು ನೋಂದಣಿ ಮಾಡಿಸುವ ವ್ಯವಸ್ಥೆ ಸದ್ಯ ಬೆಂಗಳೂರಿನಲ್ಲಿ ಜಾರಿಯಲ್ಲಿದ್ದು, ಎಲ್ಲ ಜಿಲ್ಲೆಗಳಿಗೂ ಇದರ ವಿಸ್ತರಣೆ.*  2012-13ನೇ ಸಾಲಿನಲ್ಲಿ ನೋಂದಣಿ ಮಾಡಿಸುವ ಪ್ರತಿ ದಸ್ತಾವೇಜಿನ ಭಾಗವಾಗಿ ಏಕ ರೀತಿ ಇಂಡೆಕ್ಸ್ ಹಾಳೆಯನ್ನು ಕಡ್ಡಾಯಗೊಳಿಸುವುದರ ಮೂಲಕ ನೋಂದಣಿ ಪ್ರಕ್ರಿಯೆಯಲ್ಲಿ ಮತ್ತಷ್ಟು ಸುಧಾರಣೆ.*  2012-13ನೇ ಸಾಲಿನಲ್ಲಿ ಭೂಮಿ, ಕಾವೇರಿ ಮತ್ತು ಮೋಜಣಿ ವ್ಯವಸ್ಥೆಗಳ ನಡುವೆ ಸಂಪೂರ್ಣ

ವಿದ್ಯುನ್ಮಾನ ಸಂಯೋಜನೆ.* ಸರ್ಕಾರಿ ಭೂಮಿಗಳನ್ನು ರಕ್ಷಿಸಲು ಕರ್ನಾಟಕ ಸಾರ್ವಜನಿಕ ಭೂಮಿ ನಿಗಮಕ್ಕೆ 10 ಕೋಟಿ ರೂಪಾಯಿ.ಮುಜರಾಯಿ ಇಲಾಖೆ

*  ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ರೂಪಾಯಿ.* ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ 2 ಕೋಟಿ ರೂಪಾಯಿ.* ತಿಪಟೂರು ತಾಲ್ಲೂಕಿನ ಶ್ರಿ ಕಾಡಸಿದ್ಧೇಶ್ವರ ಶ್ರಿ ಮಠಕ್ಕೆ 1 ಕೋಟಿ ರೂಪಾಯಿ .* ಬೆಂಗಳೂರಿನ ಕೆಂಗೇರಿ ಬಳಿ ಇರುವ ರಾಮೋಹಳ್ಳಿಯಲ್ಲಿ ಸ್ಥಾಪಿಸಲಿರುವ ತರಬೇತಿ ಹಾಗೂ ಸಂಶೋಧನಾ ಕೇಂದ್ರಕ್ಕಾಗಿ ಶ್ರಿಸಿದ್ದಾರೂಢ ಮಿಷನ್‌ಗೆ 1 ಕೋಟಿ ರೂಪಾಯಿ.* ಹೊರ ರಾಜ್ಯದ ಛತ್ರಗಳ ನಿರ್ವಹಣೆಗಾಗಿ 10 ಕೋಟಿ ರೂಪಾಯಿ.* ರುದ್ರಭೂಮಿ ನಿರ್ವಹಣೆಗಾಗಿ 10 ಕೋಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.