ಬುಧವಾರ, ಜನವರಿ 22, 2020
24 °C

ಭೂಕಂಪ ಭೀತಿ ತಂದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗ್ರಾ (ಐಎಎನ್‌ಎಸ್): ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕುಚೇಷ್ಟೆಗೆಂದು ಕಳುಹಿಸಿದ ಎಸ್‌ಎಂಎಸ್, ಭೂಕಂಪದ ಭೀತಿಗೆ ಕಾರಣವಾಗಿ ಕೆಲಕಾಲ ಜನರಲ್ಲಿ ಗಲಿಬಿಲಿುನ್ನು ಉಂಟುಮಾಡಿತು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹೆಸರಿನಲ್ಲಿ (ಎನ್‌ಡಿಎಂಎ) ಕಳುಹಿಸಲಾದ ಈ ಸಂದೇಶವು ಭೂಕಂಪದ ವೇಳೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳನ್ನು ಒಳಗೊಂಡಿತ್ತು.ಭೂಕಂಪಕ್ಕೆ ಮುನ್ನ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸುರಕ್ಷಿತ ಸ್ಥಳಗಳನ್ನು ಗುರುತಿಸಿಕೊಳ್ಳಿ, ಅಗತ್ಯ ಔಷಧಿಗಳನ್ನು ಇಟ್ಟುಕೊಳ್ಳಿ- ಎನ್‌ಡಿಎಂಎ ಎಂದು ಸಂದೇಶದಲ್ಲಿ ಬರೆಯಲಾಗಿತ್ತು. ಸಂದೇಶ ಕಳುಹಿಸಿದ ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್ ಚೌಹಾಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)