ಗುರುವಾರ , ಜೂನ್ 24, 2021
29 °C

ಭೂಗರ್ಭ ಆಳದಲ್ಲಿ ಅಗಾಧ ಜಲರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೊರಾಂಟೊ (ಪಿಟಿಐ): ಭೂಗರ್ಭ ಆಳದಲ್ಲಿ ದೊರೆತ  ಖನಿಜ ಶಿಲೆ ಯೊಂದನ್ನು ವಿಶ್ಲೇಷಿಸಿರುವ ವಿಜ್ಞಾನಿ ಗಳು, ಅದರಲ್ಲಿ ಸಾಕಷ್ಟು ನೀರಿನಂಶ ಇರು­ವುದನ್ನು ಪತ್ತೆಹಚ್ಚಿ­ದ್ದಾರೆ. ಇದ ರಿಂದ ಭೂಮಿಯ ಮೇಲ್ಪದರ ಮತ್ತು ಒಳಪದರಗಳ ಮಧ್ಯೆಯ ಸುಮಾರು 410ರಿಂದ 660 ಕಿ.ಮೀ. ಆಳದಲ್ಲಿ ಅಗಾಧ ಜಲರಾಶಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಕೆನಡಾದ ಅಲ್ಬರ್ಟಾ ವಿಶ್ವ­ವಿದ್ಯಾ ಲಯದ ಉತ್ತರ ಧ್ರುವ ಪ್ರದೇಶದ ಸಂಪನ್ಮೂಲ ಸಂಶೋಧನಾ ಪೀಠದ ಸಂಶೋಧಕ ಗ್ರಹಾಂ ಪಿಯರ್‌ಸನ್‌ ಅವರ ನೇತೃತ್ವದ ಅಂತರರಾಷ್ಟ್ರೀಯ ಸಂಶೋಧಕರ ತಂಡವು ಇದೇ ಮೊದಲ ಬಾರಿಗೆ ಆಳ ಭೂಗರ್ಭದಲ್ಲಿ ಪತ್ತೆ ಯಾದ ‘ರಿಂಗ್‌ವುಡೈಟ್‌’ ಎಂಬ ಖನಿಜದ ಮಾದರಿಯನ್ನು ವಿಶ್ಲೇಷಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.‘ಈ ಖನಿಜದ ಒಟ್ಟು ತೂಕದಲ್ಲಿ ಶೇ 1.5 ಪ್ರಮಾಣದಷ್ಟು ನೀರಿನಂಶ ಇದೆ. ಇದ­­ರಿಂದ ಖನಿಜ ಪತ್ತೆಯಾದ ಪ್ರದೇಶದಲ್ಲಿ ದೊಡ್ಡ ಜಲ­ರಾಶಿ ಇದೆ ಎಂಬುದು ಖಾತರಿ  ಆಗುತ್ತದೆ’ ಎಂದು ಪಿಯರ್‌ಸನ್‌ ಹೇಳಿದ್ದಾರೆ.‘ಈ ಅಗಾಧ ಜಲರಾಶಿ ಇರುವ ಪ್ರದೇಶವು ಭೂಮಿಯ ಪರಿವರ್ತನೆ ವಲಯವಾಗಿದ್ದು, ಇದರಿಂದಲೇ ಅಪಾರ ಜಲರಾಶಿಯನ್ನು ಹೊಂದಿರುವ ವಿಶ್ವದ ಮಹಾಸಾಗರಗಳು ಒಂದ ಕ್ಕೊಂದು ಬೆಸದುಕೊಂಡಿರುವ ಸಾಧ್ಯತೆ ಇದೆ’ ಎಂದೂ ಅವರು ತಿಳಿಸಿದ್ದಾರೆ.

ಪಿಯರ್‌ಸನ್‌ ಅವರ ತಂಡ ವಿಶ್ಲೇಷಿಸಿರುವ ಈ ಖನಿಜವು ಬ್ರೆಜಿಲ್‌ನ ಮಾಟೊ ಗ್ರಾಸೊದ ಜುಯಿನಾ ಪ್ರದೇಶದಲ್ಲಿನ ಗಣಿಯೊಂದರಲ್ಲಿ 2008ರಲ್ಲಿ ಪತ್ತೆ ಆಗಿತ್ತು.

ತಾಪಮಾನ ತಗ್ಗಿದ್ದರೂ ಬಿಸಿಯೇರುತ್ತಿರುವ ಭೂಮಿ

ವಾಷಿಂಗ್ಟನ್‌ (ಪಿಟಿಐ): ಜಾಗತಿಕ ತಾಪಮಾನ ಏರಿಕೆ ಪ್ರಮಾಣ ತುಸು ಕುಂಠಿತ ವಾಗಿದ್ದರೂ ಭೂಮಿ ಬಿಸಿಯೇರುವಿಕೆ ಪ್ರಮಾಣ ತಗ್ಗಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಹೊಸ ಅಧ್ಯಯನ ಹೇಳಿದೆ.ಈ ಹಿಂದೆ ಅಂದಾಜಿಸಿದ್ದಕ್ಕಿಂತಲೂ ಭೂಮಿಯ ತಾಪಮಾನದಲ್ಲಿ ಸ್ಥೂಲವಾಗಿ ಶೇ 20ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು 150 ವರ್ಷಗಳ ಕಾಲದ ಭೂ ಮೇಲ್ಮೈ ಹವಾಮಾನವನ್ನು ಅಧ್ಯಯನ ನಡೆಸಿರುವ ನಾಸಾದ ಗಾಡಾರ್ಡ್‌ ಸಂಸ್ಥೆ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.