ಬುಧವಾರ, ಫೆಬ್ರವರಿ 24, 2021
23 °C

ಭೂತಾನ್‌: ಜಗತ್ತಿನ ಮೊದಲ ಇಂಗಾಲ ನೆಗೆಟಿವ್‌ ರಾಷ್ಟ್ರ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಭೂತಾನ್‌: ಜಗತ್ತಿನ ಮೊದಲ ಇಂಗಾಲ ನೆಗೆಟಿವ್‌ ರಾಷ್ಟ್ರ

1.  ಕಾರ್ಬನ್‌ ನೆಗೆಟಿವ್‌ ಎಂದರೆ...

ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಇಂಗಾಲವನ್ನು (ಹಸಿರುಮನೆ ಅನಿಲ– ಪ್ರಧಾನವಾಗಿ ಇಂಗಾಲದ ಡೈ ಆಕ್ಸೈಡ್‌) ಹೊರಸೂಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಹೀರಿಕೊಳ್ಳುವುದು.2. ಕಾರ್ಬನ್‌ ನೆಗೆಟಿವ್‌ಗೆ ಕಾರಣಗಳೇನು?

* ಭೂತಾನಿನ ಶೇ 72 ಭೂಭಾಗ ಅರಣ್ಯದಿಂದ ಕೂಡಿದೆ

*  ಮರಗಳ ಅಕ್ರಮ ಸಾಗಣೆ ಮೇಲೆ ನಿಷೇಧ

* ಪರಿಸರಕ್ಕೆ ಮಾರಕವಾಗುವಂತಹ ಪೆಟ್ರೋಲಿಯಂ, ಕಲ್ಲಿದ್ದಲು ಮತ್ತಿತರ ಇಂಧನ ಮೂಲಗಳ ಬದಲಾಗಿ ಜಲವಿದ್ಯುತ್‌ ಬಳಕೆಗೆ ಹೆಚ್ಚು ಉತ್ತೇಜನ

* ‘ಪರಿಸರ ಸಂರಕ್ಷಣೆ’ ಭೂತಾನ್‌ನ ರಾಜಕೀಯ ಕಾರ್ಯಸೂಚಿಯ ಪ್ರಧಾನ ಅಂಶವೂ ಹೌದು3. ಮುಂದೆ...?

2030ರ ವೇಳೆಗೆ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಮತ್ತು ತ್ಯಾಜ್ಯ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮಹತ್ವಾಕಾಂಕ್ಷೆ ಭೂತಾನ್‌ಗಿದೆ. ಇದಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ.* ಪವನ ಶಕ್ತಿ, ಬಯೊಗ್ಯಾಸ್‌, ಸೌರಶಕ್ತಿ ಹೆಚ್ಚಾಗಿ ಬಳಸುವುದಕ್ಕಾಗಿ ಸಮಗ್ರ ಕ್ರಿಯಾ ಯೋಜನೆ

* ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳಿಗೆ ಉತ್ತೇಜನ

* ಕುಟುಂಬಗಳು ಅಡುಗೆಗೆ ಉರುವಲು ಬಳಸುವುದನ್ನು ತಪ್ಪಿಸುವುದಕ್ಕಾಗಿ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ

* ಹೆಚ್ಚೆಚ್ಚು ಸಸಿಗಳನ್ನು ನೆಡುವುದುಸಂವಿಧಾನದಲ್ಲೇ ಉಲ್ಲೇಖ!

ದೇಶದ ಅರಣ್ಯ ಸಂಪತ್ತು ಯಾವುದೇ ಕಾರಣಕ್ಕೂ ಶೇ 60ಕ್ಕಿಂತ ಕಡಿಮೆಯಾಗಬಾರದು ಎಂಬ ನಿಯಮ ಭೂತಾನ್‌ ಸಂವಿಧಾನದಲ್ಲೇ ಇದೆ. ಇದಕ್ಕಾಗಿಯೇ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು.15 ಲಕ್ಷ ಟನ್‌ ಭೂತಾನ್‌ ವಾರ್ಷಿಕವಾಗಿ ಹೊರಸೂಸುವ ಇಂಗಾಲದ ಪ್ರಮಾಣ60 ಲಕ್ಷ ಟನ್‌ ಭೂತಾನ್‌ನ ಕಾಡುಗಳು ಹೀರಿಕೊಳ್ಳುವ ಇಂಗಾಲ ಪ್ರಮಾಣ8 ಲಕ್ಷ ಅಂದಾಜು ಜನಸಂಖ್ಯೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.