ಮಿಯಾಮಿ, ಅಮೆರಿಕ (ಪಿಟಿಐ/ ರಾಯಿಟರ್ಸ್): ಮಹೇಶ್ ಭೂಪತಿ ಮತ್ತು ಕೆವಿನ್ ಆ್ಯಂಡರ್ಸನ್ ಜೋಡಿ ಸೋನಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಭಾರತ- ದಕ್ಷಿಣ ಆಫ್ರಿಕಾ ಜೋಡಿ 4-6, 6-4, 6-10 ರಲ್ಲಿ ಆಸ್ಟ್ರಿಯದ ಅಲೆಕ್ಸಾಂಡರ್ ಪೆಯಾ ಮತ್ತು ಬ್ರೆಜಿಲ್ನ ಬ್ರೂನೊ ಸೊರೇಜ್ ಕೈಯಲ್ಲಿ ಪರಾಭವಗೊಂಡಿತು.

ಒಂದು ಗಂಟೆ 28 ನಿಮಿಷ ನಡೆದ ಹೋರಾಟದಲ್ಲಿ ಪೇಸ್ ಮತ್ತು ಆ್ಯಂಡರ್ಸನ್ ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದರೂ ಎರಡನೇ ಸೆಟ್ ಗೆದ್ದು ಸಮಬಲ ಸಾಧಿಸಿದರು. ಆದರೆ ಟೈಬ್ರೇಕರ್ನಲ್ಲಿ ಮತ್ತೆ ಪ್ರಭುತ್ವ ಮೆರೆದ ಪೆಯಾ ಹಾಗೂ ಸೊರೇಜ್ ಮುಂದಿನ ಹಂತ ಪ್ರವೇಶಿಸಿದರು.

ಇದೀಗ ಟೂರ್ನಿಯಲ್ಲಿ ರೋಹನ್ ಬೋಪಣ್ಣ ಮಾತ್ರ ಭಾರತದ ಭರವಸೆ ಎನಿಸಿದ್ದಾರೆ. ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೋಡಿ ಈಗಾಗಲೇ ಎರಡನೇ ಸುತ್ತು ಪ್ರವೇಶಿಸಿದೆ.

ಸೆರೆನಾ, ಶರ್ಪೋವಾಗೆ ಜಯ: ವಿಶ್ವದ ಅಗ್ರ ರ್ಯಾಂಕ್ ನ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮತ್ತು ಮರಿಯಾ ಶರ್ಪೋವಾ ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತು ಪ್ರವೇಶಿಸಿದರು.

ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ 6-4, 4-6, 6-4 ರಲ್ಲಿ ಫ್ರಾನ್ಸ್ನ ಕ್ಯಾರೊಲಿನ್ ಗಾರ್ಸಿಯಾ ವಿರುದ್ಧ ಜಯ ಪಡೆದರು. ರಷ್ಯಾದ ಶರ್ಪೋವಾ 6-4, 6-7, 6-2 ರಲ್ಲಿ ಜೆಕ್ ಗಣರಾಜ್ಯದ ಲೂಸಿ ಸಫರೋವಾ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಸರ್ಬಿಯದ ಅನಾ ಇವನೋವಿಚ್ 6-4, 6-3 ರಲ್ಲಿ ಇಟಲಿಯ ಫ್ಲೇವಿಯಾ ಪೆನೆಟಾ ಎದುರೂ, ಜರ್ಮನಿಯ ಏಂಜೆಲಿಕ್ ಕೆರ್ಬರ್ 6-0, 6-2 ರಲ್ಲಿ ಬಲ್ಗೇರಿಯದ ಸ್ವೆಟಾನಾ ಪಿರೊಕೋವಾ ಮೇಲೂ, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 6-3, 6-4 ರಲ್ಲಿ ಕ್ರೊಯೇಷ್ಯದ ಡಾನಾ ವೆಕಿಕ್ ವಿರುದ್ಧವೂ ಗೆಲುವು ಪಡೆದರು.

ಮೂರನೇ ಸುತ್ತಿಗೆ ನಡಾಲ್: ಅಗ್ರಶ್ರೇಯಾಂಕದ ಆಟಗಾರ ಸ್ಪೇನ್ನ ರಫೆಲ್ ನಡಾಲ್ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು. ಶನಿವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್ 6-1, 6-3 ರಲ್ಲಿ ಆಸ್ಟ್ರೇಲಿಯದ ಲೇಟನ್ ಹೆವಿಟ್ ವಿರುದ್ಧ ಗೆದ್ದರು.

ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 7-6, 6-1 ರಲ್ಲಿ ಫ್ರಾನ್ಸ್ನ ಸ್ಟೆಫಾನ್ ರಾಬರ್ಟ್ ಎದುರೂ, ಸ್ವಿಟ್ಜರ್ಲೆಂಡ್ನ ಸ್ಟಾನಿಸ್ಲಾಸ್ ವಾವ್ರಿಂಕಾ 6-0, 3-6, 6-3 ರಲ್ಲಿ ಸ್ಪೇನ್ನ ಡೇನಿಯಲ್ ಟ್ರೆವರ್ ವಿರುದ್ಧವೂ ಗೆಲುವು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.