ಭಾನುವಾರ, ಮಾರ್ಚ್ 7, 2021
19 °C
ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ತೀರ್ಮಾನ

ಭೂ ಉಪಯೋಗ ನಿಗದಿಗೆ ಉಪಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂ ಉಪಯೋಗ ನಿಗದಿಗೆ ಉಪಸಮಿತಿ

ಕಲಬುರ್ಗಿ: ಭೂ ಉಪಯೋಗ ನಿಗದಿ ಗೊಳಿಸಲು ‘ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ’ ಅಡಿಯಲ್ಲಿ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆಯಾದ 28 ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲು ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಉಪಸಮಿತಿಯನ್ನು ರಚಿಸಲಾಯಿತು.ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮೊಹಮ್ಮದ್‌ ಅಸಗರ ಚುಲಬುಲ್‌ ಅವರ ಅಧ್ಯಕ್ಷತೆಯಲ್ಲಿ ಮುಂದುವರಿದ ಸಾಮಾನ್ಯ ಸಭೆಯು ಗುರುವಾರ ನಡೆಯಿತು.ಭೂ ಉಪಯೋಗ ನಿಗದಿಗೊಳಿ ಸುವ ವಿಚಾರವು ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ವಿಧಾನ ಪರಿಷತ್‌ ಸದಸ್ಯ ಕೆ.ಬಿ.ಶಾಣಪ್ಪ ಅವರು ಪ್ರಾಧಿಕಾ ರದ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ‘ಖಾಸಗಿ ಬಡಾವಣೆಗಳಲ್ಲಿ ಉದ್ಯಾನ ಅಭಿವೃದ್ಧಿಗೆ ಮೀಸಲಿಟ್ಟ ಜಾಗವನ್ನು ಐದು ವರ್ಷಗಳಾದರೂ ಏಕೆ ಸ್ವಾಧೀನಪಡಿಸಿಕೊಂಡಿಲ್ಲ. ಅಧಿಕಾರಿ ಗಳು ಉದ್ದೇಶಪೂರ್ವಕ ವಾಗಿಯೆ ಹೀಗೆ ಮಾಡಿದ್ದೀರಿ’ ಎಂದು ಆರೋಪಿಸಿದರು.‘ಉದ್ಯಾನದ ಜಾಗವನ್ನು ಒಂದು ವೇಳೆ ನಿವೇಶನಕ್ಕಾಗಿ ಬಿಟ್ಟುಕೊಟ್ಟರೆ ನಗರದಲ್ಲಿ ಯಾವ ಬಡಾವಣೆಯಲ್ಲೂ ಉದ್ಯಾನಗಳಿರುವುದಿಲ್ಲ. ಪ್ರಾಧಿಕಾರದಲ್ಲಿ ನಾನು ಸದಸ್ಯನಾಗಿರುವ ತನಕ ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.ಶಾಸಕ ಖಮರುಲ್‌ ಇಸ್ಲಾಂ ಮಾತ ನಾಡಿ, ‘ಉದ್ಯಾನಕ್ಕೆ ಮೀಸಲಿರುವ ಜಾಗ ದಲ್ಲಿ ನಿವೇಶನ ಮಾಡಲು ಅವಕಾಶ ಮಾಡಿಕೊಡದಿರುವುದಕ್ಕೆ ನೆರವಾಗುವ ನಿಯಮಗಳ ಪ್ರಾಧಿಕಾರದ ಆಯುಕ್ತರು ಪರಿಶೀಲಿಸಬೇಕು’ ಎಂದು ಸೂಚಿಸಿದರು.ಪಾಲಿಕೆ ಆಯುಕ್ತ ಪಿ.ಸುನೀಲ ಕುಮಾರ್‌ ಮಾತನಾಡಿ, ಕಾಯ್ದೆ ಪ್ರಕಾರವಾಗಿ ಬಡಾವಣೆಗಳ ವಿನ್ಯಾಸವು ಅನುಮೋದನೆಗೊಂಡ ದಿನಾಂಕದಿಂದ ಐದು ವರ್ಷಗಳ ಒಳಗಾಗಿ ನಿಗದಿತ ಉದ್ದೇಶಕ್ಕೆ ಪ್ರಾಧಿಕಾರವು ಸ್ವಾಧೀನ ಪಡಿಸಿಕೊಳ್ಳದೆ ಇದ್ದಲ್ಲಿ ಜಮೀನಿನ ಮಾಲೀಕರು ಕೋರುವ ಉದ್ದೇಶಕ್ಕೆ ಭೂ ಉಪಯೋಗ ನಿಗದಿಗೊಳಿಸಲು ಅವಕಾಶವಿದೆ.ಪ್ರಾಧಿಕಾರದಲ್ಲಿ ಹಣಕಾಸಿನ ಕೊರತೆಯಿಂದ ಉದ್ಯಾನ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುವ ಕಾರಣದಿಂದ ಅರ್ಜಿಗಳನ್ನು ತಿರಸ್ಕರಿಸುವುದಕ್ಕೆ ಹಲವು ನಿಬಂಧನೆಗಳಿವೆ’ ಎಂದು ತಿಳಿಸಿದರು. ನಿಯಮಗಳ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಉಪ ಸಮಿತಿ ರಚಿಸಲು ಎಲ್ಲ ಸದಸ್ಯರು ಸಮ್ಮತಿಸಿದರು.

ವಿನ್ಯಾಸಗಳ ಅನುಮೋದನೆ: ನಗರ ವ್ಯಾಪ್ತಿಯಲ್ಲಿ ಹೊಸದಾಗಿ ವಸತಿ, ಶಿಕ್ಷಣ ಹಾಗೂ ಉದ್ಯಮ ಸ್ಥಾಪನೆಗಾಗಿ 30 ನೀಲನಕ್ಷೆ ವಿನ್ಯಾಸಗಳಿಗೆ ಚರ್ಚೆಯ ಬಳಿಕ ಅನುಮೋದನೆ ನೀಡಲಾಯಿತು.

ಶಾಸಕ ಖಮರುಲ್‌ ಇಸ್ಲಾಂ ಅವರು ಮಾತನಾಡಿ, ಎರಡು ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ವಿನ್ಯಾಸಗಳನ್ನು ಖುದ್ದಾಗಿ ವೀಕ್ಷಿಸಿ ಒಪ್ಪಿಗೆ ನೀಡಿ ಎಂದರು.ಶಾಸಕ ದತ್ತಾತ್ರೇಯ ಪಾಟೀಲ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವಿನ್ಯಾಸಕ್ಕೆ ಅನುಮೋದನೆ ನೀಡುವ ವಿಚಾರ ಆಡಳಿತಾತ್ಮಕ. ಹೀಗಾಗಿ ಪ್ರಾಧಿಕಾರವು ವಿನಾಕಾರಣ ಜನರಿಗೆ ತೊಂದರೆ ಕೊಡಬಾರದು ಎಂದರು ತಿಳಿಸಿದರು.ಪಾಲಿಕೆ ಆಯುಕ್ತ ಪಿ.ಸುನೀಲ ಕುಮಾರ್‌ ಮಾತನಾಡಿ, ವಿನ್ಯಾಸಗಳ ಅನುಮೋದನೆ ಸಂಪೂರ್ಣ ಆಡಳಿತಾ ತ್ಮಕವಾಗಿದೆ. ಪ್ರತಿಯೊಂದು ನಿವೇಶ ನಕ್ಕೂ ಭೇಟಿ ಕೊಡುವುದು ಅಸಾಧ್ಯ. ಪ್ರಮಾಣಪತ್ರಗಳನ್ನು ಆಧರಿಸಿಯೆ ಅನುಮೋದನೆ ನೀಡಲಾಗುತ್ತದೆ. ಈ ಬಗ್ಗೆ ಸಂಶಯ ಮತ್ತು ದೂರುಗಳಿದ್ದರೆ ಮಾತ್ರ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಬಹುದು ಎಂದರು.ಕಾಮರೆಡ್ಡಿ ಆಸ್ಪತ್ರೆಗೆ ಒಪ್ಪಿಗೆ: ನಗರದ ಬ್ರಹ್ಮಪುರ ಸರ್ವೆ ಸಂಖ್ಯೆ 55ರ ನಿವೇಶನ ಸಂಖ್ಯೆ 9ರಲ್ಲಿ ವಸತಿ ಉದ್ದೇಶಿತ ಕಟ್ಟಡ ಆಸ್ಪತ್ರೆ ಉದ್ದೇಶಕ್ಕೆ ಅನುಮತಿ ನೀಡು ವಂತೆ ಡಾ.ಪ್ರತಿಮಾ ಎಸ್‌.ಕಾಮರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸಭೆಯಲ್ಲಿ ಅನುಮೋದಿಸಲಾಯಿತು.ವಸತಿ ಪ್ರದೇಶಗಳಲ್ಲಿ ಆಸ್ಪತ್ರೆಗಳು ಇರಬಾರದು ಎನ್ನುವುದಾದರೆ ನಗರದ ಎಲ್ಲ ಆಸ್ಪತ್ರೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.‘ಸಾರ್ವಜನಿಕರಿಗೆ ತೊಂದರೆ ಯಾಗದ ರೀತಿಯಲ್ಲಿ ಕೆಲವು ನಿಯಮ ಗಳನ್ನು ಅನುಸರಿಸುವಂತೆ ಆಸ್ಪತ್ರೆಗೆ ನೋಟಿಸ್‌ ಜಾರಿಗೊಳಿಸಲಾಗುವುದು’ ಎಂದು ಆಯುಕ್ತ ಪಿ.ಸುನೀಲ ಕುಮಾರ್ ಹೇಳಿಕೆಗೆ ಸದಸ್ಯರು ಬೆಂಬಲಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ಅಮರನಾಥ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

*

ಯಾವುದೇ ಇಲಾಖೆಯ ಅಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಹೆದರಿ ಕೆಲಸ ಮಾಡಬೇಡಿ. ಸರ್ಕಾರದ ಕಾಯ್ದೆ ಅನುಸರಿಸಿ ಕೆಲಸ ಮಾಡಿ.

-ಖಮರುಲ್‌ ಇಸ್ಲಾಂ, ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.