ಮಂಗಳವಾರ, ಏಪ್ರಿಲ್ 20, 2021
32 °C

ಭ್ರಷ್ಟಾಚಾರ ತಡೆಯಲು ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ದೇಶದಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮುಂದಾಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಡಾ. ಶಿವರಾಜ ಪಾಟೀಲ್‌ ಅವರು ಹೇಳಿದರು.ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘವುಬುಧವಾರ ಆಯೋಜಿಸಿದ್ದ  ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪೂರ್ವ ಅಧ್ಯಕ್ಷ ಸನ್ಮಾನ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.ಭ್ರಷ್ಟಾಚಾರದಿಂದ ಉತ್ತಮ ಆಡಳಿತ ನಡೆಸಲು ಸಾಧ್ಯವಿಲ್ಲ. ದೇಶದ ಜನತೆ ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಹೋರಾಟವೇ ಒಂದು ಸಾಕ್ಷಿಯಾಗಿದೆ. ಉದ್ಯೋಗ ದೊರಕುವುದು ಸೇವೆಗಾಗಿ ಅದರಿಂದ ಅಧಿಕಾರ ನಡೆಸಬಾರದು ಎಂದು ತಿಳಿಸಿದರು.ಅಧಿಕಾರ ಹಾಗೂ ಉದ್ಯೋಗವನ್ನು ಕರ್ತವ್ಯದ ಭಾವನೆ ಬರಬೇಕು. ಇದರಿಂದ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವಾಗುತ್ತದೆ.ಅಧಿಕಾರ ಚಲಾಯಿಸುವಾಗ ಪ್ರಾಣಿಕತೆ ಹಾಗೂ ಬದ್ಧತೆಯನ್ನು ಹೊಂದಿರಬೇಕು. ವಾಣಿಜ್ಯೋದ್ಯ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ತಮ್ಮ ಸೇವೆ ಕಲ್ಪಿಸವಂಥ ಕಾರ್ಯ ನಡೆಸಬೇಕು ಎಂದು ಹೇಳಿದರು.ವಾಣಿಜ್ಯೋದ್ಯಮ ಸಂಘದ ನೂತನ ಅಧ್ಯಕ್ಷ ಜವಾಹರ ಜೈನ್‌ ಮಾತನಾಡಿ, ಸಂಘದ ಪದಾಧಿಕಾರಿ ಹಾಗೂ ಸದಸ್ಯರ ಸಹಕಾರದೊಂದಿಗೆ ಸಂಘದ  ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಮಾತನಾಡಿ, ನಗರದ ಅಭಿವೃದ್ಧಿ ಹಿನ್ನೆಲೆಯಲ್ಲಿ ವಾಣಿಜ್ಯೋದ್ಯಮ ಸಂಘವು ತಮ್ಮೊಂದಿಗೆ ಸಹಕಾರ ನೀಡುತ್ತಿದೆ. ನಗರದ ಜನತೆ ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.ಶಾಸಕ ಸಯ್ಯದ್‌ ಯಾಸಿನ್‌ ಮಾತನಾಡಿ, ನಗರದ ಸೌಂದರ್ಯೀಕರಣಗೊಳಿಸಲು ಎಲ್ಲ ಸಹಕಾರ ಅಗತ್ಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ವಾಣಿಜ್ಯೋದ್ಯಮ ಸಂಘ ಹಿಂದಿನ ಅಧ್ಯಕ್ಷರಾಗಿದ್ದ ಪಾರಸಮಲ್‌ ಸುಖಾಣಿ, ಸುರೇಂದ್ರಕುಮಾರ ಸರಾಡ,ಹರವಿ ನಾಗನಗೌಡ, ಅಶೋಕ ಕುಮಾರ ವರ್ಮಾ, ಕೊಂಡಾ ಕೃಷ್ಣಮೂರ್ತಿ, ಮೈಲಾಪುರ ಎನ್‌.ಮೂರ್ತಿ, ಎಚ್‌.ಶಿವರಾಜ ಪಾಟೀಲ್‌ ರಾಮಚಂದ್ರಪ್ರಭು ಅವರನ್ನು ಸನ್ಮಾನಿಸಲಾಯಿತು.ನೂತನ ಕಾರ್ಯದರ್ಶಿ ತ್ರಿವಿಕ್ರಮ ಜೋಶಿ, ಕಮಲಕುಮಾರ, ಜಗದೀಶ ಗುಪ್ತಾ, ಮುರಳಿ ಲಾಲ್‌, ಅಗರವಾಲ್‌, ವೈ.ಉದಯ, ಮಲ್ಲನ ಗೌಡ, ಕೆ.ವಿ ಮನೋಹರ, ವಿ.ಸಿದ್ಧನಗೌಡ, ಸಾವಿತ್ರ ನಾಗರಾಜ, ವಿಜಯನಾಥ, ಪತಂಗೆ ವಸಂತರಾವ್‌ ಹಾಗೂ ಮತ್ತಿತರರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.