ನವದೆಹಲಿ (ಪಿಟಿಐ): ಪ್ರಾಮಾಣಿಕ ವಿಲೇವಾರಿ ವ್ಯವಸ್ಥೆ, ಪಾರದರ್ಶಕ ಕಾರ್ಯವಿಧಾನ ಹಾಗೂ ಸಾರ್ವಜನಿಕ ಬದ್ಧತೆ ಸೇರಿದಂತೆ ಬಹುಕವಲಿನ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಬೇಕು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶುಕ್ರವಾರ ಇಲ್ಲಿ ಕರೆಯಿತ್ತರು.

ಎರಡು ದಿನಗಳ ರಾಜ್ಯಪಾಲರ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, `ಭ್ರಷ್ಟಾಚಾರದ ಪಿಡುಗು ಅಭಿವೃದ್ಧಿಯನ್ನು ಸ್ಥಗಿತಗೊಳಿಸುತ್ತಿರುವುದರಿಂದ ಮತ್ತು ಕಾನೂನನ್ನು ಮುರಿಯುತ್ತಿರುವುದರಿಂದ ಸಾರ್ವಜನಿಕ ಜೀವದಲ್ಲಿ ಇದರ ವಿರುದ್ಧ ಜನರ ಆಕ್ರೋಶ ಪ್ರಕಟವಾಗುತ್ತಿದೆ~ ಎಂದು ಎಚ್ಚರಿಸಿದರು.

`ನಮ್ಮ ನಾಗರಿಕರು ಸರ್ಕಾರದಿಂದ ಉನ್ನತ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೂ, ಭ್ರಷ್ಟಾಚಾರವು ಅಭಿವೃದ್ಧಿಯನ್ನು ಸ್ಥಗಿತಗೊಳಿಸುತ್ತಿದೆ, ಸಾಮಾಜಿಕ ಪ್ರಗತಿಯನ್ನು ದಮನ ಮಾಡುತ್ತಿದೆ, ಸಾರ್ವಜನಿಕ ಆಡಳಿತದ ನಿಷ್ಪಕ್ಷಪಾತ ಪಾಲನೆಯಲ್ಲಿ ವಿಶ್ವಾಸ ಕಳೆಯುತ್ತಿದೆ, ಉತ್ತಮ ಆಡಳಿತವನ್ನು ಕಡೆಗಣಿಸುತ್ತಿದೆ, ನೆಲದ ಕಾನೂನನ್ನು ಉಲ್ಲಂಘಿಸುತ್ತಿದೆ, ಸ್ಪರ್ಧಾತ್ಮಕ ಪರಿಸ್ಥಿತಿಯನ್ನು ನಿರ್ಲಕ್ಷಿಸುತ್ತಿದೆ, ಬಂಡವಾಳವನ್ನು ಕ್ಷೀಣಿಸುತ್ತಿದೆ ಹಾಗೂ ಇವೆಲ್ಲವೂ ಸಾಮಾನ್ಯ ಜನರನ್ನು ಬಹುವಾಗಿ ಘಾಸಿಗೊಳಿಸುತ್ತಿವೆ~ ಎಂದರು.

ರ್ಯಾಗಿಂಗ್: ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್ ಪಿಡುಗನ್ನು ಪ್ರಸ್ತಾಪಿಸಿದ ಅವರು, ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಇದನ್ನು ನಿರ್ಮೂಲನೆ ಮಾಡಲು ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ಸೂಚಿಸಿದ ಅವರು, ಇದರ ವಿರುದ್ಧ ತಿಳಿವಳಿಕೆ ಮೂಡಿಸಲು ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.