ಕೊಳ್ಳೇಗಾಲ: ದೇಶದ ಸಮಗ್ರ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರ, ಜಾತೀಯತೆ ಹಾಗೂ ಸಾಮಾಜಿಕ ಅಸಮತೋಲನ ನಿರ್ಮೂಲನೆ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವನ್ನು ಮೂಡಿಸುವುದು ಅತ್ಯಗತ್ಯ ಎಂದು ಗೋಪಿನಾಥಂ ಗಡಿನಾಡ ಕನ್ನಡ ಯುವಕರ ಸಂಘದ ಕಾರ್ಯದರ್ಶಿ ಸೆಂದಿಲ್ ತಿಳಿಸಿದರು.

ತಾಲ್ಲೂಕಿನ ಗೋಪಿನಾಥಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ 63ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವ ಜನಾಂಗ ಅಡ್ಡದಾರಿ ಹಿಡಿದು ಹಾಳಾ ಗುತ್ತಿದೆ. ಯುವಶಕ್ತಿಯನ್ನು ಸರಿದಾರಿಯಲ್ಲಿ ಕೊಂಡೊಯ್ದು, ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯವನ್ನು ಬೆಳೆಸಬೇಕಿದೆ ಎಂದು ಹೇಳಿದರು.

ಗ್ರಾ.ಪಂ. ಅಧ್ಯಕ್ಷ ಗುಣಶೇಖರ್ ಧ್ವಜಾರೋಹಣ ನೆರವೇರಿಸಿದರು. ಧ್ವಜವಂದನೆಯನ್ನು ಗಡಿನಾಡ ಕನ್ನಡ ಯುವಕರ ಸಂಘದ ಅಧ್ಯಕ್ಷ ದಂಡಪಾಣಿ ಸ್ವೀಕರಿಸಿದರು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ನಂಜುಂಡಾಚಾರ್ ವಹಿಸಿದ್ದರು. ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಮುರುಗೇಶ, ಗ್ರಾ.ಪಂ. ಕಾರ್ಯದರ್ಶಿ ಪೂಜಾರ್ ಇತರರು ಉಪಸ್ಥಿತರಿದ್ದರು.
ಕಾಮಗೆರೆ: ತಾಲ್ಲೂಕಿನ ಕಾಮಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಸಿ. ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ತೆರೆಸಾ ಅಧ್ಯಕ್ಷತೆ ವಹಿಸ್ದ್ದಿದರು. ಇದೇ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಕೇಂದ್ರ ಮೀಸಲು ಪಡೆ ಪೊಲೀಸ್ ಎ.ರಮೇಶ್ ಮಕ್ಕಳಿಗೆ ಊಟದ ತಟ್ಟೆಗಳನ್ನು ಉಚಿತವಾಗಿ ವಿತರಿಸಿದರು.

ಮುಖ್ಯ ಶಿಕ್ಷಕಿ ಕೆಂಪಮ್ಮ, ದೈಹಿಕ ಶಿಕ್ಷಣದ ಶಿಕ್ಷಕ ಎ. ಸೆಲ್ವರಾಜ್, ಗ್ರಾ.ಪಂ. ಸದಸ್ಯರು, ಮುಖಂಡರು ಇದ್ದರು.
ಮಂಗಲ: ತಾಲ್ಲೂಕಿನ ಮಂಗಲ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ ನೆರವೇರಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ದೊಡ್ಡತಾಯಮ್ಮ ಧ್ವಜಾರೋಹಣ ನೆರವೇರಿಸಿದರು.

ಮುಖ್ಯ ಶಿಕ್ಷಕಿ ಕೆ. ಮಂಜುಳ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಗ್ರಾ.ಪಂ. ಅಧ್ಯಕ್ಷ ಚಿಕ್ಕಸ್ವಾಮಿ, ಶಿಕ್ಷಕ ಪ್ರಭುರಾಜ್, ಜಯರಾಜ್ ಇತರರು ಉಪಸ್ಥಿತ ರಿದ್ದರು.

ಸತ್ತೇಗಾಲ: ತಾಲ್ಲೂಕಿನ ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷ ಎಸ್. ಮಹಾದೇವಪ್ಪ ಧ್ವಜಾ ರೋಹಣ ನೆರವೇರಿಸಿದರು. ನಿರ್ದೇಶಕ ನಂಜುಂಡ ಸ್ವಾಮಿ, ಸಿಇಒ ಎನ್. ಸುಬ್ರಹ್ಮಣ್ಯ ಇತರ ಮುಖಂಡರು ಇದ್ದರು.

ರೋಟರಿ ಸಂಸ್ಥೆ : ಕೊಳ್ಳೇಗಾಲ ಪಟ್ಟಣದ ರೋಟರಿ ಭವನದಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ರೋಟರಿ ಅಧ್ಯಕ್ಷ ಎಂ. ನಂಜುಂಡಯ್ಯ ಧ್ವಜಾ ರೋಹಣ ನೆರವೇರಿಸಿದರು. ಉಪಾಧ್ಯಕ್ಷ ದಿನೇಶ್ಗುಪ್ತಾ, ಇನ್ನರ್ವ್ಹೀಲ್ ಅಧ್ಯಕ್ಷೆ ಶೈಲಾವೀರಭದ್ರಯ್ಯ, ಕಾರ್ಯದರ್ಶಿ ಚೇತನ ಆಶಾಕಿರಣ್, ಕೆ. ಪುಟ್ಟರಸಶೆಟ್ಟಿ, ಬಸವರಾಜು, ಟಿ.ಸಿ.ವೀರಭದ್ರಯ್ಯ, ಶಿವಣ್ಣ, ಕೃಪಾಶಂಕರ್, ಜೋಸೆಫ್ ಫೆರ್ನಾಂಡಿಸ್, ಟಿ.ಸಿ.ವೀರಭದ್ರಯ್ಯ ಇತರರು ಉಪಸ್ಥಿತರಿದ್ದರು.

ಎಂ.ಜಿ.ಎಸ್.ವಿ ಪದವಿ ಪೂರ್ವ ಕಾಲೇಜು: ಪಟ್ಟಣದ ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಿಸ ಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಬಿ.ಮಹದೇವ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಚಂದ್ರಮ್ಮ, ರೋಟರಿ ಅಧ್ಯಕ್ಷ ಎಂ. ನಂಜುಂಡಯ್ಯ, ಎನ್.ಎಸ್.ಎಸ್. ಯೋಜನಾಧಿಕಾರಿ ನರಸಿಂಹಯ್ಯ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.