ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

ಭಾನುವಾರ, ಮೇ 19, 2019
32 °C

ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

Published:
Updated:

ಭಾರತೀನಗರ: ಭ್ರಷ್ಟಾಚಾರವೆಂಬ ಭೂತ ಸಮಾಜದ ಎಲ್ಲ ಸ್ತರಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದು, ಇದನ್ನು ಹೋಗಲಾಡಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವುದು ಹೇಗೆ ಎಂಬುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಹಿರಿಯ ಗಾಂಧಿವಾದಿ ಸುರೇಂದ್ರಕೌಲಗಿ ಹೇಳಿದರು.ನಗರದ ಭಾರತೀ ಪದವಿ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗ, ಲೋಕಾಯುಕ್ತ ಮಂಡ್ಯ ಇವರ ಸಹಯೋಗದಲ್ಲಿ ಗಾಂಧಿಭವನದಲ್ಲಿ ಆಯೋಜಿಸಿದ್ದ ಯುಜಿಸಿ ಪ್ರಾಯೋಜಿತ `ಭ್ರಷ್ಟಚಾರ ಮುಕ್ತ ಸಮಾಜ- ಒಂದು ಸವಾಲು~ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ `ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ದೇಶದ ಜನತೆ ತುಂಬಾ ನೊಂದಿದ್ದಾರೆ.

ಪ್ರತಿಯೊಂದು ಕೆಲಸಕ್ಕೂ ಲಂಚ ನೀಡಬೇಕಾದ ಅನಿವಾರ್ಯ ಬಂದಿದೆ~ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಂತ ಬುದ್ಧಿಯಿಲ್ಲದ ರಾಜಕಾರಣಿಗಳು: ದೇಶವನ್ನು  ಮುನ್ನಡೆಸುತ್ತಿರುವ ರಾಜಕಾರಣಿಗಳಿಗೆ ಸ್ವಂತ ಬುದ್ಧಿ ಎನ್ನುವುದೇ ಇಲ್ಲ. ಅವರು ಸಂಸತ್ತು ಮತ್ತು ವಿಧಾನ ಸಭೆಯಲ್ಲಿ ಕುಳಿತು ರೂಪಿಸುವ ಎಲ್ಲ ನೀತಿಗಳು ಪಾಶ್ಯಮಾತ್ಯ ಅಭಿವೃದ್ಧಿ ನೀತಿಗಳನ್ನು ಅನುಕರಣೆ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಭ್ರಷ್ಟಾಚಾರ ಮತ್ತಷ್ಟೂ ಹೆಚ್ಚಾಗುತ್ತಿದೆ.ಚುನಾವಣೆ ಗೆದ್ದ ಮಾತ್ರಕ್ಕೆ ಎಲ್ಲವೂ ನಮ್ಮದೇ ನಡೆಯಬೇಕು ಎಂಬ ಜನ ಪ್ರತಿನಿಧಿಗಳ ಧೋರಣೆ ನಿಲ್ಲಬೇಕು. ಅವರು ಜನರ ಪ್ರತಿನಿಧಿ ಅಷ್ಟೆ. ಯಾವುದೇ ಯೋಜನೆ, ನೀತಿ, ನಿಯಮಗಳನ್ನು ರೂಪಿಸುವಾಗ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು ಅದೇ ನಿಜವಾದ ಪ್ರಜಾಪ್ರಭುತ್ವ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಜಿ.ಮಾದೇಗೌಡ ಮಾತನಾಡಿದರು. ಬಿಇಟಿ ಕಾರ್ಯಾಧ್ಯಕ್ಷ ಬಿ.ಬಸವರಾಜು, ಟ್ರಸ್ಟಿಗಳಾದ ಜೋಗಿಗೌಡ, ಚಂದೂಪುರಪಾಪಣ್ಣ,  ಮುದ್ದಯ್ಯ, ಪ್ರಾಂಶುಪಾಲ ಪ್ರೊ.ಕೆ.ಪುಟ್ಟಲಿಂಗಯ್ಯ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರಲಿಂಗೇಗೌಡ, ಸ್ನಾತಕೋತ್ತರ ವಿಭಾಗ ನಿರ್ದೇಶಕ ಪ್ರೊ.ಹನುಮಪ್ಪ, ಜಿಎಂಐಟಿ ಪ್ರಾಂಶುಪಾಲ ಡಾ.ರುದ್ರಯ್ಯಶೆಟ್ಟಹಳ್ಳಿ ಸೇರಿದಂತೆ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ನೂರಾರು ಪ್ರಾಧ್ಯಾಪಕರು ಸೇರಿದಂತೆ ಇತರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.ನಂತರ ನಡೆದ ವಿಚಾರ ಗೋಷ್ಠಿಗಳಲ್ಲಿ `ಭ್ರಷ್ಟಾಚಾರ ನಿಯಂತ್ರಣ-ಸಾಂವಿಧಾನಿಕ ಕ್ರಮಗಳು~ ವಿಷಯ ಕುರಿತು ಪ್ರೊ.ಎಸ್.ಜೆ.ವಾಸುದೇವನ್ ಹಾಗೂ `ಭ್ರಷ್ಟಾಚಾರ ವಿರುದ್ಧ ಚಳುವಳಿ-ಸಾಧಕ ಭಾದಕಗಳು~ ವಿಷಯದ ಬಗ್ಗೆ ಮೈಸೂರು ವಿವಿ ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಕೆ.ಕಾಳೇಗೌಡ ಮಾತನಾಡಿದರು.ಫೆಡರೇಷನ್ ಆಫ್ ಇಂಡಿಯಾನ್ ಛೇಬರ್ಸ್‌ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಸಾಜನ್‌ಪೂವಯ್ಯ, ಕರ್ನಾಟಕ ಮುಕ್ತ ವಿವಿ ಉಪಕುಲಪತಿ ಡಾ.ಹೆಚ್.ಎಂ.ಕೃಷ್ಣಪ್ಪ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಸಂಸ್ಥಾಪಕ ಡಾ.ಆರ್.ಬಾಲಸುಬ್ರಮಣ್ಯ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಹೆಚ್.ಎಂ.ವಸಂತಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿಇಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಮಧು ಜಿ.ಮಾದೇಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ನಾರಾಯಣ್, ಕುಲಸಚಿವ ಡಾ.ಎ.ರಾಮೇಗೌಡ, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ ಸೇರಿದಂತೆ ಇತರರು ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry