ಭಾನುವಾರ, ಏಪ್ರಿಲ್ 18, 2021
32 °C

ಭ್ರಷ್ಟಾರನ್ನು ವಜಾ ಮಾಡಿ: ಶಂಕರ್ ಗುರೂಜಿ ಆಗ್ರಹ-

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ ಐಎಎನ್ ಎಸ್) ~ ಭ್ರಷ್ಟಾಚಾರದಲ್ಲಿ ತೊಡಗಿರುವ ಕೆಲವು ಸಚಿವರೂ ಸೇರಿದಂತೆ ಉನ್ನತ ಸ್ಥಾನಗಳಲ್ಲಿರುವ ಭ್ರಷ್ಟರನ್ನು ವಜಾ ಮಾಡಿ~ ಎಂದು ಶ್ರೀ ಶ್ರೀರವಿ ಶಂಕರ ಗುರೂಜಿ ಅವರು ಶನಿವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಇಲ್ಲಿ ಒತ್ತಾಯಿಸಿದ್ದಾರೆ.ಶನಿವಾರ ಬೆಳಿಗ್ಗೆ ಗಾಂಧೀವಾದಿ ಅಣ್ಣಾ ಹಜಾರೆ ಅವರು ತಮ್ಮ ನಿರಶನವನ್ನು ಕೊನೆಗೊಳಿಸಿದ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಣ್ಣಾ ಹಜಾರೆ ಅವರ ಬೇಡಿಕೆಗೆ ಸ್ಪಂದಿಸಿ ಪ್ರಧಾನಿ ಅವರು ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ದದ ಸಮರ ಈಗ ಆರಂಭಗೊಂಡಿದೆ, ಇದು ಸರಿಯಾದ ನಿಟ್ಟಿನಲ್ಲಿ ಇರಿಸಿದ ಸರಿಯಾದ ಹೆಜ್ಜೆ~ ಎಂದಿರುವ ಅವರು, ~ಪ್ರಧಾನಿ ಮನಮೋಹನ್ ಸಿಂಗ್ ಅವರು, ಸಚಿವರೂ ಸೇರಿದಂತೆ ಉನ್ನತ ಸ್ಥಾನಗಳಲ್ಲಿರುವ ಭ್ರಷ್ಟರನ್ನು ದೂರವಿರಿಸುತ್ತಾರೆ~ ಎಂಬ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.