ಶನಿವಾರ, ಜನವರಿ 25, 2020
29 °C

ಮಂಗಳವಾರ, 17–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

16 ವಸ್ತುಗಳ ಬೆಲೆ ಹತೋಟಿ ರದ್ದು

ನವದೆಹಲಿ, ಡಿ. 16 – ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಮೇಲಿನ ಬೆಲೆ ಹತೋಟಿಯನ್ನು ಕ್ರಮೇಣ ಸಡಿಲಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರದ ಅರ್ಥಸಚಿವ ಶ್ರೀ ಟಿ. ಟಿ. ಕೃಷ್ಣಮಾಚಾರಿ ಅವರು ಇಂದು ಲೋಕ ಸಭೆಯಲ್ಲಿ ಘೋಷಿಸಿದರು.ಕೇಂದ್ರ ಸರ್ಕಾರದ ನಿರ್ಧಾರದ ಪ್ರಕಾರ ಬ್ಲೀಚಿಂಗ್‌ ಪೌಡರ್‌, ಬಟ್ಟೆ ಸಾಬೂನು, ಟೈರು, ಟ್ಯೂಬುಗಳು, ಗಾಜಿನ ಹಾಳೆ, ಪೇಪರ್‌ ಬೋರ್ಡ್‌, ರೇಯಾನ್‌ಹುರಿ, ಕಾಸ್ಟಿಕ್‌ ಸೋಡ, ಹೈಡ್ರೋಕ್ಲೋರಿಕ್‌ ಆಸಿಡ್‌, ಕ್ಲೋರಿನ್‌, ಕ್ಯಾಲ್ಸಿಯಂ ಕಾರ್ಬೈಡ್‌, ಚೆಲಿಪೆಟ್ಲುಪ್ಪು ವಸ್ತುಗಳ ಮೇಲೆ ಬೆಲೆ ಹತೋಟಿ ರದ್ದಾಗುವುದು.

ಪ್ರತಿಕ್ರಿಯಿಸಿ (+)