ಸೋಮವಾರ, ಮೇ 16, 2022
30 °C

ಮಂಗಳವಾರ, 18-10-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿವೇಶನ ಆರಂಭ

ಮಾಸ್ಕೊ, ಅ. 17 -  ಸೋವಿಯತ್ ಕಮ್ಯುನಿಸ್ಟ್ ಪಾರ್ಟಿಯ 22ನೇ ಅಧಿವೇಶನವು ಇಂದು ಆರಂಭವಾಯಿತು. ಪ್ರತಿನಿಧಿಗಳ ಪೈಕಿ ಮಾಜಿ ಪ್ರಧಾನಿ ಬುಲ್ಗಾನಿನ್ ಸಹಾ ಇದ್ದರು.   ಪ್ರಧಾನ ಮಂತ್ರಿಯೂ, ಪಕ್ಷದ ಪ್ರಥಮ ಕಾರ್ಯದರ್ಶಿಯೂ ಆದ ನಿಕಿಟಾ ಖ್ರುಶ್ಚೋವ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾವೇಶಕ್ಕೆ ಆಲ್ಬೇನಿಯದಿಂದ ನಿಯೋಗ ಬಂದಿಲ್ಲವೆಂಬುದನ್ನು ವೀಕ್ಷಕರು ಗಮನಿಸಿದರು.`ಪಕ್ಷಪಾತ ನಡೆದಿದೆಯೆಂದು ತಿಳಿಯದು~

ಬೆಂಗಳೂರು, ಅ. 17 - ಮಂಡಲ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಿಫಾರಸು ಮಾಡುವುದರಲ್ಲಿ ಏಕಪಕ್ಷೀಯವಾದ ಭೇದ ನಡೆದಿದೆ ಎಂಬುದು ತಮಗೆ ತಿಳಿಯದೆಂದು ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.`ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಏನೇ ಹೇಳಿರಲಿ ಕಡೆಯ ಪಕ್ಷ ಮುಂದಿನ ವ್ಯವಸ್ಥೆಯಲ್ಲಾದರೂ (ಸರ್ಕಾರ) ಗುಂಪು ಹಾಗೂ ಪಕ್ಷಗಳು ಇಲ್ಲದಂತಾಗಬೇಕೆಂಬದು ನನ್ನ ಸ್ಪಷ್ಟ ನಿಲುವು~ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.