ಮಂಗಳವಾರ, 25-10-1961
ಅಭ್ಯರ್ಥಿಗಳ ಬಗ್ಗೆ ವರದಿ ಕೇಳಿಕೆ
ಬೆಂಗಳೂರು, ಅ. 24 - ಬರುವ ಮಹಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮಾಡಲು ಇಲ್ಲಿ ಸಭೆ ಸೇರಿರುವ ಮೈಸೂರು ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿಯು, ಸಭೆಯ ನಾಲ್ಕನೆಯ ದಿನವಾದ ಇಂದು, ಕಾಂಗ್ರೆಸ್ ಅಭ್ಯರ್ಥಿಗಳಾಗ ಬಯಸುವವರ ಬಗ್ಗೆ ಮಂಡಲ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಹಾಗೂ ವೀಕ್ಷಕರ ವರದಿಗಳನ್ನು ಕೇಳಿತು.
ಇಂದು ರಾತ್ರಿ ಚುನಾವಣಾ ಸಮಿತಿಯ ಸಭೆ ಮುಗಿದಾಗ ಉತ್ತರ ಕನ್ನಡ, ಬಳ್ಳಾರಿ, ರಾಯಚೂರು, ಬಿಜಾಪುರ, ಬಿದರ್ ಜಿಲ್ಲೆಗಳ ವರದಿಗಳ ಪರಿಶೀಲನೆ ಪೂರ್ಣಗೊಂಡಿತು.
ಹಾರಾಟದಲ್ಲಿನ ಕ್ಷಿಪಣಿಗಳನ್ನು ನಾಶ ಮಾಡಬಲ್ಲ ಅಸ್ತ್ರ
ಮಾಸ್ಕೋ, ಅ. 24 - ಹಾರಾಟದಲ್ಲಿರುವ ಕ್ಷಿಪಣಿಗಳನ್ನು ನಾಶ ಮಾಡ ಬಲ್ಲಂಥ ಅಸ್ತ್ರವೊಂದನ್ನು ರಷ್ಯ ಯಶಸ್ವಿಯಾಗಿ ನಿರ್ಮಿಸಿದೆಯೆಂದು ಸೋವಿಯತ್ ರಕ್ಷಣಾ ಸಚಿವ ಮಾರ್ಷಲ್ ಮಾಲಿನೊವ್ಸ್ಕಿ ನಿನ್ನೆ ಇಲ್ಲಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.