ಮಂಗಳವಾರ, ಏಪ್ರಿಲ್ 13, 2021
29 °C

ಮಂಗಳೂರು ವಿಮಾನ ನಿಲ್ದಾಣಕ್ಕಿಲ್ಲ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು ಬಜ್ಪೆಯ ವಿಮಾನ ನಿಲ್ದಾಣ ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮಾರ್ಪಟ್ಟಿದೆ. ಅಂತೆಯೇ ಈ ನಿಲ್ದಾಣದ ಭದ್ರತೆ ಇನ್ನಷ್ಟು ಹೆಚ್ಚಿಸಬೇಕಾಗಿದೆ.ಕಳೆದ ವರ್ಷ ಈ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸುವ ಸಂದರ್ಭ ಎಷ್ಟೊಂದು ಕಡೆ ಭದ್ರತಾ ತನಿಖೆಗೆ ಒಳಪಟ್ಟೆ ಎಂದು ಹೇಳಲು ಸಾಧ್ಯವಿಲ್ಲ! ಜೇಬಿನಲ್ಲಿರುವ ಪರ್ಸು ಕೂಡಾ ಭದ್ರತೆಗೆ ಒಳಗಾಗಿ ನಮ್ಮ ಕೈ ಸೇರುತ್ತಿತ್ತು. ಕಟ್ಟಡದೊಳಗೆ ಅಷ್ಟೊಂದು ಭದ್ರತೆ ಇದ್ದರೂ, ರನ್‌ವೇ ಮೂಲಕ ಯಾರಾದರೂ ಸುಲಭವಾಗಿ ಒಳಪ್ರವೇಶಿಸಬಹುದು. ಕೆಲ ತಿಂಗಳ ಹಿಂದೆ 2 ಬಾರಿ ಕಾಡುಕೋಣ ರನ್‌ವೇ ಪ್ರವೇಶಿಸಿದೆ.

 

ವಿಮಾನದ ಆಗಮನದ ವೇಳೆ, ನಿರ್ಗಮನ ವೇಳೆ ಈ ಕಾಡುಕೋಣವೇನಾದರೂ ವಿಮಾನದ ಗಾಲಿಗೆ ತಗುಲಿದರೆ ಭಾರಿ ದುರಂತ ಈ ನಿಲ್ದಾಣದಲ್ಲಿ ಘಟಿಸಿ ಬಿಡುತ್ತಿತ್ತು. ಈಗ ಕೆಲ ದಿನಗಳ ಹಿಂದೆ ಓರ್ವ ವ್ಯಕ್ತಿ ರನ್‌ವೇ ಮೂಲಕ ಒಳಪ್ರವೇಶಿಸಿದ್ದಾನೆ. ಮಾನಸಿಕ ಅಸ್ವಸ್ಥನೆಂದು ಅವನಿಗೆ ಹಣೆಪಟ್ಟಿ. ಮಾನಸಿಕ ಅಸ್ವಸ್ಥನು ನಿಲ್ದಾಣದೊಳಗೆ ರಾಜಾರೋಷವಾಗಿ ಬರಲು ಸಾಧ್ಯವಾದರೆ ಭಯೋತ್ಪಾದಕರಿಗೆ ಬರಲು ಸಾಧ್ಯವಾಗದೆ! ಇನ್ನಷ್ಟು ಕಾಡುಪ್ರಾಣಿಗಳಿಗೆ ರನ್‌ವೇ ಪ್ರವೇಶಿಸಲು ಸಾಧ್ಯವಾಗದೆ?

`ತೋಟ ಶೃಂಗಾರ ಒಳಗೆ ಗೋಣಿ ಸೊಪ್ಪು~ ಎನ್ನುವ ಗಾದೆ ಮಾತು ನೆನಪಿಗೆ ಬರುತ್ತಿದೆ.

   -

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.