ಸೋಮವಾರ, ಜನವರಿ 20, 2020
18 °C

ಮಂಗಳೂರು ವಿ.ವಿ: ಅಂಬಿಗರ ಚೌಡಯ್ಯ ಪೀಠ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ರಾಜ್ಯ ಸರ್ಕಾರ ಸರಿಯಾಗಿ ಹಣಕಾಸು ನೆರವು, ಮೂಲ ಸೌಕರ್ಯ ನೀಡದೆ ಇರುವುದರ ಪರಿಣಾಮ ವಿಶ್ವವಿದ್ಯಾಲಯದ ಅಧ್ಯಯನ ಪೀಠಗಳು ಆಚರಣಾತ್ಮಕ ಆಗುತ್ತಿವೆ~ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.ಮಂಗಳೂರು ವಿಶ್ವವಿದ್ಯಾಲಯದಲ್ಲಿ `ಅಂಬಿಗರ ಚೌಡಯ್ಯ ಅಧ್ಯಯನ ಪೀಠ~ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.ಪೀಠಗಳ ಮಹತ್ವ ಇರುವುದು ಆಚರಣಾತ್ಮಕ ನೆಲೆಯಲ್ಲಿ ಅಲ್ಲ. ಸರ್ಕಾರ ಸೀಮಿತ ಹಣಕಾಸು ನೆರವು ನೀಡುತ್ತದೆ. ಬಡ್ಡಿಯ ಹಣದಲ್ಲಿ ಕಾರ್ಯಕ್ರಮ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಪೀಠಗಳ ನಿಜವಾದ ಆಶಯ ಆದ ಸಂಶೋಧನಾ ಚಟುವಟಿಕೆ ನಡೆಯುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ವಚನ ಚಳವಳಿ ಕಾಯಕ ಜೀವಿಗಳ ಒಕ್ಕೂಟ. ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದ ವಚನಕಾರರನ್ನು ಇಂದು ಸೀಮಿತ ಜಾತಿಯ ನಾಯಕರು ಎಂಬಂತೆ ಬಿಂಬಿಸಲಾಗುತ್ತಿದೆ. ಒಂದೊಂದು ಜಾತಿಯವರು ವಚನಕಾರರನ್ನು ತಮ್ಮವರು ಎಂದು ಸೀಮಿತಗೊಳಿಸುತ್ತಿದ್ದಾರೆ. ಇದು ವಚನ ಚಳವಳಿಯ ಹಿನ್ನಡೆಯೂ ಹೌದು. ಇದೊಂದು ಸಾಮಾಜಿಕ ಸ್ಥಿತ್ಯಂತರದ ಸಂಕಟದ ಪ್ರಕ್ರಿಯೆ ಎಂದುಅವರು ಬೇಸರ ವ್ಯಕ್ತಪಡಿಸಿದರು.ವಿವಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಕೆ. ಚಿನ್ನಪ್ಪ ಗೌಡ, ಪೀಠದ ಸಂಯೋಜಕ ಡಾ. ಜಯರಾಜ್ ಅಮೀನ್ ಇದ್ದರು.  ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮಂಗಳೂರು ವಿವಿಯ 19ನೇ ಅಧ್ಯಯನ ಪೀಠ.

ಪ್ರತಿಕ್ರಿಯಿಸಿ (+)