ಶನಿವಾರ, ಜನವರಿ 18, 2020
26 °C

ಮಂಗಳ ಯಾನ: 20 ಸಾವಿರ ಭಾರತೀಯರ ಅರ್ಜಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಡಚ್‌ ಕಂಪೆನಿ­ಯೊಂದು ಖಾಸಗಿ ಮಂಗಳಗ್ರಹ ಯಾನ­­ಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಜಗ­ತ್ತಿ­ನಾದ್ಯಂತ ಈ ವಿಶಿಷ್ಟ ಯಾನ­ಕ್ಕಾಗಿ ಎರಡು  ಲಕ್ಷ ಜನ ಅರ್ಜಿ ಸಲ್ಲಿಸಿ­ದ್ದಾರೆ. ಅವರಲ್ಲಿ ೨೦ ಸಾವಿರ ಮಂದಿ ಭಾರತೀ­ಯರೂ ಅರ್ಜಿ ಸಲ್ಲಿಸಿದ್ದಾರೆ.ಈ ‘ಮಾರ್ಸ್‌ ಒನ್‌’ ಹೆಸರಿನ ಯೋಜನೆ ಅನ್ವಯ 2023ರಲ್ಲಿ  ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರನ್ನು ಮಂಗಳಗ್ರಹಕ್ಕೆ ಕಳು­ಹಿಸ­ಲಾಗುತ್ತದೆ.

ಅಂಗಾರಕನ ಅಂಗಳದಲ್ಲಿ ಶಾಶ್ವತ ವಸಾಹತು ನಿರ್ಮಿಸುವ ಉದ್ದೇಶ­ದೊಂದಿಗೆ  ಈ ಒಮ್ಮುಖ ಪ್ರಯಾಣ ರೂಪಿಸಲಾಗಿದೆ.ಐದು ತಿಂಗಳ ಅವಧಿಯಲ್ಲಿ ಡೆನ್ಮಾರ್ಕ್‌ ಮೂಲದ ಮಾರ್ಸ್‌ ಒನ್‌ ಪ್ರತಿಷ್ಠಾನಕ್ಕೆ ವಿಶ್ವದ 140 ದೇಶಗಳ ಒಟ್ಟು 2,02,586 ಅರ್ಜಿಗಳು ಬಂದಿವೆ. ಆ ಪೈಕಿ ಶೇ 10ರಷ್ಟು ಅರ್ಜಿಗಳು ಭಾರತದಿಂದಲೇ ಬಂದಿವೆ.  ಅಮೆರಿಕದಿಂದ ಅರ್ಜಿಗಳ ಮಹಾ­ಪೂರವೇ ಹರಿದು ಬಂದಿದೆ.ಅಲ್ಲಿಂದ ಶೇ 24ರಷ್ಟು ಅರ್ಜಿಗಳು ಬಂದಿದ್ದು, ಭಾರತ ದ್ವಿತೀಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಚೀನಾ (ಶೇ 6), ಬ್ರೆಜಿಲ್‌ (ಶೇ 5), ಬ್ರಿಟನ್‌, ಕೆನಡಾ, ರಷ್ಯಾ ಮತ್ತು ಮೆಕ್ಸಿಕೊ (ಶೇ 4) ಮುಂತಾದ ರಾಷ್ಟ್ರಗಳಿವೆ.ಈ ಅರ್ಜಿಗಳ ಪೈಕಿ ಮಂಗಳ ಗ್ರಹದಲ್ಲಿ ಶಾಶ್ವತವಾಗಿ ನೆಲೆಸಲು ಅರ್ಹರಾಗಿರುವರನ್ನು  ಆಯ್ಕೆ ಸಮಿತಿ ಎರಡು ವರ್ಷಗಳ ಅವಧಿಯಲ್ಲಿ ಆಯ್ಕೆ ಮಾಡಲಿದೆ.  ಆಕಾಂಕ್ಷಿಗಳು ಹಲವು ಹಂತದ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.

ಪ್ರತಿಕ್ರಿಯಿಸಿ (+)