ಶನಿವಾರ, ಮೇ 21, 2022
25 °C

ಮಂಜು ಕನ್ನಿಕಾ ಕಾದಂಬರಿಗೆ ದತ್ತಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಬಹುಮುಖ ಪ್ರತಿಭೆ ಮಂಜು ಕನ್ನಿಕಾ ಅವರ `ಗೆಜ್ಜೆ ನನ್ನದು ನೃತ್ಯ ನಿನ್ನದು~ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ ಲಭಿಸಿದೆ.ವಕೀಲೆ, ಸಾಹಿತಿ, ಹವ್ಯಾಸಿ ಪತ್ರಕರ್ತೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಕಾದಂಬರಿ, ಸಣ್ಣ ಕತೆ, ಲೇಖನ, ಕವನ, ಹನಿಗವನ, ಸುಭಾಷಿತ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಂಜು ಕನ್ನಿಕಾ ತಮ್ಮ ಛಾಪು ಮೂಡಿಸಿದ್ದಾರೆ.ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸಾಹಿತ್ಯಕ ಚರ್ಚೆ, ವಿಚಾರ ಸಂಕಿರಣಗಳಲ್ಲೂ ಅವರ ಉಪಸ್ಥಿತಿ ಕಾಣಬಹುದು. ಇನ್ನು ರೇಡಿಯೋ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸಿರುತ್ತಾರೆ. ಮಕ್ಕಳಿಗಾಗಿ ಕಾನೂನು ಅರಿವಿನ ಲೇಖನಗಳು ಬರೆದಿದ್ದಾರೆ. ಅಷ್ಟೇ ಅಲ್ಲ, ಬಾಲಕಾರ್ಮಿಕರ ನಿರ್ಮೂಲನ ಶಿಬಿರಗಳನ್ನು ನಡೆಸಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿನ ಇವರ ಸೇವೆಗಾಗಿ ಹತ್ತು- ಹಲವು ಪ್ರಶಸ್ತಿ, ಗೌರವಗಳು ಲಭಿಸಿದ್ದು, ಜಿಲ್ಲೆಯ ಉದಯೋನ್ಮುಖ ಲೇಖಕಿಯರಿಗೆ ರೂಪ ಸ್ಮರಣಾರ್ಥ ಮಾಲೂರಿನ ಚೈತನ್ಯ ಕಲಾನಿಕೇತನ ನೀಡುತ್ತಿರುವ ರೂಪ ಚೈತನ್ಯ ಪ್ರಶಸ್ತಿಗೆ ಮಂಜು ಕನ್ನಿಕಾ ಆಯ್ಕೆಯಾಗಿದ್ದಾರೆ. ಜೂನ್ 16ರಂದು ಮಾಲೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.