ಬುಧವಾರ, ಮೇ 12, 2021
24 °C

ಮಕ್ಕಳನ್ನೆ ಕೊಂದ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಅದು ಸುರಪುರ ರಂಗಂಪೇಟೆ ಮುಖ್ಯ ರಸ್ತೆಯಲ್ಲಿರುವ ಸ್ಥಳ. ಯಾವಾಗಲು ಈ ರಸ್ತೆ ವಾಹನಗಳು ಮತ್ತು ಜನರಿಂದ ದಟ್ಟಣೆಯಾಗಿರುತ್ತದೆ. ಮಂಗಳವಾರ ಮದನಷಾ ವಲಿ ದರ್ಗಾ ಹತ್ತಿರ ಜನಸಾಗರವೇ ಸೇರಿತ್ತು. ಸೇರಿದ್ದ ಜನರಲ್ಲಿ ಕಣ್ಣೀರು ಧಾರೆ ಹರಿಯುತ್ತಿತ್ತು. ಕೆಲವರು ಅಲ್ಲಿದ್ದ ಮಹಿಳೆಯೊಬ್ಬಳಿಗೆ ವಾಚಾಮ ಗೋಚರ ನಿಂದಿಸುತ್ತಿದ್ದರು. ಇನ್ನೂ ಕೆಲವರು ಆಕೆಗೆ ಧರ್ಮದೇಟು ಹಾಕುತ್ತಿದ್ದರು.ಇದು ಮಂಗಳವಾರ ನಡೆದ ಹೃದಯವಿದ್ರಾವಕ ಘಟನೆ. ಕ್ರೂರ ತಾಯಿಯೊಬ್ಬಳು ತಾನೆ ಹೆತ್ತ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದ  ಘಟನೆ ಅಲ್ಲಿ ನಡದಿತ್ತು. ಶಹಾಪುರ ತಾಲ್ಲೂಕಿನ ದೊಡ್ಡ ಸಗರ ಗ್ರಾಮದ ಸುಗೂರ ಓಣಿಯ ಭೀಮಬಾಯಿ ಕಲ್ಲಪ್ಪ ವಿರುಪಾಪುರ್ ಎಂಬಾಕೆ ತನ್ನ ಮಕ್ಕಳಾದ ಪ್ರತಿಭಾ (3) ಮತ್ತು ಬಸವರಾಜ (2 ತಿಂಗಳು) ನೋಡು ನೋಡುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಸತ್ತ ಮಕ್ಕಳನ್ನು ತನ್ನ ಪಕ್ಕದಲ್ಲಿ ಹಾಸಿಗೆಯ ಮೇಲೆ ಮಲಗಿಸಿ ಆಕೆ ಅಳುತ್ತಿದ್ದಳು. ಎರಡು ಹಸುಳೆಗಳ ಕಳೆ ಬರಗಳನ್ನು ನೋಡಿದರೆ ಹೃದಯ ಕಿತ್ತು ಬರುವಂತಿತ್ತು.ಭೀಮಬಾಯಿ ಮಾನಸಿಕ ಅಸ್ವಸ್ಥೆ ಎಂದು ಶಂಕಿಸಲಾಗಿದೆ. ಸೋಮವಾರವೆ ಈಕೆ ಸುರಪುರಕ್ಕೆ ಬಂದಿದ್ದಳು. ಕೆಲ ರಸಗೊಬ್ಬರ ಅಂಗಡಿಗಳಲ್ಲಿ ಕ್ರಿಮಿನಾಶಕ ಕೇಳಿದ್ದಳು ಎನ್ನಲಾಗಿದೆ. ಆದರೆ ಅಂಗಡಿಯವರು ಕ್ರಿಮಿನಾಶಕ ಕೊಡಲು ನಿರಾಕರಿಸಿದ್ದಾರೆ. ಮಂಗಳವಾರ ಈ ಕೃತ್ಯ ಎಸಗಿದ್ದಾಳೆ.ದಾರಿಹೋಕರು ಈ ದೃಶ್ಯವನ್ನು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಿಸಿದಾಗ ಮಕ್ಕಳನ್ನು ತಾನೆ ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.