ಶನಿವಾರ, ಮಾರ್ಚ್ 6, 2021
21 °C
ಭಾರತ ತಂಡದ ಮಾಜಿ ಕೋಚ್‌ ಯು. ವಿಮಲ್‌ ಕುಮಾರ್‌ ಅನಿಸಿಕೆ

ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಪಿಬಿಎಲ್‌ ಸಹಕಾರಿ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಪಿಬಿಎಲ್‌ ಸಹಕಾರಿ

ಬೆಂಗಳೂರು: ‘ಇಂಡಿಯನ್‌ ಬ್ಯಾಡ್ಮಿಂಟ ನ್‌ ಲೀಗ್‌ಗೆ (ಐಬಿಎಲ್‌) ಹೋಲಿಸಿದರೆ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ಗೆ (ಪಿಬಿಎಲ್‌) ಸಿಕ್ಕ ಜನಪ್ರಿಯತೆ ಕಡಿಮೆ ಯೇ. ಮೊದಲ ಎರಡು ಆವೃತ್ತಿಗಳ  ಲೀಗ್‌ ಆಯೋಜನೆಗೆ ಸಾಕಷ್ಟು ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿತ್ತು. ಸಮಯ ದ ಅಭಾವದ ಕಾರಣ ಈ ಬಾರಿ ಎಲ್ಲವೂ ಆತುರದಲ್ಲೇ ನಡೆದು ಹೋಯಿತು. ಮುಖ್ಯವಾಗಿ ಸರಿಯಾಗಿ ಪ್ರಚಾರ ಸಿಗಲಿಲ್ಲ’..

ಹೀಗೆ ಅಭಿಪ್ರಾಯ ಹಂಚಿಕೊಂಡ ವರು ಭಾರತದ ಮಾಜಿ ಆಟಗಾರ ಯು. ವಿಮಲ್‌ ಕುಮಾರ್‌.ಕೇರಳ ಮೂಲದ ವಿಮಲ್‌ ಎರಡು ಬಾರಿ ಪ್ರತಿಷ್ಠಿತ ಫ್ರೆಂಚ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಜತೆಗೆ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಕೆಲ ಕಾಲ ರಾಷ್ಟ್ರೀಯ ತಂಡದ ಕೋಚ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ.ಸದ್ಯ ಸೈನಾ ನೆಹ್ವಾಲ್‌ ಅವರಿಗೆ ತರಬೇತು ನೀಡುತ್ತಿರುವ ಅವರು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ (ಪಿಬಿಎಲ್‌) ಪ್ರಯೋಜನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.ಪಿಬಿಎಲ್‌ನಿಂದ ಪ್ರಯೋಜನ ವೇನು?

ಈ ಲೀಗ್‌ನಿಂದ ಮೂರು ಬಗೆಯ ಪ್ರಯೋಜನವಿದೆ. ಮೊದಲನೆಯದಾಗಿ ಈಗ ತಾನೆ ಕ್ರೀಡಾ ಬದುಕಿಗೆ ವಿದಾಯ ಹೇಳಿರುವ ಆಟಗಾರರಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಸಿಕ್ಕಿದೆ. ಈ ಹುದ್ದೆಯ ಮಹತ್ವ ಹಾಗೂ ಅದನ್ನು ನಿಭಾಯಿಸುವ ಕಲೆಗಳನ್ನು ಕರಗತ ಮಾಡಿಕೊಳ್ಳಲು ಅವರಿಗೆ ಲೀಗ್‌ ಸಹಕಾರಿ. ಬಹುಮುಖ್ಯವಾಗಿ ಮಕ್ಕಳನ್ನು ಬ್ಯಾಡ್ಮಿಂಟನ್‌ ಕ್ರೀಡೆಯತ್ತ ಆಕರ್ಷಿಸಲು ಹೆಚ್ಚು ನೆರವಾಗಿದೆ. ಜತೆಗೆ  ಆಟಗಾರ ರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ.ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಸಹಕಾರಿ ಎಂದು ಹೇಳಿದಿರಿ. ಅದು ಹೇಗೆ?

ಈಗಾಗಲೇ ವಿವಿಧ ನಗರಗಳಲ್ಲಿ ಲೀಗ್‌ನ ಪಂದ್ಯಗಳು ನಡೆದಿವೆ. ಈ ವೇಳೆ ಪಂದ್ಯಗಳನ್ನು ನೋಡಲು ಮಕ್ಕಳು ತಮ್ಮ ಪೋಷಕರೊಂದಿಗೆ ಕ್ರೀಡಾಂಗಣಕ್ಕೆ ಬಂದಿರುವುದನ್ನು ನೀವು ಗಮನಿಸಿ ರಬಹುದು.  ಅಂಗಳದಲ್ಲಿ ಸೈನಾ ನೆಹ್ವಾಲ್‌, ಸಿಂಧು, ಶ್ರೀಕಾಂತ್‌ ಅವರ ಆಟವನ್ನು ನೋಡಿದಾಗ ಅವರಲ್ಲೂ ತಾವು ಮುಂದೊಂದು ದಿನ ಈ ಕ್ರೀಡೆ ಯಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ  ಕನಸು ಸಹಜ ವಾಗಿಯೇ ಚಿಗುರೊಡೆ ಯುತ್ತದೆ.ಐಬಿಎಲ್‌ನಲ್ಲಿ ನೀವು ಬೆಂಗಾ ಬೀಟ್ಸ್‌ ಕೋಚ್‌ ಆಗಿ ಕೆಲಸ ಮಾಡಿ ದ್ದೀರಿ. ಈ ಬಾರಿ ಹಿಂದೆ ಸರಿಯಲು ಕಾರಣ?

ವಿಶ್ರಾಂತಿ ಪಡೆಯಲು ನಿರ್ಧರಿಸಿ ದ್ದರಿಂದ ಈ ಬಾರಿ ಯಾವುದೇ ಜವಾಬ್ದಾರಿ ಒಪ್ಪಿಕೊಳ್ಳಲಿಲ್ಲ. ಕೋಚ್‌ ಹುದ್ದೆ ನಿಭಾಯಿಸುವುದು  ಅಂದು ಕೊಂಡಷ್ಟು ಸುಲಭವಲ್ಲ. ಈ ಸ್ಥಾನದಲ್ಲಿದ್ದಾಗ ಬಿಡುವಿಲ್ಲದೆ ಪ್ರಯಾಣ ಮಾಡಬೇಕಾಗುತ್ತದೆ. ಅದು ಈಗ ನನ್ನಿಂದ ಸಾಧ್ಯವಿಲ್ಲ.ಕರ್ನಾಟಕದಲ್ಲಿ ಬ್ಯಾಡ್ಮಿಂಟನ್‌ ಬೆಳವಣಿಗೆ ಹೇಗಿದೆ?

ನಮ್ಮಲ್ಲಿ ಉತ್ತಮ ಕ್ರೀಡಾಂಗಣ ಗಳಿವೆ. ಎಳವೆಯಲ್ಲಿಯೇ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸುವ ಕೆಲಸವೂ ಆಗು ತ್ತಿದೆ.  ಆದರೆ ಮೂಲಭೂತ ಸೌಕರ್ಯ ಗಳಲ್ಲಿ ಇನ್ನಷ್ಟು ಸುಧಾರಣೆ ಆಗಬೇಕು. ಈಗ ಕಂಠೀರವ ಕ್ರೀಡಾಂಗಣವನ್ನೇ ತೆಗೆದುಕೊಳ್ಳಿ. ಇಲ್ಲಿ ಯಾವ ಕ್ರೀಡಾಕೂಟ ನಡೆದರೂ ಕ್ರೀಡಾಭಿಮಾನಿಗಳಿಗೆ ಕೊರತೆ ಇರುವುದಿಲ್ಲ. ಆದರೆ ಶೌಚಾ ಲಯ ಸೇರಿದಂತೆ ಕೆಲ ಅಗತ್ಯ ಸೌಕರ್ಯಗಳು ಸರಿಯಾಗಿಲ್ಲ. ಹೀಗಾದರೆ ವಿದೇಶಿ ಆಟಗಾರರು ಇಲ್ಲಿ ಬಂದು ಆಡುವುದಾದರೂ ಹೇಗೆ.ಒಲಿಂಪಿಕ್ಸ್‌ಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಪಿಬಿಎಲ್‌ ನಡೆಯುತ್ತಿರುವುದರಿಂದ ಭಾರತದ ಸ್ಪರ್ಧಿಗಳಿಗೆ ಏನಾದರೂ ಪ್ರಯೋಜನವಿದೆಯೇ?

ಖಂಡಿತವಾಗಿಯೂ ಇದೆ. ಸೈನಾ ನೆಹ್ವಾಲ್‌ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್‌, ಕೆ.ಶ್ರೀಕಾಂತ್‌, ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಅವರಿಗೆ ಅರ್ಹತೆ ಗಳಿಸಲು ಇನ್ನೂ ಅವಕಾಶ ಇದೆ.

ಲೀಗ್‌ನಲ್ಲಿ ಲೀ ಚೊಂಗ್‌ ವೀ, ಟಾಮಿ ಸುಗಿಯಾರ್ಟೊ, ರಾಜೀವ್‌ ಔಸೆಫ್‌ ಅವರಂತಹ ವಿಶ್ವದ ಘಟಾನು ಘಟಿಗಳ ದಂಡೇ ಭಾಗವಹಿಸಿದೆ. ಅವರ ಅಭ್ಯಾಸ ಕ್ರಮ, ಆಟದ ತಂತ್ರಗಳು ಹಾಗೂ ಕೌಶಲಗಳನ್ನು ಕಲಿಯಲು ನಮ್ಮವರಿಗೆ ಈ ಲೀಗ್‌ ವೇದಿಕೆ ಎಂದರೆ ತಪ್ಪಾಗುವುದಿಲ್ಲ.ನಿಮ್ಮ ಪ್ರಕಾರ ಪಿಬಿಎಲ್‌ನಲ್ಲಿ ಯಾರು ಪ್ರಶಸ್ತಿ ಗೆಲ್ಲಬಹುದು?

ದೆಹಲಿ ಏಸರ್ಸ್ ಅಥವಾ ಅವಧ್‌ ವಾರಿಯರ್ಸ್‌ ತಂಡ ಈ ಬಾರಿ ಚಾಂಪಿ ಯನ್‌ ಆಗಬಹುದು.  ಸೈನಾ ಆರೋಗ್ಯ ಸ್ಥಿತಿ ಹೇಗಿದೆ?

ಬಲಗಾಲಿನ ಮೀನುಖಂಡದ ಸ್ನಾಯು ಸೆಳೆತದಿಂದ ಸ್ವಲ್ಪ ಚೇತರಿಸಿ ಕೊಂಡಿದ್ದಾರೆ. ಪೂರ್ಣವಾಗಿ ಗುಣ ಮುಖರಾಗಲು ಇನ್ನಷ್ಟು ಸಮಯ ಬೇಕಾಗಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.