ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತಮ್ಮದೇ ಆದ ತಂಡ ಇದ್ದರೆ ಉತ್ತಮ ಎಂದು 2000ನೇ ಇಸವಿಯಲ್ಲಿ ವಿಶ್ವನಾಥ್ ಬಿ. ಮಂಡಿ ಹಾಗೂ ಗುರುರಾಜ್ ಕೆ. ಭಾರದ್ವಾಜ್ ಅವರು ‘ಸಂಗ್ರಹ’ ತಂಡವನ್ನು ಆರಂಭಿಸಿದರು.

ಮುಂಚಿನಿಂದಲೂ ರಂಗಚಟುವಟಿಕೆ ಹಾಗೂ ಸಾಹಿತ್ಯದ ವಿಚಾರದಲ್ಲಿ ಆಸಕ್ತಿ ಹೊಂದಿದ್ದ ಈ ಇಬ್ಬರು ಗೆಳೆಯರು ಆರಂಭದಲ್ಲಿ ಮಕ್ಕಳಿಗಾಗಿ ರಂಗತರಬೇತಿ, ಚಿತ್ರಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಾಗಾರವನ್ನು ನಡೆಸುತ್ತಾ ಬಂದರು. ಬಳಿಕ ತಂಡವು ಮಕ್ಕಳ ನಾಟಕ ಹಾಗೂ ಬೀದಿನಾಟಕಗಳನ್ನು ಮಾಡಲು ಮುಂದಾದರು. ನಂತರದ ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು.

‘ರಂಗಸಂಗ್ರಹ’ ತಂಡವು ರಂಗ ಚಟುವಟಿಕೆಗಾಗಿ ರಂಗ ಸಂಗ್ರಹ, ಚಿತ್ರಕಲೆಗಾಗಿ ಚಿತ್ರ ಸಂಗ್ರಹ ಎಂಬ ಹೆಸರಿನಲ್ಲಿ ಕಾರ್ಯಾಗಾರ ಹಾಗೂ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಈ ತಂಡವು 16 ವರ್ಷಗಳ ಹಿಂದೆ ಕಾರ್ಯಚಟುವಟಿಕೆ ಆರಂಭಿಸಿದ್ದರೂ ನೋಂದಣಿ ಮಾಡಿಸಿಕೊಂಡಿದ್ದು 2013ರಲ್ಲಿ. 2000ರಿಂದ 50ಕ್ಕೂ ಹೆಚ್ಚು ಮಕ್ಕಳ ನಾಟಕ ಹಾಗೂ ಬೀದಿ ನಾಟಕಗಳನ್ನು ರಂಗರೂಪಕ್ಕಿಳಿಸಿದೆ.

‘ನಾಟಕವು ಭಾಷೆ, ಜನಪದ, ಸಂಸ್ಕೃತಿಯ ಪ್ರತೀಕ ಎಂದು ನಂಬಿರುವ ‘ರಂಗಸಂಗ್ರಹ’ವು ಸಾಮಾಜಿಕ ಸಾಮರಸ್ಯ ಬೀರುವ ವಿಷಯಗಳ ಬಗ್ಗೆ ನಾಟಕಗಳನ್ನು ನಿರ್ಮಾಣ ಮಾಡುತ್ತದೆ. ಸದ್ಯ ತಂಡದಲ್ಲಿ 32 ಕಲಾವಿದರಿದ್ದು, ರಂಗಸ್ಮೃತಿ, ಡ್ರಾಮಾಟ್ರಿಕ್ಸ್ ಹಾಗೂ ಇತರ ರಂಗತಂಡಗಳ ಜತೆಯಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದೆ’ ಎಂದು ಗುರುರಾಜ್ ಹೇಳುತ್ತಾರೆ.

ರಂಗಸಂಗ್ರಹ ತಂಡದಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿದ್ದು, ಪಾತ್ರಗಳ ಅಗತ್ಯವೆನಿಸಿದರೆ ಇತರ ತಂಡಗಳ ಕಲಾವಿದರು ರಂಗ ಸಂಗ್ರಹದ ತಂಡದ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಈ ತಂಡವು ಕಲಾವಿದರಿಗೆ ಸಂಭಾವನೆಯನ್ನೂ ನೀಡುತ್ತಾ ಬಂದಿದೆ. ಈ ತಂಡದ ‘ಘೂಳೀಮಡ್ಡಿ ಕತ್ತರಿ’ ಹಾಗೂ ‘ತೃಪ್ತಿ’ ಎಂಬ ನಾಟಕಕ್ಕೆ ಪ್ರೇಕ್ಷಕರಿಂದ ಭಾರಿ ಪ್ರಶಂಸೆ ಸಿಕ್ಕಿದೆ ಎಂದು ಗುರುರಾಜ್ ಹೇಳುತ್ತಾರೆ.

ಹಳೆಯ ಸಾಂಪ್ರದಾಯಿಕ ಆಚರಣೆಗಳು ಮರೆಯಾಗುತ್ತಿದ್ದು, ಈ ಕಾಲದಲ್ಲಿ ಸಂಪ್ರದಾಯಗಳ ಮಹತ್ವವನ್ನು ಸಾರುವ ನಾಟಕ ‘ಘೂಳೀಮಡ್ಡಿ ಕತ್ತರಿ’. ಈಗಾಗಲೇ 10 ಪ್ರದರ್ಶನಗಳನ್ನು ಕಂಡಿದೆ.

‘ಈ ನಾಟಕ ಒಂದು ಊರ ಹೊರ ವಲಯದಲ್ಲಿರುವ ಕೆಲವು ರಸ್ತೆಗಳು ಕೂಡುವ ಸ್ಥಳದಲ್ಲಿನ ಚಹಾದಂಗಡಿಯಿಂದ ಬಿಚ್ಚಿಕೊಳ್ಳುತ್ತದೆ. ಆ ಊರಿನ ಜನರು, ಚಳವಳಿಗಾರರು, ದರೋಡೆಕೋರರು, ಮಠದ ಸ್ವಾಮಿಗಳೊಂದಿಗೆ ಬೆಸೆದುಕೊಳ್ಳುತ್ತ, ರಾಜಕೀಯದ ಪ್ರತಿನಿಧಿಗಳಾಗಿ ಪೊಲೀಸರ ತಂತ್ರ-ಕುತಂತ್ರಗಳು ಕಾಣಿಸುತ್ತವೆ.

ಜನರ ಒಗ್ಗಟ್ಟು, ಒಳ್ಳೆಯ ಉದ್ದೇಶದ ಚಳವಳಿಗಳ ಮುಂದೆ ಯಶಸ್ಸು ಕಾಣದೇ ಹೋದ, ಆಡಳಿತ ವ್ಯವಸ್ಥೆಯ ಅಸಹಾಯಕತೆ, ಹೀಗೆ ವಸ್ತುಸ್ಥಿತಿಯನ್ನು ಅಭಿವ್ಯಕ್ತಗೊಳಿಸುತ್ತದೆ’ ಎಂದು ನಾಟಕದ ಬಗ್ಗೆ ವಿವರಿಸುತ್ತಾರೆ ಗುರುರಾಜ್. ಇನ್ನು ‘ತೃಪ್ತಿ’ ನಾಟಕವು ಹಾಸ್ಯಮಯ ನಾಟಕವಾಗಿದ್ದು, ಇದು ಈಗಾಗಲೇ 5 ಬಾರಿ ಪ್ರದರ್ಶನ ಕಂಡಿದೆ.

ತಂಡದಲ್ಲಿ ವಿಶ್ವನಾಥ್ ಬಿ.ಮಂಡಿ ಅವರು ನಾಟಕ ನಿರ್ಮಾಣ, ನಿರ್ದೇಶನ ಹಾಗೂ ಅದರ ಜವಾಬ್ದಾರಿಗಳನ್ನು ನಿಭಾಯಿಸಿದರೆ, ಗುರುರಾಜ್ ಅವರು ಹಣಕಾಸು ಹಾಗೂ ಮಾಧ್ಯಮ ಸಂಪರ್ಕದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.

ರಂಗ ಸಂಗ್ರಹ ತಂಡವು ಇತರ ನಾಟಕ ತಂಡಗಳ ನಾಟಕಗಳಿಗೆ ಆಹ್ವಾನ ಪತ್ರಿಕೆ ವಿನ್ಯಾಸ, ವೇದಿಕೆ ವಿನ್ಯಾಸಗಳನ್ನು ಮಾಡಿಕೊಡುತ್ತದೆ. ಇದಲ್ಲದೇ ರಂಗ ಸಂಗ್ರಹವು ಕಳೆದ ಕೆಲ ವರ್ಷಗಳಿಂದ ಕಲೆ-ಜನಪದ- ಸಾಂಸ್ಕೃತಿಕವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಕಾಡೆಮಿಯಿಂದ ‘ಘೂಳೀಮಡ್ಡಿ ಕತ್ತರಿ’ ಎಂಬ ನಾಟಕವು ಉತ್ತಮ ನಾಟಕ ಪ್ರಶಸ್ತಿ ಪಡೆದಿದ್ದು, ಅನೇಕ ಮಕ್ಕಳ ನಾಟಕಗಳಿಗೆ ಉತ್ತಮ ನಾಟಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಕಲಾವಿದರು
ತಂಡದಲ್ಲಿ ಸರಳಾದೇವಿ, ಮಾರುತೇಶ್, ಕಾವ್ಯಶ್ರೀ, ಕುಶಾಲ್ ಭಟ್, ಪೃಥ್ವಿಕ್ ಗೌಡ, ಪ್ರಸನ್ನ ಸಿಂಹ ಎಚ್. ಕೆ, ವಿಶ್ವನಾಥ್ ಬಾಬುರಾವ್ ಸರೋದೆ, ಅರ್ಜುನ್ ಅರವಿಂದ್, ಪವನ್ ಅಡಿಗ, ಮಧು ಭಾರದ್ವಾಜ್, ಪ್ರಕಾಶ್ ದೇಸಾಯಿ, ದುರ್ಗಾ ಪ್ರಸಾದ್, ಲಿಂಗ ಪೂಜಾರಿ ಹಾಗು ಇನ್ನಿತರ ಕಲಾವಿದರಿದ್ದಾರೆ. ಇನ್ನು ಈ ತಂಡದಲ್ಲಿ ಸಂಗೀತಗಾರರಾಗಿ ರಾಜಗುರು ಹೊಸಕೋಟೆ, ಗಾಯಕರಾಗಿ ರಾಘವೇಂದ್ರ ಸಂಗೀತ, ಅಜಯ್ ನಾಯಕ್, ಅನಿತಾ, ಎಸ್ ಪಿ ಬೆಲ್ಲದ ಗಾಯಕ, ಬೆಳಕು ನಿರ್ವಹಣಾಕಾರರಾಗಿ ಮಹಾದೇವ ಸ್ವಾಮಿ ಹಾಗೂ ಮೇಕಪ್ಮ್ಯಾನ್ ಆಗಿ ವಿಜಯ್ ಬೆಣಚ ಇದ್ದಾರೆ.

ತಂಡದ ರಂಗಚಟುವಟಿಕೆ
ರಂಗಸಂಗ್ರಹವು ಮಕ್ಕಳಿಗಾಗಿ ವಾರಾಂತ್ಯದಲ್ಲಿ ಆರು ತಿಂಗಳ ರಂಗತರಬೇತಿ ಶಿಬಿರವನ್ನು ನಡೆಸುತ್ತದೆ. ಇದರಲ್ಲಿ 4 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ನಾಟಕ ಅಭಿನಯ, ಸಂಗೀತ, ಚಿತ್ರಕಲೆ, ಜಾನಪದ ನೃತ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ತಂಡದ ಕಲಾವಿದರಾದ ಸರಳಾದೇವಿ, ಕಾವ್ಯಶ್ರೀ ಅವರು ಕಲಾ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದು, ಈ ಕಾರ್ಯಾಗಾರದಲ್ಲಿ ಅವರು ಮಕ್ಕಳಿಗೆ ತರಬೇತಿ ನೀಡುತ್ತಾರೆ.ಇದಲ್ಲದೇ ತಂಡದ ಎಲ್ಲಾ ಸದಸ್ಯರು ರಂಗಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಕಲಿಸಿಕೊಡುತ್ತಾರೆ.

‘ರಂಗಸಂಗ್ರಹ’ವು ಮಕ್ಕಳ ನಾಟಕವನ್ನು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ತೆರಳಿ ಪ್ರದರ್ಶನ ಮಾಡುತ್ತದೆ. ಇದಲ್ಲದೇ ರಾಗಿಗುಡ್ಡದ ಹಿಂದೆ ಇರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ತಂಡವು ಆ ಶಾಲೆಯ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಈ ಶಾಲೆಯಲ್ಲಿನ ರಂಗಮಂದಿರವನ್ನು ವಿವಿಧ ರಂಗತಂಡಗಳಿಗೆ ದಿನಕ್ಕೆ ₹100ಗೆ ಬಾಡಿಗೆಗೆ ನೀಡಿ, ಅದರಿಂದ ಬಂದ ಹಣವನ್ನು ಶಾಲೆಯ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿದೆ. ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ವಿಜ್ಞಾನ ಸಂಬಂಧಿಸಿದ ಕಾರ್ಯಾಗಾರಗಳನ್ನು ವಿವಿಧ ಜಿಲ್ಲೆಗಳಲ್ಲಿ ನಡೆಸಲು ತಂಡ ಚಿಂತನೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.