ಶನಿವಾರ, ಜನವರಿ 18, 2020
19 °C

ಮಕ್ಕಳಿಗೆ ಬ್ಯಾಗ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ಬ್ಯಾಗ್ ವಿತರಣೆ

ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಅಂದು ಮಕ್ಕಳದ್ದೇ ಕಾರುಬಾರು. ಕೆಂಪು ಹಾಗೂ ಬಿಳಿ ವರ್ಣದ ಸಮವಸ್ತ್ರ ಧರಿಸಿದ ಅವರು ಒಂದೆಡೆ ಕುಳಿತು ಫೋಟೊಗೆ ಪೋಸ್‌ ಕೊಡುತ್ತಿದ್ದರು. ಮತ್ತೆ ಕೆಲವರು ಸ್ಪೈಡರ್‌ಮ್ಯಾನ್‌, ಸೂಪರ್‌ಮ್ಯಾನ್‌ ಚಿತ್ರಗಳ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು.ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಿದ್ದ ಬಡಮಕ್ಕಳಿಗೆ ಉಚಿತ ಬ್ಯಾಗ್‌ ವಿತರಿಸುವ ‘ಮೈ ಸ್ಕೂಲ್‌ ಬ್ಯಾಗ್‌’ ಕಾರ್ಯಕ್ರಮದ ವೇಳೆ ಕಂಡುಬಂದ ದೃಶ್ಯವಿದು. ಈ ವರ್ಷ ಗಾಂಧಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ 155 ಬ್ಯಾಗ್‌ಗಳನ್ನು ವಿತರಿಸಲಾಯಿತು. ಇದು ಕಾರ್ಪೊರೇಟ್‌ ಸಾಮಜಿಕ ಹೊಣೆಗಾರಿಕೆ ಕಾರ್ಯಕ್ರಮದ ಭಾಗವಾಗಿತ್ತು.ಮಕ್ಕಳಿಗೆ ಬ್ಯಾಗ್‌ ಜೊತೆಗೆ ಸಮವಸ್ತ್ರ, ಶೂಗಳನ್ನು ವಿತರಿಸಲಾಯಿತು. ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಆಟಗಳನ್ನು ಆಡಿಸಲಾಯಿತು.‘ಮೈ ಸ್ಕೂಲ್ ಬ್ಯಾಗ್‘ ಎಂಬ ಈ ಕಾರ್ಯಕ್ರಮದ ಆರಂಭ 2009ರಲ್ಲಿ ಸಿಂಗಪುರ್‌ನಲ್ಲಿ ನಡೆದಿತ್ತು. ಅಲ್ಲಿಂದ ಫೋರಂ ವ್ಯಾಲ್ಯೂ ಮಾಲ್‌ ಪ್ರತಿ ವರ್ಷ ಈ ಕಾಯರ್ಕ್ರಮವನ್ನು ಆಯೋಜಿಸುತ್ತಿದೆ.

ಪ್ರತಿಕ್ರಿಯಿಸಿ (+)