ಶನಿವಾರ, ಜನವರಿ 18, 2020
19 °C

ಮಗನ ಚಿಕಿತ್ಸೆಗೆ ಆರ್ಥಿಕ ನೆರವು ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ತಾಲ್ಲೂಕಿನ ಮನಗುಂಡಿ ಗ್ರಾಮದ 18 ತಿಂಗಳ ಪುಟ್ಟ ಮಗು ತೇಜಸ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಆತನಿಗೆ ಚಿಕಿತ್ಸೆ ನೀಡಲು ಮಹಾದೇವಪ್ಪ–ಕಲ್ಲಪ್ಪ ದಂಪತಿ ದಾನಿಗಳ ನೆರವು ಬಯಸಿದ್ದಾರೆ.‘ತೇಜಸ್ ಹೆಸರಿನ ನನ್ನ ಮಗನಿಗೆ 5 ತಿಂಗಳ ನಂತರ ಅನಾರೋಗ್ಯ ಸಮಸ್ಯೆ ಎದುರಾಯಿತು. ಸದ್ಯ 18 ತಿಂಗಳು ತುಂಬಿರುವ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಅದಕ್ಕೆ ಬೆಂಗಳೂರಿನ ಬನಶಂಕರಿ ಬಡಾವಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕೆ ದಾನಿಗಳು ಸಹಾಯ ಮಾಡಬೇಕು’ ಎಂದು ಕಲ್ಲವ್ವ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.ಮಗು ಕೇವಲ ಕಣ್ಣುಗಳನ್ನಷ್ಟೇ ಮಿಟುಕಿಸುತ್ತದೆ. ಅದರ ಕೈ, ಕಾಲು ಸೇರಿದಂತೆ ಉಳಿದೆಲ್ಲ ಭಾಗಗಳು ಸಂಪೂರ್ಣ ನಿಷ್ಕ್ರಿಯವಾಗಿವೆ. ಜೊತೆಗೆ ಮಗುವಿನ ಮೆದುಳಿನ ಬೆಳವಣಿಗೆಯೂ ಕುಂಠಿತವಾಗಿದ್ದು, 4 ವರ್ಷವಾದ ಮೇಲೆ ಮಗು ಬದು­ಕುವುದು ಕಷ್ಟ ಎಂದು ವೈದ್ಯರು ತಿಳಿಸಿ­ದ್ದಾರೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅವರು ತಿಳಿಸಿದರು.ದಾನಿಗಳು ಮಹಾದೇವಪ್ಪ ಉಪ್ಪಿನ (ಮೊ.ನಂ. 87227 37520) ಅವರನ್ನು ಸಂಪರ್ಕಿಸಬಹುದು. ಶ್ಯಾಮರಾವ್ ವಿಠ್ಠಲ ಕೋ-ಆಪ್ ಬ್ಯಾಂಕ್‌ನ ಹುಬ್ಬಳ್ಳಿ ಶಾಖೆಯ ಬ್ಯಾಂಕ್ ಖಾತೆ ಸಂಖ್ಯೆ: 1090 0313 0007 117ಗೆ ಹಣಕಾಸು ನೆರವು ಪಾವತಿಸಬಹುದು.

ಪ್ರತಿಕ್ರಿಯಿಸಿ (+)