ಗೋಣಿಕೊಪ್ಪಲು: ಸುಳ್ಳಿಮಾಡ ಹಾಗೂ ಮಂಡೆಡ ತಂಡದವರು ಇಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಮಚ್ಚಾಮಾಡ ಕಪ್ ಹಾಕಿ ಉತ್ಸವದ ಪಂದ್ಯದಲ್ಲಿ ಟೈಬ್ರೇಕರ್ ಮೂಲಕ ವಿಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.

ಪೊನ್ನಂಪೇಟೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸುಳ್ಳಿಮಾಡ ತಂಡದವರು ಟೈಬ್ರೇಕರ್ನಲ್ಲಿ 4-2 ಗೋಲುಗಳಿಂದ ಮೇವಡ ತಂಡವನ್ನು ಮಣಿಸಿದರು. ಆಟ ನಿಗಧಿಯ ವೇಳೆಗೆ ಉಭಯ ತಂಡದವರು ತಲಾ ಒಂದು ಗೋಲುಗಳಿಸಿದ್ದರು. ಆನಂತರ ವಿಜಯಿಗಳನ್ನು ನಿರ್ಧರಿಸಲು ಟೈಬ್ರೇಕರ್ ನಿಯಮ ಜಾರಿ ಮಾಡಲಾಯಿತು.

ಇದೇ ಟೂರ್ನಿ ಇನ್ನೊಂದು ಪಂದ್ಯದಲ್ಲಿ ಮಂಡೆಡ ಮತ್ತು ಚೋಯಮಾಡಂಡ ತಂಡಗಳು ಆಟ ನಿಗದಿಯ ವೇಳೆಗೆ ತಲಾ ಒಂದು ಗೋಲುಗಳಿಸಿದ್ದರು. ಇದರಿಂದಾಗಿ ವಿಜಯಿಗಳನ್ನು ನಿರ್ಧರಿಸಲು ಟೈಬ್ರೇಕರ್ ನಿಯಮವನ್ನು ಜಾರಿಮಾಡಲಾಯಿತು. ಟೈಬ್ರೇಕರ್ನಲ್ಲಿ ಅದೃಷ್ಟದ ಬೆಂಬಲ ಪಡೆದ ಮಂಡೆಡ ತಂಡ 3-2 ಗೋಲುಗಳ ವಿಜಯ ಸಾಧಿಸಿತು.

ಇತರ ಪಂದ್ಯಗಳಲ್ಲಿ ಜಮ್ಮಾಡ ತಂಡ 3-1 ಗೋಲುಗಳಿಂದ ಬೇರೇರ ತಂಡದ ಮೇಲೂ, ನೆರವಂಡ ತಂಡ 2-0 ಗೋಲುಗಳಿಂದ ಶಾತೆಯಂಡ ವಿರುದ್ಧವೂ, ಕೊಂಗೇಟಿರ ತಂಡ 6-3 ಗೋಲುಗಳಿಂದ ಮೂಡೇರ ಮೇಲೂ, ಬಲ್ಲಚಂಡ ತಂಡ 3-1 ಗೋಲುಗಳಿಂದ ಉದ್ದಪಂಡ ವಿರುದ್ಧವೂ, ಮಚ್ಚಾರಂಡ ತಂಡ 1-0 ಗೋಲಿನಿಂದ ಅಪ್ಪನೆರವಂಡ ಮೇಲೂ, ಮುದ್ದಿಯಡ ತಂಡ 2-1 ಗೋಲುಗಳಿಂದ ಬಲ್ಯಮೀದೇರಿರ ವಿರುದ್ಧವೂ, ಅಲ್ಲಪಂಡ ತಂಡ 4-1 ಗೋಲುಗಳಿಂದ ಅಚ್ಚಪಂಡ ಮೇಲೂ, ಕೊಂಗಾಂಡ ತಂಡ 2-0 ಗೋಲುಗಳಿಂದ ನೆಲಜ್ಜಿ ಮಂಡಿರ ತಂಡದ ವಿರುದ್ಧವೂ ಜಯ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.