ಶುಕ್ರವಾರ, ಮೇ 27, 2022
25 °C

ಮಡಿಕೇರಿ: ಕಾಡುಪಾಪ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ:  ನಗರದ ‘ಸ್ಟೋನ್ ಹಿಲ್’ ಬಳಿ ಗುರುವಾರ ಅಪರೂಪದ ‘ಸ್ಲೆಂಡರ್ ಲಾರಿಸ್’ ಕಾಡುಪಾಪ ಕಾಣಿಸಿಕೊಂಡಿದ್ದು ಅದನ್ನು ರಕ್ಷಿಸಲಾಗಿದೆ. ‘ಸ್ಟೋನ್ ಹಿಲ್’ ಬಳಿ ಕಾಡಿಗೆ ಈಚೆಗೆ ಬೆಂಕಿ ಬಿದ್ದಿದ್ದರಿಂದ ಪ್ರಾಣ ರಕ್ಷಣೆಗಾಗಿ ಇದು ಈಚೆಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಸ್ಥಳಕ್ಕೆ ತೆರಳಿದ್ದಾಗ ಸ್ಥಳೀಯರೊಬ್ಬರು ಅದನ್ನು  ಒಪ್ಪಿಸಿದರು. ಅಗ್ನಿಶಾಮಕ ಸಿಬ್ಬಂದಿ ಈ ಕಾಡುಪಾಪವನ್ನು ಅರಣ್ಯ ಇಲಾಖೆಗೆ ನೀಡಿದರು. ಕಾಲುಗಳು ಸ್ವಲ್ಪ ಸುಟ್ಟಿದ್ದು ಅಪರೂಪದ ‘ಅತಿಥಿ’ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಪಶುಪಾಲನಾ ಇಲಾಖೆಯ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದರು. ಅದು ಚೇತರಿಸಿಕೊಂಡ ನಂತರ ಅರಣ್ಯ ಭವನದ ಬಳಿಯ ಕಾಡಿಗೆ ಬಿಡಲಾಯಿತು.ರಾತ್ರಿ ವೇಳೆ ಮಾತ್ರ ಚುರುಕಾಗಿರುವ ಈ ಕಾಡುಪಾಪಗೆ ಹಗಲಿನ ವೇಳೆ ಕಣ್ಣು ಕಾಣುವುದಿಲ್ಲ. ಕೊಡಗಿನ ಪುಷ್ಪಗಿರಿ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಲ್ಲಿ ಇಂತಹ ಅಪರೂಪದ ‘ಸ್ಲೆಂಡರ್ ಲಾರಿಸ್’ ಕಾಡುಪಾಪಗಳು ಕಾಣ ಸಿಗುತ್ತವೆ. ಈ ಕಾಡುಪಾಪವನ್ನೇ ಪುಷ್ಪಗಿರಿ ವನ್ಯಜೀವಿ ವಿಭಾಗದ ‘ಲೋಗೋ’ವನ್ನಾಗಿ ಬಳಸಿಕೊಂಡಿರುವುದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.