ಮಣ್ಣೆತ್ತಿನ ಅಮಾವಾಸ್ಯೆ: ವಿವಿಧ ಸ್ಪರ್ಧೆ ಇಂದು

ರಾಯಚೂರು: ಇಲ್ಲಿನ ರಾಜೇಂದ್ರ ಗಂಜ್ ಹಮಾಲರ, ರೈಸ್ಮಿಲ್ ಹಾಗೂ ಇಂಡಸ್ಟ್ರಿಯಲ್ ಪ್ರದೇಶದ ಹಮಾಲರ ಸಂಘ ಹಾಗೂ ಗಂಜ್ ಕಸಗೂಡಿಸುವ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಜುಲೈ 9ರಂದು ಬೆಳಿಗ್ಗೆ 9ಗಂಟೆಗೆ ಹಮಾಲರಿಗೆ 110 ಕೆಜಿ ಹೊತ್ತು ನಡೆದಾಡುವ ಸ್ಪರ್ಧೆ, ಕಸಗೂಡಿಸುವ ಮಹಿಳೆಯರಿಗೆ ಎರಡು ಕೈಯಲ್ಲಿ 10-10ಕೆಜಿಯಂತೆ ಭಾರದ ಕಲ್ಲು ಹೊತ್ತು ನಡೆದಾಡುವ ಸ್ಪರ್ಧೆ ನಡೆಯಲಿದೆ.
ಸಾನ್ನಿಧ್ಯವನ್ನು ಮುನ್ನೂರುಕಾಪು ಸಮಾಜದ ಶೂನ್ಯಸಿಂಹಾಸನ ಪೀಠದ ಸದ್ಗುರು ಶರಣ ತಿಪ್ಪೇಶ್ವರ ಸ್ವಾಮಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಪಾಪಾರೆಡ್ಡಿ ನೆರವೇರಿಸಲಿದ್ದಾರೆ. ಅಧ್ಯಕ್ಷ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್ ಈರಣ್ಣ(ಲಾಲಪ್ಪ) ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಶಿವರಾಜ ಪಾಟೀಲ್ ಆಗಮಿಸಲಿದ್ದಾರೆ.
ಸಂಜೆ 6ಗಂಟೆಗೆ ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಾನ್ನಿಧ್ಯವನ್ನು ಮುನ್ನೂರುಕಾಪು ಸಮಾಜದ ಶೂನ್ಯಸಿಂಹಾಸನ ಪೀಠದ ಸದ್ಗುರು ಶರಣ ತಿಪ್ಪೇಶ್ವರ ಸ್ವಾಮಿ ವಹಿಸಲಿದ್ದಾರೆ.
ಉದ್ಘಾಟನೆ ಮುನ್ನೂರು ಕಾಪು ಸಮಾಜದ ಕ್ರೀಡಾಧ್ಯಕ್ಷ ಪುಂಡ್ಲ ನರಸರೆಡ್ಡಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್ ಈರಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಬಸವರಾಜರೆಡ್ಡಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.